ಆನವಟ್ಟಿ: ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಎಸ್.ಮಧು ಬಂಗಾರಪ್ಪ ಅವರು ಸೋಮವಾರ ಸ್ವಗ್ರಾಮವಾದ ಕುಬಟೂರಿನಲ್ಲಿ ಮನೆ-ಮನೆಗೆ ತೆರಳಿ, ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಿಜೆಪಿ ಸರ್ಕಾರದ ತೆರಿಗೆ ಭಾರ ಜನಸಾಮಾನ್ಯರಿಗೆ ಹೊರಲಾರದಷ್ಟು ಭಾರವಾಗಿ ಪರಿಣಮಿಸಿದೆ. ಕೂಲಿ-ಕಾರ್ಮಿಕರಿಗೆ ನರೇಂದ್ರ ಮೋದಿ ಕೆವಲ ಒಂದು ತಿಂಗಳು ಮಾತ್ರ ಸಿಲೆಂಡರ್ ಗ್ಯಾಸ್ ಉಚಿತ ನೀಡಿ, ನಂತರ ಪೂರ್ತಿ ಬಿಲ್ ಪಾವತಿಸುವಂತೆ ಮಾಡಿದ ಪರಿಣಾಮ ಈಗ ಅಡುಗೆ ಸಿಲೆಂಡರ್ ಬೆಲೆ 1200 ರೂಪಾಯಿ ಆಗಿದೆ. ವಿದ್ಯುತ್ ಸೇರಿದಂತೆ ಆಗತ್ಯ ವಸ್ತುಗಳ ಬೆಲೆ ನಿತ್ಯ ಏರಿಕೆ ಆಗುತ್ತಿರುವುದರಿಂದ ಜನಸಾಮಾನ್ಯರು ಬದುಕು ನಡೆಸುವುದು ಕಷ್ಟವಾಗಿದೆ. ನಿತ್ಯ ಮಹಿಳೆ ಕಣ್ಣೀರು ಹಾಕುವುದೇ ಮೋದಿ ಪ್ರಕಾರ ಅಚೆದಿನ್ ಇರಬೇಕು ಎಂದು ಛೇಡಿಸಿದರು.
ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ, ಜನಸಾಮಾನ್ಯರು ಹಾಗೂ ಕೃಷಿಕರ ಕಷ್ಟ ಅರಿತು, ಜನರು ಕೇಳುವ ಮೊದಲೇ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಿದರು. ಇನ್ನೂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನೇತೃತ್ವ ಅವರ ಸಹಿಯೊಂದಿಗೆ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಹೇಳಿರುವ ಘೋಷಣೆಗಳನ್ನು ಪಕ್ಷ ಅಧಿಕಾರಕ್ಕೆ ಬಂದ ದಿನದಿಂದ ಈಡೇಸುವ ಭರವಸೆಯೊಂದಿಗೆ ಮನೆ-ಮನೆಗೆ ಗ್ಯಾರಂಟಿ ಕಾರ್ಡ್ ವಿತರಿಸುತ್ತೀರುವುದರಿಂದ ಶೇ 100 ರಷ್ಟು ನಂಭಿಕೆಯನ್ನು ಮತದಾರರು ಕಾಂಗ್ರೆಸ್ ಮೇಲೆ ಇರಿಸಿದ್ದಾರೆ ಎಂದರು.
ರಾಜ್ಯದ ಬಹಳಷ್ಟು ಕುಟುಂಬಗಳ ನಿರ್ವಹಣೆ ಮಹಿಳೆಯರೇ ನಿರ್ವಹಿಸುವುದರಿಂದ, ಅವರಿಗೆ ಬಲ ನೀಡುವ ದೃಷ್ಟಿಕೋನ ಇರಿಸಿಕೊಂಡು ಮನೆ ಯಜಮಾನಿಗೆ 2000 ರೂಪಾಯಿ ಕೂಡುವ ಗೃಹಲಕ್ಷ್ಮಿ ಯೋಜನೆ ಕಾಂಗ್ರೆಸ್ ಪಕ್ಷ ಹಾಕಿಕೊಂಡಿದೆ. ನಿರಂತರ ವಿದ್ಯುತ್ ಸ್ಥಗಿತದಿಂದ ವಿದ್ಯಾರ್ಥಿಗಳು ಪರೀಕ್ಷೆ ಸಮಯದಲ್ಲಿ ಚನ್ನಾಗಿ ಓದುಕೊಳ್ಳಲು ಸಾಧ್ಯವಾಗುವುದಿಲ್ಲ. ಎಷೋ ಮನೆಗಳಲ್ಲಿ ವಿದ್ಯುತ್ ಸೌಲಭ್ಯವೇ ಇಲ್ಲ. ಇತಂಹ ಮನೆಗಳ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗುವುದಕ್ಕೆ ತಿಂಗಳಿಗೆ 200 ಯುನಿಟ್ ವಿದ್ಯುತ್ ಉಚಿತ ಗೃಹ ಜ್ಯೋತಿ ಯೋಜನೆಯನ್ನು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ ಎಂದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿoದ ಹುಸಿ ಭರವಸೆಗಳನ್ನೇ ನೀಡುತ್ತಿದೆ ಹೊರತು. ಯಾವುದನ್ನು ಈಡೇರಿಸಿಲ್ಲ. ಶೇ 40 ಕಮಿಷನ್ ಕೊಳ್ಳೆ ಹೊಡೆಯುವುದಕ್ಕಾಗಿ ರಸ್ತೆ ಕಾಮಗಾರಿಗಳನ್ನು ಮಾತ್ರ ಮಾಡುತ್ತಿದೆ. ರಾಜ್ಯ ಬಜೆಟ್ 3.17ಲಕ್ಷ ಕೋಟಿಯಲ್ಲಿ, ಶೇ 40 ಅಂದರೆ 1.20 ಲಕ್ಷ ಕೋಟಿ ಹಣವನ್ನು ಬಿಜೆಪಿ ಸರ್ಕಾರ ಕಮಿಷನ್ ಹೊಡೆಯುತ್ತಿದೆ. ಹೀಗೆ ಕಮಿಷನ್ ರೂಪದಲ್ಲಿ ಹೋಗುತ್ತಿರುವ ಹಣವನ್ನು ಉಳಿಸಿ, ಜನಸಾಮಾನ್ಯರಿಗೆ ನಾವು ಹೇಳಿರುವ ಗ್ಯಾರಂಟಿ ಯೋಜನೆಗಳನ್ನು ಈಡೇರಿಸುತ್ತಿವೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಬೂತ ಅಧ್ಯಕ್ಷ ಹೊಳೆಲಿಂಗಪ್ಪ, ಮುಖಂಡರಾದ ಉದಯಕುಮಾರ್, ಪಿ.ಎಸ್.ಮಂಜುನಾಥ, ರವಿಕಿರಣ, ಉಮೇಶ, ನಿಂಗಪ್ಪ, ಸಂಜೀವ ತರಕಾರಿ, ಹಬಿಬುಲ್ಲಾ ಹವಾಲ್ದಾರ್, ಕೋಟಿ, ನವೀನ್ , ಗಿರೀಶ್ ಇದ್ದರು.