ಆಯುಷ್ಮ ಭಾರತ ಆರೋಗ್ಯ ಕರ್ನಾಟಕ ಯೋಜನೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಜನ ಪರ ಕಾಳಜಿಯ ಯೋಜನೆಯಾಗಿದ್ದು ನಗದು ವ್ಯವಹಾರ ಇಲ್ಲದೆ ಬಡವರು ದಿನ ದಲಿತರು ಹಿಂದುಳಿದ ವರ್ಗದವರ ಕಲ್ಯಾಣಕ್ಕಾಗಿ ಅಥವಾ ಆರೋಗ್ಯ ಸುರಕ್ಷತೆಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯ ವ್ಯಾಪ್ತಿಯಲ್ಲಿ ಒಳಪಟ್ಟಿರುವ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆಯಬಹುದಾಗಿದೆ ಮಂಜುನಾಥ ನಾಯಕ ಹನುಮಸಾಗರ ಹೊನ್ನಾಳಿ ತಾಲೂಕು ನಾನು ನನ್ನ ಮಗು ಮೂರು ತಿಂಗಳ ಮಗುವಿನ ಚಿಕಿತ್ಸೆಗೆ ಸರ್ಜಿ ಆಸ್ಪತ್ರೆ ಶಿವಮೊಗ್ಗ ಇಲ್ಲಿ ದಾಖಲೆ ಮಾಡಿದ್ದು ನನ್ನಿಂದ ಹಣವನ್ನು ಪಡೆದಿದ್ದಾರೆ ಎ ಬಿ ಆರ್ ಕೆ ಯೋಜನೆ ಮಾಹಿತಿ ಅಥವಾ ವಿವರಣೆಯನ್ನು ನೀಡಲು ಸ್ಥಳೀಯವಾಗಿ ಆರೋಗ್ಯ ಮಿತ್ರ ಒಬ್ಬರಿರಬೇಕಾಗಿದ್ದು ಯಾರು ನನಗೆ ಮಾಹಿತಿಯನ್ನು ನೀಡಿಲ್ಲ ನನಗೆ ಯೋಜನೆಯ ಮಾಹಿತಿ ತಿಳಿದು ದಾಖಲಾತಿಗಳನ್ನು ನೀಡದೆ ಸುಮಾರು 75,000 ಗಳಷ್ಟು ಹಣವನ್ನು ನನ್ನಿಂದ ಪಡೆದಿದ್ದಾರೆ ನನಗೆ ಆಗಿರು ಅನ್ಯಾಯಕ್ಕೆ ನ್ಯಾಯವನ್ನು ಕೊಡಿಸುವಂತೆ ಸುವರ್ಣ ಆರೋಗ್ಯ ಅವರಿಗೆ ದೂರು ನೀಡಲಾಗಿದ್ದು ಒಂದು ವರ್ಷಗಳ ಅವಧಿ ಪೂರ್ಣಗೊಂಡರು ಇಂದಿನವರೆಗೂ ಸೂಕ್ತ ಕ್ರಮವನ್ನು ಕೈಗೊಂಡಿಲ್ಲ ಎಂದರು.

ಮತ್ತು ನನಗೆ ಆಗಿರು ಅನ್ಯಾಯ ಇನ್ಯಾರಿಗೂ ಆಗಬಾರದೆಂದು ಸಾಮಾಜಿಕ ಕಳಕಳಿಯಿಂದ ಸುವರ್ಣ ಆರೋಗ್ಯ ಟ್ರಸ್ಟ್ ಇವರಿಗೆ ಮಾಹಿತಿಯನ್ನು ಕೋರಿದ್ದು ಯೋಜನೆ ಪ್ರಾರಂಭದಿಂದ ಹಿಂದಿನವರೆಗೂ 1500 ರಿಂದ 2,000 ಜನರ ಚಿಕಿತ್ಸೆಯನ್ನು ಪಡೆದಿದ್ದಾರೆ ಆದರೆ ಸುವರ್ಣ ಆರೋಗ್ಯ ಟ್ರಸ್ಟ್ ನಿಂದ ಕೇವಲ 33 ಜನರಿಗೆ ಮಾತ್ರ ಕಾಲ್ ಸೆಂಟರ್ ನಿಂದ ಕರೆ ಮಾಡಿದ್ದಾರೆ ಈ ಅಂಶಗಳ ಆಧಾರದ ಮೇಲೆ ಸುವರ್ಣ ಆರೋಗ್ಯ ಟ್ರಸ್ಟ್ ಖಾಸಗಿ ಆಸ್ಪತ್ರೆಗಳಿಗೆ ಜನರಿಂದ ಹಣವನ್ನು ವಸೂಲಿ ಮಾಡಲು ಪರೋಕ್ಷವಾಗಿ ಅವಕಾಶ ಮಾಡಿಕೊಟ್ಟಿದ್ದು ಎಂದು ಆರೋಪಿಸಿದರು.

ಸರ್ಜಿ ಶಿವಮೊಗ್ಗ ಆಸ್ಪತ್ರೆಯಿಂದ ಹಣ ವಸೂಲಿ ಮಾಡಲಾಗುತ್ತಿದ್ದು ಒಂದು ರೋಗಿಗೆ ಕನಿಷ್ಠ ಐವತ್ತು ಸಾವಿರಗಳಂತೆ ಒಟ್ಟು ಸುಮಾರು 6:30 ಕೋಟಿ ಹಣವನ್ನು ಸುಲಿಗೆ ಮಾಡಿದ್ದಾರೆ ಎಂಬುದು ದಾಖಲಾತಿಗಳಿಂದ ದೃಢಪಟ್ಟಿದೆ ವಂಚಿತರಿಗೆ ಹಣವನ್ನು ಹಿಂದಿರುಗಿಸಲು ಸೂಕ್ತ ಕ್ರಮ ಜರುಗಿಸುವಂತೆ 6-7-22 ರಂದು ದೂರು ನೀಡಲಾಗಿದೆ ಇದುವರೆಗೂ ಯಾವುದೇ ಕ್ರಮವನ್ನು ಜರುಗಿಸುವುದಿಲ್ಲ ಜಿಲ್ಲಾಧಿಕಾರಿಗಳ ಮೂಲಕ ಸುವರ್ಣ ಆರೋಗ್ಯ ಟ್ರಸ್ಟ್ ಇವರಿಗೆ ಪುನಃ ದೂರ ನೀಡಲಾಗಿದ್ದು ಕಾಲ್ ಸೆಂಟರ್ ನಿಂದ ಕರೆ ಮಾಡಿ ಪೋಷಕರನ್ನು ಎದುರಿಸದೆ ಶಿವಮೊಗ್ಗದಲ್ಲಿ ಪತ್ರಿಕೆ ಪ್ರಕಟಣೆ ನೀಡಿ ಫಲಾನುಭವಿಗಳಿಗೂ ದಾಖಲೆಗಳನ್ನು ನೀಡಿ ಮತ್ತು ದೂರನ್ನು ಜಿಲ್ಲಾ ಸಂಯೋಜಕರಿಗೆ ದೂರು ನೀಡುವಂತೆ ಹತ್ತು ದಿನದೊಳಗೆ ಕ್ರಮ ಜರುಗಿಸಬೇಕೆಂದು ಕೋರಿದರು ವಿಳಮ್ಮ ಮಾಡಿದ್ದಲ್ಲಿ 11ನೇ ದಿನಕ್ಕೆ ನಾವೇ ಖುದ್ದು ತನಿಖೆ ಸಂಸ್ಥೆ ತಮ್ಮ ವಿರುದ್ಧ ದೂರು ನೀಡಲಾಗುವುದು ಎಂದರು ಎಂದರು.

ಸುದ್ದಿಗೋಷ್ಠಿಯಲ್ಲಿ ಮಂಜುನಾಥ ನಾಯ್ಕ್ ಹನುಮಸಾಗರ್ ಹೊನ್ನಾಳಿ ತಾಲೂಕು ಸುರೇಶ್ ನಾಯ್ಕ್ ಸಂತೋಷ್ ನಾಯ್ಕ್ ಹನುಮಸಾಗರ ಮುಂತಾದವರು ಉಪಸ್ಥಿತರಿದ್ದರು.

ವರದಿ: ಸುರೇಶ್ ಬಿ ಎಸ್…