ವಿಧಾನಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್ ರವರು ಇಂದು ಮಧುರ ಪ್ಯಾರಡೈಸ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.ಸಾರ್ವಜನಿಕ ಬದುಕಿನಲ್ಲಿ ದಿಟ್ಟ ಹೋರಾಟ ಮಾಡಿಕೊಂಡು ಬಂದ ನನಗೆ ನಿತ್ಯ ಸುಮಂಗಲಿಗೆ ಹೋಲಿಕೆ ಟಿಕೆಟ್ ಕೇಳಿದರೆ ಕೀಳು ಮಟ್ಟಕ್ಕೆ ಹೋಲಿಕೆ ಮಾಡಲಾಗಿದೆ ನನಗೆ ಬಿಜೆಪಿ ಟಿಕೆಟ್ ಕೇಳಿದರೆ ಶಿವಮೊಗ್ಗದಲ್ಲಿ ಶಾಂತಿ ನೆಲೆಸು ಉಂಟು ಮಾಡುವೆ ಎಂದು ಶಾಸಕ ಮಂಜುನಾಥ್ ಹೇಳಿದರು.

1994 ರಲ್ಲಿ ಪಕ್ಷ ಗೆಲ್ಲಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ಹೊಸನಗರದಲ್ಲಿ ಸ್ಪರ್ಧಿಸಿ ಗೆದ್ದಿದ್ದೇನೆ ನಂತರ ಬಂಗಾರಪ್ಪನವರ ವಿರುದ್ಧ ಮೊಟ್ಟ ಮೊದಲ ಬಾರಿಗೆ ಲೋಕಸಭಾ ಕ್ಷೇತ್ರ ಗೆದ್ದಿದ್ದೇನೆ ಸವಾಲುಗಳ ಕ್ಷೇತ್ರವನ್ನು ಆರಿಸಿಕೊಂಡ ಪಕ್ಷವನ್ನು ಗೆಲ್ಲಿಸಿದ್ದೇನೆ.ಪದವೀಧರ ಕ್ಷೇತ್ರದಲ್ಲಿ ಗೆದ್ದಿದ್ದೇನೆ ಶಿವಮೊಗ್ಗ ನನ್ನ ಕಾರ್ಯಕ್ಷೇತ್ರ ಇಲ್ಲೊಂದು ಅವಕಾಶ ಕೇಳಿದರೇ ಸಮಾ ಸಾಮಾಜಿಕ ಜಾಲತಾಣದಲ್ಲಿ ಫೇಸ್ಬುಕ್ ನಲ್ಲಿ ಟೀಕೆಗಳನ್ನು ಕೆಳಮಟ್ಟದಲ್ಲಿ ಹೋಲಿಸಿ ನನ್ನನ್ನು ಟೀಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು..

ನನಗಿಂತ ಹೆಚ್ಚು ಅವಕಾಶ ಈಶ್ವರಪ್ಪನವರಿಗೆ ನೀಡಲಾಗಿದೆ 32 ವರ್ಷಗಳ ಕಾಲ ನೀಡಿರುವುದು.ಈ ವಿಷಯದ ಬಗ್ಗೆ ಟೀಕೆ ಮಾಡುವವರಿಗೆ ಇದರ ಬಗ್ಗೆ ಆಕ್ಷೇಪವಿಲ್ಲ ಈಶ್ವರಪ್ಪನವರಿಗೆ ಟಿಕೆಟ್ ಇಲ್ಲವೆಂದು ಅಕ್ಷೇಪ ಕೇಳಿ ಬರುತ್ತಿದ್ದು ನನ್ನ ಮಗನಿಗೆ ಟಿಕೆಟ್ ಕೇಳಿದಾಗ ನಾನು ಸ್ಪರ್ಧೆಂದಿದ್ದೆ ಟೀಕೆ ಮಾಡುವವರಿಗೆ ಸವಾಲ ಹಾಕಿದ ಮಂಜುನಾಥ್ ನನ್ನ ಮಗನಿಗೆ ಟಿಕೆಟ್ ಕೇಳಬೇಕಿತ್ತಾ ಎಂದು ಸವಾಲು ಹಾಕಿದರು.ಸಾರ್ವಜನಿಕ ರಾಜಕೀಯ ಜೀವನದಲ್ಲಿ ಇದುವರೆಗೂ ಒಂದು ಕಪ್ಪು ಚುಕ್ಕೆ ಇಲ್ಲ ಎಂಎಲ್ಎ ಆಗಿ ಎಂಪಿಯಾಗಿ ಆದ ಸಮಯದಲ್ಲಿ ತುಂಬಾ ಸವಾಲುಗಳಿದ್ದಾಗ ಅದನ್ನು ಬಗೆಹರಿಸಿದ್ದೇವೆ ನಾನು ಶಾಸಕನಾಗಿದ್ದಾಗ ತುಂಗಾ ಏತವರಿ ಯೋಜನೆ ಹೊಸನಗರ ರಿಪ್ಪನ್ ಪೇಟೆಯಲ್ಲಿ ಗೂಂಡಾಗಿರಿ ಹತ್ಯಕ್ಕಿದ್ದೇನೆ.ಮೊದಲನೇ ವರ್ಷದಲ್ಲಿ ಘಟಾನುಘಟಿ ರಾಜಕೀಯ ವ್ಯಕ್ತಿಗಳ ಜೊತೆ ವಿಧಾನಸಭೆಯಲ್ಲಿ ಪ್ರವೇಶ ಮಾಡಿದ ಕೀರ್ತಿ ನನಗೆ ಇದೆ ನಂತರ ಉತ್ತಮ ಸಂಸದ ಪಟು ಎಂಬ ಬಿರುದು ನಮಗೆ ಇದೆ.

ಸಂಸದರಾದಾಗ ರಸ್ತೆಗಳ ಬೃಹತ್ ರಸ್ತೆಗಳ ಯೋಜನೆಯನ್ನು ಜಾರಿಗೆ ತಂದಿದ್ದೇವೆ ಶಿವಮೊಗ್ಗದಲ್ಲಿ ರೈಲ್ವೆ ಟಿಕೆಟ್ ಪಾಸ್ ಮಾಡಿದ್ದು ನನ್ನ ಅವಧಿಯಲ್ಲಿ ಖಾಸಗಿ ಕಾರ್ಖಾನೆಯನ್ನು ರಾಷ್ಟ್ರಪತಿಗಳು ವಶಪಡಿಸಿಕೊಳ್ಳಲು ನಾನು ಕಾರಣ ಈಗ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣ ನಾನು ಕಂಡ ಕನಸು ಅನಂತ್ ಕುಮಾರ್ ವಿಮಾನಯಾನ ಸಚಿವರಾದ ಸಮಯದಲ್ಲೇ ವಿಂಡ್ ಸರ್ವೆ ನಡೆದಿತ್ತು. ಹದಿಮೂರು ತಿಂಗಳಲ್ಲಿ ವಾಜಪೇಯಿ ಸರ್ಕಾರ ಬಿದ್ದೋಯ್ತು.ನನ್ನ ಹಿನ್ನೆಲೆ ಅರ್ಥಮಾಡಿಕೊಳ್ಳದ ಏಕಾಂ ಟೀಕೆ ಮಾಡುವವರು ಅಶ್ಲೀಲವಾಗಿ ಮಾತಾಡಿ ನಾಲಿಗೆಯನ್ನು ಹೊಲಸು ಮಾಡಿಕೊಳ್ಳಬೇಡಿ ಯೋಗ್ಯತೆ ಇಟ್ಟುಕೊಂಡು ಟೀಕಿಸಿ ಎಂದು ಸಲಹೆ ನೀಡಿದರು.

ಮೋದಿ ಜಿಂದಾಬಾದ್ ಎಂದು ಮೋದಿಯ ವಿರೋಧಿ ಚಟುವಟಿಕೆ ನಡೆಸಬೇಡಿ ಎಂದು ಸಲಹೆ ನೀಡಿದರು.ಸರ ಸಂಚಾಲಕರು ಮಸೀದಿಗಳಿಗೆ ಹೋಗಿ ಈಶ್ವರ ಲಿಂಗ ಹುಡುಕಬೇಡಿ ಎಂದು ಮನವಿ ಮಾಡಿದರು.ಪಕ್ಷ ಟಿಕೆಟ್ ಕೊಡುತ್ತದೆ ಎಲ್ಲಾ ಬಿಜೆಪಿ ನಾಯಕರನ್ನು ಸಂಪರ್ಕಿಸಿ ಅಭಿಲಾಷೆ ಆಸೆ ಹೇಳಿದ್ದೇನೆ.ಈಶ್ವರಪ್ಪನವರಿಗೆ ಟಿಕೆಟ್ ಕೊಟ್ಟರು ನನ್ನ ನಿಲುವು ನನ್ನ ಆಸೆ ಬದಲಾಗುವುದಿಲ್ಲ ನನಗೆ ಮಂತ್ರಿ ಆಗಬೇಕೆಂದು ಹಂಬಲವಿಲ್ಲ ಅವರನ್ನೇ ಮಂತ್ರಿ ಮಾಡಲಿ ನಾನು ಶಾಸಕನಾಗಬೇಕು ಎಂದು ಹೇಳಿದರು.

ಒಂದು ವೇಳೆ ಟಿಕೆಟ್ ಸಿಗದಿದ್ದರೆ ನಿಮ್ಮ ನಿಲುವಿನ ಕುರಿತು ಮಾಧ್ಯಮ ಕೇಳಿದ ಪ್ರಶ್ನೆಗೆ ಪಕ್ಷ ಟಿಕೆಟ್ ಕೊಡುತ್ತೆ ಕೊಡುತ್ತದೆ ಎಂದು ಹೇಳಿದರು ಮತ್ತು ಸುದ್ದಿಗೋಷ್ಠಿಯಲ್ಲಿ ಟೀಕೆ ಮಾಡುವವರನ್ನು ನಾಲಿಗೆ ಇಲ್ಲದ ನಾಯಿಗಳು ಮಾಡುವ ಕೆಲಸ ಎಂದು ಪ್ರತಿಪಾದಿಸಿದರು.

ವರದಿ: ಸುರೇಶ್ ಬಿ ಎಸ್…