ಡಿಸಿ ಆಫೀಸ್ ನಲ್ಲಿ Sdpi ಕಾರ್ಯಕರ್ತರು ಪ್ರತಿಭಟನೆ ನಡೆದ ಜಾಗದಲ್ಲಿ ಆಜನ್ ಮಾಡಿ ನಮಾಜ್ ಮಾಡಿ ಮತ್ತೆ ಇದನ್ನು ವಿಧಾನಸಭೆಯ ಮುಂದೆ ಮಾಡುವುದಾಗಿ ಹೇಳಿ ಸಂವಿಧಾನದ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಶಾಸಕ ಕೆ ಎಸ್ ಈಶ್ವರಪ್ಪ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸುಪ್ರೀಂ court ನಿಂದ ಆಜ್ಞೆ ಇದ್ದು ಮುಸ್ಲಿಮರ ಆಜಾನೂ ಇಂದ ಹಿರಿಯರಿಗೆ ಓದುವ ಮಕ್ಕಳಿಗೆ ತೊಂದರೆ ಆಗುತ್ತಿದ್ದು ಶಬ್ದ ಮಾಲಿನ್ಯ ಆಗುತ್ತಿದ್ದು ಸುಪ್ರೀಂ ಕೋರ್ಟ್ ನಿರ್ದಿಷ್ಟವಾದ ಶಬ್ದ ಉಪಕರಣಗಳನ್ನು ಬಳಸಬೇಕೆಂದು ಆದೇಶ ನೀಡಿದೆ.ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿ ಕೆಲವು ಮುಸ್ಲಿಮರಿಂದ ಆಜಾನ್ ಮಾಡಿ ನಿಯಮ ಉಲ್ಲಂಘಿಸಿದ್ದಾರೆ.

ಇಂದು ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯ ಅಭಿಪ್ರಾಯವಾಗಿದ್ದು ತಾವು ಇದನ್ನು ಇಲ್ಲಿ ಉಲ್ಲೇಖ ಮಾಡುತ್ತಿರುವುದಾಗಿ ಹೇಳಿದ್ದಾರೆ.ಪೊಲೀಸ್ ಇಲಾಖೆ ಆಜನ್ ಮಾಡಿದ ಕಾರ್ಯಕರ್ತರನ್ನು ಸೆಕ್ಷನ್ 107 ಹಾಕಿ ಮೃದು ಧೋರಣೆಯನ್ನು ತೋರಿಸಿದ್ದು ಇದು ಕಾನೂನಿನ ವೈಫಲ್ಯತೆಯನ್ನು ತೋರಿಸುತ್ತದೆ. ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದರು. ರಾಷ್ಟ್ರದ್ರೋಹಿ ಕೆಲಸ ಮಾಡುತ್ತಿರುವ sdpi ಮತ್ತು ಅಂಗ ಸಂಸ್ಥೆಗಳು ಮೇಲೆ ಕಠಿಣ ಕ್ರಮಕ್ಕಾಗಿ ಆಗ್ರಹಿಸಿದ್ಧರು.

ವರದಿ: ಸುರೇಶ್ ಬಿ ಎಸ್…