ಶಿವಮೊಗ್ಗ ನಗರದ ಸಾಗರ ರಸ್ತೆ ಎಪಿಎಂಸಿ ಎದುರು ಬ್ಯಾಂಕ್ ಆಫ್ ಬರೋಡದ ನೂತನ ಪ್ರಾದೇಶಿಕ ಕಚೇರಿಯನ್ನು ಬ್ಯಾಂಕಿನ ಜನರಲ್ ಮ್ಯಾನೇಜರ್ ಶ್ರೀಮತಿ ಗಾಯತ್ರಿ ಆರ್ ಅವರು ಉದ್ಘಾಟಿಸಿದರು
ನಂತರ ಮಾತನಾಡಿ ಬ್ಯಾಂಕ್ ಆಫ್ ಬರೋಡ ಭಾರತದ ಎರಡನೇ ಅತಿ ದೊಡ್ಡ ಬ್ಯಾಂಕ್ ಆಗಿ ಕಾರ್ಯನಿರ್ವಹಿಸುತ್ತಾ ಇದ್ದು ಶಿವಮೊಗ್ಗದ ಪ್ರಾದೇಶಿಕ ಕಚೇರಿ ವ್ಯಾಪ್ತಿಯಲ್ಲಿ 59 ಶಾಖೆಗಳನ್ನು ಒಳಗೊಂಡು ಶಿವಮೊಗ್ಗ ದಾವಣಗೆರೆ ಹಾವೇರಿ ಹಾಗೂ ಉತ್ತರ ಕನ್ನಡ ನಾಲ್ಕು ಜಿಲ್ಲೆಯ ಶಾಖೆಗಳು ಇದರ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಲಿದೆ 6000 ಕೋಟಿಗಿಂತ ಅಧಿಕವಾಗಿ ವ್ಯವಹಾರ ನಡೆಸುವ ಕಚೇರಿಯಾಗಿದೆ ಡೆಪಾಸಿಟ್ 399 ದಿನಗಳಿಗೆ 7.05 ಹಾಗೂ ಹಿರಿಯ ಗ್ರಾಹಕರಿಗೆ 7.50 ಶೇ ನೀಡಲಾಗುತ್ತಿದೆ ಎಂದರು.
ಬರೋಡದ ಹಲವಾರು ಲೋನ್ನ ಪ್ರಯೋಜನವನ್ನು ಪಡೆದುಕೊಳ್ಳಲು ಗ್ರಾಹಕರಿಗೆ ಕೋರಿದರು ಮನೆಯ ಸಾಲವು ಅತ್ಯಂತ ಕಡಿಮೆ ಬಡ್ಡಿ 8.05ಶೇ ನಿಂದ ಪಾರಂಭ ಕಾರಿನ ಸಾಲವು 8.7% ನಿಂದ ಪ್ರಾರಂಭ ಎಜುಕೇಶನ್ ಸಾಲವು ನಾಲ್ಕು ಲಕ್ಷದವರೆಗೆ ಜಾಮೀನುರಾಹಿತ ವಾಗಿರುತ್ತದೆ ಹೀಗೆ ಬ್ಯಾಂಕ್ ಆಫ್ ಬರೋಡ ಹಲವು ಯೋಜನೆಗಳ ಉಪಯೋಗ ಪಡೆದುಕೊಳ್ಳಲು ಗ್ರಾಹಕರಿಗೆ ಕೋರಿದರು.ಈ ಸಂದರ್ಭದಲ್ಲಿ ಉಪವಲಯ ಮುಖ್ಯಸ್ಥರಾದ ಗೋಪಾಲಕೃಷ್ಣ ಅವರು ಪ್ರಾದೇಶಿಕ ವ್ಯವಸ್ಥಾಪಕರಾದ ರವಿ ಅವರು ಉಪಸ್ಥಿತರಿದ್ದರು.