ಶಿವಮೊಗ್ಗ ನಗರದಲ್ಲಿ ಜಗಜ್ಯೋತಿ ಬಸವೇಶ್ವರ ಪ್ರತಿಮೆಯನ್ನು ಬಸವೇಶ್ವರ ವೃತ್ತದಲ್ಲಿ ಸ್ಥಾಪಿಸಲು ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದ್ದು ಇದರ ವಿಚಾರವಾಗಿ ಹೆಚ್ ಸಿ ಯೋಗೇಶ್ ಅವರ ನೇತೃತ್ವದಲ್ಲಿ 2013-18 ನೇ ಸಾಲಿನ ಮಹಾನಗರಪಾಲಿಕೆ ಸದಸ್ಯರು ಮಹಾಪೌರರು ಹಾಗೂ ಉಪ ಮಹಾಪೌರರು ಜೊತೆಗೂಡಿ ಸುದ್ದಿಗೋಷ್ಠಿ ನಡೆಸಿ,
*ಶೀಘ್ರವೇ ಪುತ್ತಳಿ ಅನಾವರಣಗೊಳ್ಳಬೇಕು,

  • ಶಿವಮೊಗ್ಗ ನಗರಕ್ಕೆ ಬಸವೇಶ್ವರ ಪುತ್ಥಳಿಯನ್ನು ಉಡುಗೊರೆಯಾಗಿ ನೀಡಿದ ಡಾಕ್ಟರ್ ನೀರಜ್ ಪಾಟೀಲ್ ರವರನ್ನು ಆಹ್ವಾನಿಸಬೇಕು,
  • ಪುತ್ತಳಿ ಅನಾವರಣವನ್ನು ಧಾರ್ಮಿಕ ಕಾರ್ಯಕ್ರಮವನ್ನಾಗಿ ನೆರವೇರಿಸಬೇಕು,
  • ಶಿವಮೊಗ್ಗ ನಗರದ ಎಲ್ಲಾ ಸಮಾಜದ ಪೂಜ್ಯ ಗುರುಗಳು ಹಾಗೂ ಮುಖಂಡರುಗಳನ್ನು ಆಹ್ವಾನಿಸಿ ಅದ್ದೂರಿಯಾಗಿ ಪುತ್ಥಳಿ ಅನಾವರಣ ಕಾರ್ಯಕ್ರಮ ನಡೆಸಬೇಕು,
  • ಪುತ್ತಳಿ ಅನಾವರಣದ ವಿಚಾರವಾಗಿ ಸಮಿತಿಯನ್ನು ರಚಿಸಿ ನಗರದ ಪ್ರತಿ ಸಮಾಜದ ಪ್ರಮುಖರು ಹಾಗೂ ಪಕ್ಷಾತೀತವಾಗಿ ಮಹಾನಗರ ಪಾಲಿಕೆ ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಬೇಕು.
    ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ನಾಗರಾಜ್ ಕಂಕಾರಿ, ಶಮೀರ್ ಖಾನ್, ಮಹಾನಗರ ಪಾಲಿಕೆ ಮಾಜಿ ಮಹಾಪೌರರಾದ ಏಳು ಮಲೆ ಬಾಬು, ಮಾಜಿ ಉಪ ಮಹಾಪೌರರಾದ ಪಾಲಾಕ್ಷಿ, ವಿಜಯಲಕ್ಷ್ಮಿ ಸಿ ಪಾಟೀಲ್, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ವಿಶ್ವನಾಥ್ ಕಾಶಿ, ನೂರುಲ್ಲಾ ಇದ್ದರು.
  • ಮಾಡುತ್ತಿದೆ
  • ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ