ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್ಎಸ್ ಸುಂದರೇಶ್ ಅವರು ಪತ್ರಿಕಾಗೋಷ್ಠಿ ನಡೆಸಿ ಶಾಸಕ ಕೆ ಸಿ ಈಶ್ವರಪ್ಪನವರ ಆಜಾನ್ ಹೇಳಿಕೆ ವಿಷಯವನ್ನು ಖಂಡಿಸಿದರು.
ಇದನ್ನು ಬಿಜೆಪಿ ಅನಗತ್ಯ ಪ್ರಚೋದನೆ ನೀಡುತ್ತಿದ್ದು ಇದರಿಂದ ಸಮಾಜದಲ್ಲಿ ಜಾತಿ ಸಾಮರ ಆಗಿದೆ ಎಂದು ಹೇಳಿದರು.ಬಿಜೆಪಿ ಸರ್ಕಾರವನ್ನು ಮೊದಲ ಬಾರಿಗೆ ಕರ್ನಾಟಕದಲ್ಲಿ ತಂದ ಮಾಜಿ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪ ಅವರನ್ನು 75 ವಯಸಾಯ್ತು ಎಂದು ಮೂಲೆಗೆ ತಳ್ಳಿದ್ದಾರೆ.ಅವರಿಗೆ ತುಂಬಾ ಅನ್ಯಾಯ ಮಾಡಿದ್ದಾರೆ.ಈ ಬಾರಿ ಚುನಾವಣೆಯಲ್ಲಿ ಬಿಜೆಪಿಯವರು ಸೋಲುತ್ತಾರೆ ಎಂದು ಹೆದರಿಕೆಯಿಂದ ನೆಪ ಮಾತ್ರಕ್ಕೆ ಯಡಿಯೂರಪ್ಪ ಅವರನ್ನು ಉಳಿಸಿಕೊಂಡಿದ್ದಾರೆ ಎಂದರು.
ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲಿಕ್ಕ ಸಿದ್ದರಿದ್ದಾರೆ ಮತ್ತೆ ಯಾವ ಮಟ್ಟಕ್ಕೂ ಬೇಕಾದರೂ ಇಳಿಯುತ್ತಾರೆ ಆದರೆ ಕಾಂಗ್ರೆಸ್ ಪಕ್ಷ ಅದಕ್ಕೆ ಒಂದು ರೀತಿ ಸಿದ್ಧಾಂತ ಇದೆ ನೈತಿಕತೆ ಇದೆ ಕಾಂಗ್ರೆಸ್ ಪಕ್ಷಕ್ಕೆ ತತ್ವ ಸಿದ್ಧಾಂತ ಹಾಗೂ ಗ್ಯಾಸ್ ಸಿಲೆಂಡರ್ ರೇಟ್ ಜಾಸ್ತಿ ಆದಾಗ ಶೋಭಾ ಕರಂದ್ಲಾಜೆ ಗ್ಯಾಸ್ ಸಿಲಿಂಡರ್ ಹೊತ್ತು ಕೊಂಡು ಚಳುವಳಿ ಮಾಡಿದ್ದಾರೆ.ಆದರೆ ಧರ್ಮದ ವಿಚಾರ ಬಂದಾಗ ಬಿಜೆಪಿ ಎಲ್ಲ ಮುಖಂಡರು ಒಂದೇ ಕಡೆ ಮುಖ ತೋರಿಸುತ್ತಾರೇ
ಕಾಂಗ್ರೆಸ್ ಪಕ್ಷ ಗ್ಯಾರಂಟಿ ಕಾರ್ಡನ್ನು ಇಂದು ನೈತಿಕತೆ ಮೇಲೆ ಸಿದ್ಧಾಂತದ ಮೇಲೆ ಹಂಚಿಕೆ ಮಾಡಿದೆ ಎಂದರು.ಮತ್ತೆ ಕಾಂಗ್ರೆಸ್ ನಲ್ಲಿ ಟಿಕೆಟ್ ಹಂಚಿಕೆಯಲ್ಲಿ ಹೈಕಮಾಂಡ್ ನಿರ್ಧಾರವೇ ಕೊನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ ಬಿ ಪ್ರಸನ್ನ ಕುಮಾರ್ ಮರಿಯಪ್ಪ ರವಿಕುಮಾರ್ ದಿನೇಶ್ ಸತ್ಯನಾರಾಯಣ ಚಂದ್ರ ಭೂಪಾಲ್ ಕಾಂಗ್ರೆಸ್ ಮುಖಂಡರ ಉಪಸ್ಥಿತರಿದ್ದರು.