ಆನೆಯೊಂದು ಸೊಂಡಿಲಿನಿಂದ ಒಂದು ಮರವನ್ನೇ ಬೇರು ಸಮೇತ ಕಿತ್ತು ಒಗೆಯಬಲ್ಲದು. ಆದರೆ ಅದು ಚಿಕ್ಕಂದಿನಿಂದಲೂ ಬಂಧನದಲ್ಲಿಯೇ ಬೆಳೆದಿರುತ್ತದೆ, ಒಂದು ಹಗ್ಗವೋ ಅಥವಾ ಸಂಕೋಲೆಯಿಂದ ಪ್ರತಿದಿನ ಆದಂನ್ನೊಂದು ಮರಕ್ಕೆ ಕಟ್ಟಿಬಿಡುತ್ತಾರೆ. ನಮಗೆಲ್ಲರಿಗೂ ತಿಳಿದಿರುವಹಾಗೆಯೇ ಆನೆ ಸ್ವಭಾವತಃ ಸ್ವತಂತ್ರ ಜೀವಿಯಾಗಿರಲು ಇಚ್ಛೆಸುತ್ತದೆ, ಹಾಗೆಯೇ ಒಂದು ಮರಿ ಮರಿ ಆನೆಯೂ ಸಹ ಸಹಜವಾಗಿಯೇ ತನ್ನನ್ನು ಕಟ್ಟಿರುವ ಹಗ್ಗದಿಂದ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತದೆ, ಆದರೆ ಅದಿನ್ನೂ ಮರಿ ಆನೆ ಆಗಿರುವುದರಿಂದ ಹಗ್ಗವನ್ನು ಹರಿದುಕೊಳ್ಳಲಾಗಲಿ ಅಥವಾ ಮರವನ್ನು ಬುಡಮೇಲು ಮಾಡಲಾಗಲಿ ಆಗುವುದಿಲ್ಲ, ಏಕೆಂದರೆ ಅದು ಅಷ್ಟು ಶಕ್ತಿಯುತವಾಗಿರುವುದಿಲ್ಲ. ಹೀಗೆ ಪುನಃ ಪುನಃ ಬಿಡುಗಡೆಗಾಗಿ ಪ್ರಯತ್ನಿಸಿ ಸೋತ ಮರಿ ಆನೆ ಕೊನೆಗೆ ತನ್ನ ಎಲ್ಲಾ ಪ್ರಯತ್ನಗಳಿಂದ ಏನೂ ಆಗುವುದಿಲ್ಲ ಎಂದು ಅರಿತು ಮತ್ತೆ ಪ್ರಯತ್ನ ಮಾಡುವುದನ್ನೇ ಮರೆತುಬಿಡುತ್ತದೆ.
ಹೀಗೆ ಸೋತ ಈ ಮರಿ ಆನೆ ಮುಂದೆ ಎಂದೂ ಸಹ ತನ್ನ ಜೀವನದಲ್ಲಿ ಎಂದೂ ಒಂದು ಮರಕ್ಕೆ ಕಟ್ಟಲ್ಪಟ್ಟಾಗ ಅದರಿಂದ ಬಿಡುಗಡೆ ಪಡೆಯುವ ಒಂದು ಸಣ್ಣ ಯೋಚನೆಯೂ ಸಹ ಮಾಡುವುದಿಲ್ಲ. ಈಗ ಇಂತಹ ಆನೆಯನ್ನು ಒಂದು ಸಣ್ಣ ಹಗ್ಗದಿಂದ ಸಣ್ಣ ಮರಕ್ಕೆ ಕಟ್ಟಿ ಬಂಧಿಸಿ ಇಡಬಹುದು. ಈಗ ಈ ಮರಿ ಆನೆ ಬೆಳೆದು ದೊಡ್ಡದಾದಾಗ ಬಿಡುಗಡೆಯಾಗಲು ಪ್ರಯತ್ನಿಸಿದಲ್ಲಿ ಅದು ತನ್ನ ಬಂಧನದ ಹಗ್ಗದಿಂದ ಬಿಡುಗಡೆಯಾಗಬಲ್ಲದು, ಅಥವಾ ಆ ಮರವನ್ನೇ ತನ್ನ ಸೊಂಡಿಲಿನಿಂದ ಕಿತ್ತು ಬುಡಮೇಲುಮಾಡಿ ಒಗೆಯಬಲ್ಲದು,ಅದಾಗ್ಯೂ ಆ ಆನೆಯು ತನ್ನ ಹಿಂದಿನ ಸೋತ ಪ್ರಯತ್ನವನ್ನು ನೆನಪಿಸಿಕೊಂಡು ಸ್ವಾತಂತ್ರದತ್ತ ಯಾವ ಒಂದು ಸಣ್ಣ ಪ್ರಯತ್ನವೂ ಸಹ ಮಾಡಲು ಇಚ್ಛೆಸುವುದಿಲ್ಲ.
ಹೀಗೆ ಒಂದು ಮಹಾ ಶಕ್ತಿಯುತ ಹಾಗೂ ದೊಡ್ಡಗಾತ್ರದ ಆನೆಯು ತನ್ನ ಶಕ್ತಿಯನ್ನೇ ಮಿತಿಗೋಳಿಸಿಕೊಂಡುಬಿಡುತ್ತದೆ…..ಹೀಗೆ ನಾವೂ ಸಹ ಹೆಚ್ಚಿನ ಅಂಶ ಈ ಮರಿ ಆನೆಯ ಬುದ್ಧಿಮಟ್ಟದಲ್ಲಿಯೇ ಉಳಿದಿರುತ್ತೇವೆ.ಅದಾಗ್ಯೂ ನಾವುಗಳು ಇಂತಹ ಸುಳ್ಳು ಮಿತಿಗಳನ್ನು ಆಯ್ಕೆಮಾಡಿಕೊಳ್ಳಲು ಇರದಿರುವುದನ್ನು ನಾವು ಈ ಮೂಲಕ ಕಲಿಯಬಹುದು.
ಕಳೆದು ಹೋದ ಇಂತಹದ್ದೇ ಘಟನೆಗಳೂ ಸಹ ನಿಮ್ಮ ಭವಿಷ್ಯವನ್ನು ಮಿತಿಗೊಳಿಸಲಾರವು. ಇದನ್ನು ಅರಿತು ಯಾವುದೇ ಗತ ಸಂಗತಿಗಳ ಬಗ್ಗೆ ಚಿಂತಿಸದೆ ಒಂದು ಉತ್ತಮ ವರ್ತಮಾನವನ್ನು ರೂಪಿಸಿಕೊಳ್ಳಬಹುದು. ನೀವು ಜೀವನದಲ್ಲಿ ಸಾಧಿಸಬೇಕು ಎಂದಿರುವ ಸಾಧನೆಗಳ ಬಗ್ಗೆ ಖಂಡಿತಾ ಮಿತಿಗಳನ್ನು ಇಟ್ಟುಕೊಳ್ಳಬೇಡಿ.
“ಬದಲಾವಣೆಯತ್ತ ಒಂದು ಶ್ರೇಷ್ಠ ಉಪಾಯವೆಂದರೆ ಇಂತಹ ಸಣ್ಣ ಬುದ್ಧಿಮಟ್ಟದ ಆಲೋಚನೆಗಳನ್ನು ತ್ಯಜಿಸಿಬಿಡುವುದು”

ಲೇಖನ ಪ್ರಿಯಾಂಕಾ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153