ರಾಮಣ್ಣ ಶ್ರೇಷ್ಠಿಪಾರ್ಕ್ ಶಿವಮೊಗ್ಗ, ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಚನ್ನವೀರಪ್ಪ ಗಾಮನಗಟ್ಟಿ ರವರು ಇಂದು ನಗರದಲ್ಲಿ ಬೀದಿ ಬದಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗಳಿಗೆ ಭೇಟಿ ಮಾಡಿ ಕುಂದು ಕೊರತೆಗಳ ಬಗ್ಗೆ ವಿಚಾರಿಸಿದರು.ಕಲವರು ನಾವುಗಳು ಹಲವು ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದು ಮನೆ ಬಾಡಿಗೆ ಹಲವು ಸಂಘಗಳ ಸಾಲ ಈಗ ವ್ಯಾಪಾರ ವಿಲ್ಲ, ನಮಗೆ ಲಾಕ್ ಡೌನ್ ನಿಂದ ಬಹಳ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿರುವೇವೂ. ಸರ್ಕಾರ ನಮಗೆ ಆಹಾರ ಕಿಟ್ ನೊಂದಿಗೆ ಸಹಾಯಧನ ನೀಡಬೇಕು ಎಂದರು.ಪಾಲಿಕೆ ನೀಡಿದ ಆಹಾರ ಕಿಟ್, ಸರ್ಕಾರ ನೀಡಿದ ಸಹಾಯ ಧನ ಸಿಕ್ಕಿಲ್ಲ, ಗುರುತಿನ ಚೀಟಿ ಪಡೆದ ನಮಗೂ ಸರ್ಕಾರ ಸಹಾಯ ಧನ ನೀಡಬೇಕು ಎಂದರು. ಬೀದಿ ಬದಿ ಗುರುತಿನ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದು ಇದುವರೆಗೂ ಗುರುತಿನ ಚೀಟಿ ಸಿಕ್ಕಿಲ್ಲ ಎಂದರು.ಸ್ವ ನಿಧಿ ಯೋಜನೆ ಅಡಿ ಅರ್ಜಿ ಸಲ್ಲಿಸಿದ್ದು ಸಾಲ ಬಂದಿಲ್ಲ, ಇನ್ನೂ ಹಲವು ತಿಂಡಿಗಾಡಿಗಳಿಗೆ ಫುಡ್ ಸೆಪ್ಟಿ ಪ್ರಮಾಣ ಪತ್ರ ಸಿಕ್ಕಿಲ್ಲ ಎಂದರು.ನಮಗೆ ಗುರುತಿನ ಚೀಟಿ ಇದ್ದು ಕಳೆದ ಬಾರಿ ಬಂದ ಪ್ರವಾಹದಲ್ಲಿ ನಮ್ಮ ಎಲ್ಲಾ ದಾಖಲೆಗಳು ನಾಶವಾಗಿದೆ ಜೋತೆಗೆ ಗುರುತಿನ ಚೀಟಿಯು ಕೊಚ್ಚಿ ಹೋಗಿದೆ ನಮಗೆ ನಕಲು ಬೀದಿ ಬದಿ ವ್ಯಾಪಾರಿ ಗುರುತಿನ ಚೀಟಿ ನೀಡಲು ಕೊರಿಕೊಂಡರು.ಇವರಿಗೆ ತಿಂಡಿ ಗಾಡಿ, ತರಕಾರಿ, ಹಣ್ಣು ಹಂಪಲು, ಸೊಪ್ಪು ಇತರೆ ವ್ಯಾಪಾರಿಗಳ ಉಳಿತಾಯ ಸ್ವ ಸಹಾಯ ಸಂಘಗಳ ರಚನೆ ಮಾಡಲು ತಿಳಿಸಲಾಗಿತ್ತು.
ಈ ಸಂದರ್ಭದಲ್ಲಿ ವಲಯದ ಅಧ್ಯಕ್ಷರಾದ ಶ್ರೀ ಮತಿ ಸವಿತ ರವರು ಹಾಗೂ ಶಿವಪ್ಪ ನಾಯಕ ವೃತ್ತ, ಗಾಂಧಿ ಬಜಾರ್, ಬಸವೇಶ್ವರ ದೇವಾಲಯ, ಎಸ್ಪಿಎಂ ರಸ್ತೆ, ಮಾರಿಕಾಂಬಾ ದೇವಾಲಯ, ಕೋಟೆ ವೃತ್ತದ ಬೀದಿ ಬದಿ ವ್ಯಾಪಾರಿಗಳ ಘಟಕದ ಅಧ್ಯಕ್ಷರು ಹಾಗೂ ಬೀದಿ ಬದಿ ವ್ಯಾಪಾರಿಗಳು ಉಪಸ್ಥಿತರಿದ್ದರು.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ
CCTV SALES & SERVICE
9880074684
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153