ಶಿವಮೊಗ್ಗ ನಗರ ಹೊಸ ಮನೆ ಬಡಾವಣೆಯಲ್ಲಿ 50 ವರ್ಷಗಳಿಂದ ವಾಸವಾಗಿರುವ ನಿವಾಸಿಗಳಿಗೆ ಹಕ್ಕು ಪತ್ರ ನೀಡಿಲ್ಲವೆಂದು ಇಂದು ಪ್ರತಿಭಟನೆ ನಡೆಸಿದರು.ನಗರದ ಹೊಸ ಮನೆ ಬಡಾವಣೆ ಡಾಕ್ಟರ್ ಬಿಆರ್ ಅಂಬೇಡ್ಕರ್ ಸಮುದಾಯ ಭವನ ಹತ್ತಿರ ಮೂರು ಮತ್ತು ನಾಲ್ಕನೇ ತಿರುವಿನಲ್ಲಿ ಸುಮಾರ ಐವತ್ತು ವರ್ಷಗಳಿಂದ ಪರಿಶಿಷ್ಟ ಜಾತಿಗೆ ಸೇರಿದ ಆದಿ ಕರ್ನಾಟಕ ಜನಾಂಗದವರು ವಾಸವಾಗಿದ್ದರೆ ಇದುವರೆಗೂ ನಮಗೆ ಹಕ್ಕು ಪತ್ರ ನೀಡಿರುವುದಿಲ್ಲ ಎಂದರು. ಸುಮಾರ ಐವತ್ತು ವರ್ಷಗಳಿಂದಲೂ ನಾವುಗಳು ಈ ಪ್ರದೇಶದಲ್ಲಿ ವಾಸವಾಗಿದ್ದರು ನಮ್ಮ ಅಸ್ತಿತ್ವಕ್ಕೆ ಯಾವುದೇ ಗುರುತುಗಳು ಇಲ್ಲದಂತಾಗಿದೆ ನಮಗೆ ಈ ಮನೆಗಳು ಬಿಟ್ಟರೆ ಬೇರೆ ಯಾವುದೇ ರೀತಿ ಆಸ್ತಿಗಳು ಇರುವುದಿಲ್ಲ ನಾವೆಲ್ಲ ಪೌರಕಾರ್ಮಿಕರಾಗಿದ್ದು ಬಡ ಕುಟುಂಬದವರಾಗಿದ್ದು ನಮಗೆ ಮನೆಗಳು ಬಿಟ್ಟರೆ ಬೇರೆ ಎಲ್ಲೂ ಮನೆ ಇಲ್ಲ ಎಂದರು.
ಹಿಂದೆ ನಾವು ಹಲವು ಬಾರಿ ಸರ್ಕಾರಕ್ಕೆ ಮಾನವಿ ನೀಡಿದ್ದರು ಸರ್ಕಾರ ನಮಗೆ ಹಕ್ಕು ಪತ್ರ ನೀಡಿರುವುದಿಲ್ಲ ಇಲ್ಲಿಗೆ ಬರುವ ರಾಜಕಾರಣಿಗಳ ಚುನಾವಣಾ ಸಂದರ್ಭದಲ್ಲಿ ನಮ್ಮಗಳ ಮನೆಗಳಿಗೆ ಹಕ್ಕು ಪತ್ರ ಕೊಡಿಸುವುದಾಗಿ ಆಶ್ವಾಸನೆ ನೀಡಿ ಮತ ಪಡೆದು ಹೋಗುತ್ತಾರೆ ವಿನ ಸಮಸ್ಯೆಯನ್ನು ಬಗೆಹರಿಸುವುದಿಲ್ಲ ಎಂದರು.
ನಮ್ಮಗಳ ಮನೆಗೆ ಹಕ್ಕು ಪತ್ರ ಕೊಡಿಸು ಭರವಸೆಯನ್ನು ರಾಜಕೀಯದ ವಿಷಯ ಮಾತ್ರ ಇಟ್ಟುಕೊಳ್ಳಲಾಗಿದ್ದು ಅವರು ಅವರ ರಾಜಕೀಯದ ಬೇಳೆ ಬೇಯಿಸಿಕೊಂಡ ನಂತರ ನಮ್ಮ ಸಮಸ್ಯೆ ಮೇಲೆ ಗಮನಹರಿಸುವುದಿಲ್ಲ ನಮ್ಮ ಸಮಸ್ಯೆ ಯಾರೇ ಕಣ್ಣಿಗೂ ಕಾಣುವುದಿಲ್ಲ ಆದ್ದರಿಂದ ನಾವು ರಾಜಕಾರಣಿಗಳ ಮೇಲೆ ಭರವಸೆ ಕಳೆದುಕೊಂಡಿದ್ದೇವೆ.ಹೊಸಮನೆ ಮೂರು ಮತ್ತು ನಾಲ್ಕನೇ ತಿರುವಿನಲ್ಲಿ ವಾಸವಾಗಿರುವ 80ಕ್ಕೂ ಹೆಚ್ಚು ಕುಟುಂಬ ಈ ಬಾರಿ 23 ನೇ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಮತ್ತು ಸಾಮಾಜಿಕ ಮತವನ್ನು ಮತ್ತು ಮತದಾನವನ್ನು ಬಹಿಷ್ಕಾರ ಮಾಡಲು ತೀರ್ಮಾನ ಮಾಡಿದ್ದೇವೆ ಎಂದರು.
ನಮಗೆ ಹಕ್ಕು ಪತ್ರ ನೀಡಲು ಹಿಂದಿರುವ ಕಾರಣಗಳೇನು ನಾವು ದಲಿತರೆ ಎನ್ನುವುದು ದಲಿತರಿಗೆ ಭೂಮಿ ಹಕ್ಕು ಸಿಗಬಾರದು ಎಂಬ ದುರುದ್ದೇಶದಿಂದ ರಾಜಕಾರಣಿಗಳು ಸರ್ಕಾರಗಳು ನಮಗೆ ಶೋಷಣೆ ತಾರತಮ್ಯ ಮಾಡುತ್ತಿದ್ದಾರೆ. ಸರ್ಕಾರ ದಲಿತರನ್ನು ಮೂಲೆಗುಂಪ ಮಾಡಿರುವುದಕ್ಕೆ ಶಿವಮೊಗ್ಗದಲ್ಲಿ ಜಿಲ್ಲೆಯಲ್ಲಿ ಇದೊಂದು ನಿರ್ದರ್ಶನ. ಮುಂದಿನ ದಿನದಲ್ಲಿ ಹಕ್ಕುಪತ್ರ ಸಿಗದಿದ್ದಲ್ಲಿ ರಾಜಕೀಯ ಲಾಭಕ್ಕಾಗಿ ಹಕ್ಕು ಪತ್ರ ಕೊಡಿಸುತ್ತೇವೆ ಎಂದು ಚುನಾವಣ ಪ್ರಣಾಳಿಕೆಯಲ್ಲಿ ಈ ವಿಷಯವನ್ನು ಸೇರಿಸಿ ನಮಗೆ ಸರ್ಕಾರ ಮತ್ತು ರಾಜಕಾರಣಕಾರಣಿಗಳು ಮೋಸ ಮಾಡಿದ್ದು ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಎಂದರು.
ಮುಂದಿನ ದಿನಗಳಲ್ಲಿ ನಮ್ಮ ಬೇಡಿಕೆ ಈಡೇರಲಿದ್ದಲ್ಲಿ ಉಗ್ರ ಹೋರಾಟವನ್ನು ಮಾಡೋದಾಗಿ ತಿಳಿಸಿದರು.ನಮಗೆ ಶಾಶ್ವತ ಪರಿಹಾರ ಮತ್ತು ಹಕ್ಕು ಪತ್ರ ನೀಡಬೇಕೆಂದು ಆಗ್ರಹಿಸಿದರು.