ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ಶಿವಮೊಗ್ಗದಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಹಾಗೂ ರೋಡ್ ಶೋಗೆ ಸಚಿವ ಪ್ರಹ್ಲಾದ್ ಜೋಶಿ ಕೆ ಎಸ್ ಈಶ್ವರಪ್ಪ ಡಿಎಸ್ ಅರುಣ್ ಕೆ ಈ ಕಾಂತೇಶ್ ಚಾಲನೆ ನೀಡಿದರು .
ಶಿವಮೊಗ್ಗದ ರಾಮನಶೆಟ್ಟಿ ಪಾರ್ಕ್ನ ಗಣಪತಿ ದೇವಸ್ಥಾನ ದಲ್ಲಿ ಪೂಜಾ ಸಲ್ಲಿಸಿದ ಜೋಶಿ ಮತ್ತು ಮಾಜಿ ಸಚಿವ ಶ್ರೀ ಈಶ್ವರಪ್ಪ ಬಳಿಕ ರೋಡ್ ಶೋ ಆರಂಭಿಸಿದರು.ರಾಮನ ಶೆಟ್ಟಿ ಪಾರ್ಕ್ ನಿಂದ ಫ್ರೀಡಂ ಪಾರ್ಕ್ ವರೆಗೂ ಸಾಗಲಿರುವ ರೋಡ್ ಶೋ ನಲ್ಲಿ ಕೀಲುಗೊಂಬೆ ಚಂಡೆ ಹಾಗೂ ಡೊಳ್ಳು ತಂಡಗಳು ಭಾಗಿಯಾಗಿದ್ದವು. ನಂತರ ಮಾತನಾಡಿದ ಪ್ರಲ್ಹಾದ್ ಜೋಶಿ ರವರು ಎಲ್ಲರೂ ಯಾತ್ರೆಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ ಜನ ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದು ಬಯಸುತ್ತಿದ್ದಾರೆ ಎಂದು ಹೇಳಿದರು.
ಸಂಸತ್ ಕಲಾಪ ನಡೆಯಲು ಕಾಂಗ್ರೆಸ್ ಬಿಡುತ್ತಿಲ್ಲ ರಾಹುಲ್ ಗಾಂಧಿ ವಿದೇಶದಲ್ಲಿ ಭಾರತದ ಮರ್ಯಾದೆಯನ್ನು ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ ಸದನದ ಗೌರವಾನ್ವಿತ ಪೀಠ ಸೀನಾಧಿಕಾರಿಯಾದ.ಸ್ಪೀಕರ್ ನೊಂದಿಗೆ ಕಲಹಕ್ಕೆ ನಿಲ್ಲುತ್ತಾರೆ ಅವರು ಮಾತನಾಡುವಾಗ ಮೈಕ್ ಆಫ್ ಆಗುತ್ತದೆ ಎಂಬುದು ಸುಳ್ಳು ಯಾರು ಮಾತನಾಡುತ್ತಾರ ಆಗ ಮೈಕ್ ಆನ್ ಆಗಿರುತ್ತದೆ ಎಂದರು.
ಇದು ನಾವು ಮಾಡಿದ ವ್ಯವಸ್ಥೆ ಅಲ್ಲ ಅವರೇ ಮಾಡಿದ ಪದ್ಧತಿ ಅವರು ಕಳೆದ 10 ವರ್ಷದಿಂದ ಅಧಿಕಾರವಿಲ್ಲದೆ ಆತಂಕಗೊಂಡಿದ್ದಾರೆ ಎಂದು ದೂರಿದರು.ಸದನದಲ್ಲಿ ಕಲಾಪದ ವೇಳೆ ಅನಗತ್ಯವಾಗಿ ಗೊಂದಲ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ದೇಶದ ಜನ ಇದನ್ನು ಗಮನಿಸುತ್ತಿದ್ದಾರೆ ಎಂದು ಜೋಶಿ ಹೇಳಿದರು.