ಪೆಸಿಟ್ ಕಾಲೇಜ್ ನಲ್ಲಿ ಮಹಿಳಾ ಸಬಲೀಕರಣ ಕೋಶದ ವತಿಯಿಂದ ಅಂತರ ರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶ್ರೀಮತಿ ಜಯಶ್ರೀ ಎಸ್ ಮಾನೆ, ಪೊಲೀಸ್ ವೃತ್ತ ನಿರೀಕ್ಷಕರು ಶಿವಮೊಗ್ಗ ಸಂಚಾರ ವೃತ್ತ ರವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಹಾಜರಿದ್ದವರಿಗೆ ಸಾರ್ವಜನಿಕ ವಲಯದಲ್ಲಿ ಮಹಿಳೆಯರ ಪಾತ್ರ ಮತ್ತು ಅವರುಗಳಿಗೆ ಇರುವಂತಹ ಅವಕಾಶಗಳು ಹಾಗೂ ಸವಾಲುಗಳ ಬಗ್ಗೆ ಹಾಗೂ ಪೋಕ್ಸೋ ಕಾಯ್ದೆ, ಕೌಟುಂಬಿಕ ದೌರ್ಜನ್ಯ ಕಾಯ್ದೆ, 354 ಐಪಿಸಿ, ಆಸಿಡ್ ದಾಳಿ, ಸಖಿ ಕೇಂದ್ರದ ಬಗ್ಗೆ ಮಾಹಿತಿಯನ್ನು ನೀಡಿ, ಮಹಿಳೆಯರು ಯಾವುದೇ ತುರ್ತು ಸಂದರ್ಭದಲ್ಲಿ 112 ERSS ತುರ್ತು ಸಹಾಯವಾಣಿಗೆ ಅಥವಾ ಹತ್ತಿರದ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಸಹಾಯವನ್ನು ಪಡೆಯಬಹುದಾಗಿರುತ್ತದೆ ಎಂದು ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ಶ್ರೀಮತಿ ವಿನ್ಯಾಸ ಹಿಪ್ಲ ಗೌಡ, ಉದ್ಯಮಿ ಮತ್ತು ಫಿಟ್ನೆಸ್ ತರಬೇತುದಾರರು ಬೆಂಗಳೂರು, ಡಾ. ಚೈತನ್ಯ ಕುಮಾರ್ ಎಂವಿ, ಪ್ರಾಂಶುಪಾಲರು, PESITM ಕಾಲೇಜು ಶಿವಮೊಗ್ಗ, ಡಾಕ್ಟರ್ ನಾಗರಾಜ್ ಆರ್, ಸಿಎಎ, PESITM ಕಾಲೇಜು ಶಿವಮೊಗ್ಗ, ಮತ್ತು ಶ್ರೀಮತಿ ರಮ್ಯಾ ಸಿ ಆರ್, ಅಧ್ಯಕ್ಷರು ಮಹಿಳಾ ಸಬಲೀಕರಣ ಕೋಶ, PESITM ಕಾಲೇಜು ಶಿವಮೊಗ್ಗ ಮತ್ತು ಶ್ರೀಮತಿ ಯಗ್ನೋದ್ಭವಿ ಸಂಯೋಜಕೋರು ಮಹಿಳಾ ಸಾಬಲಿಕರಣ ಕೋಶ PESITM ಕಾಲೇಜು ಶಿವಮೊಗ್ಗ ರವರು ಉಪಸ್ಥಿತರಿದ್ದರು
.