ರಾಜ್ಯದಲ್ಲಿ ನಾಲ್ಕನೇ ಹಂತದ ಅನ್ಲಾಕ್ ಜಾರಿಯಾಗಿದ್ದು ತರಗತಿಗಳನ್ನು ಜುಲೈ 26ರಿಂದ ಶುರು ಮಾಡಬೇಕೆಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ ಮತ್ತು ಹಾಸ್ಟೆಲ್ಗಳನ್ನು ಸಹ ತೆರೆಯಲಾಗಿದೆ. ಈ ನಿಟ್ಟಿನಲ್ಲಿ ಲಾಕ್ಡೌನ್ ಆಗುವ ಮುನ್ನ ಇದ್ದ ಹಲವಾರು ಮಾರ್ಗಗಳ ಬಸ್ಸುಗಳು ತನ್ನ ಸಂಚಾರ ಸ್ಥಗಿತಗೊಳಿಸಿರುವ ಸಂಭವವೂ ಇದೆ. ಈ ನಿಟ್ಟಿನಲ್ಲಿ ಲಾಕ್ಡೌನ್ ಆಗುವ ಮುನ್ನ ಇದ್ದ ಎಲ್ಲಾ ಮಾರ್ಗಗಳ ಬಸ್ಸುಗಳನ್ನು ಮತ್ತು ಹಾಸ್ಟೆಲ್ ಗಳನ್ನು ಸಂಪರ್ಕಿಸುವ ಬಸ್ ಗಳನ್ನು ರದ್ದುಗೊಳಿಸಿ ದಲ್ಲಿ ಅದನ್ನು ಪುನರ್ ಆರಂಭಿಸಬೇಕೆಂದು ಮತ್ತು ಅಗತ್ಯವಿದ್ದಲ್ಲಿ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಿ ಅನುಕೂಲ ಮಾಡಿಕೊಡಬೇಕೆಂದು ವಿನಂತಿಸಿಕೊಳ್ಳುತ್ತೇವೆ.
ಈಗಾಗಲೇ ಕರೋನಾ ಕಾರಣದಿಂದ ಕಾಲೇಜಿನ ಭೌತಿಕ ತರಗತಿಗಳು ಸರಿಯಾಗಿ ನಡೆಯದ ಕಾರಣ ಪಾಠ ಪ್ರವಚನಗಳು ನಡೆಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಆನ್ಲೈನ್ ಪಾಠ ಪ್ರವಚನಗಳಿಗೆ ಮೊರೆ ಹೋಗಿ ವರ್ಷ ಕಳೆದಿದೆ. ಆದರೂ ಈಗಲೂ ಸಹ ಮಲೆನಾಡಿನ ಘಟ್ಟ ಪ್ರದೇಶಗಳು ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ವಿದ್ಯಾರ್ಥಿಗಳಿಗೆ ನೆಟ್ವರ್ಕ್ ಸಮಸ್ಯೆ ಕಾಡುತ್ತಿರುವುದು ಮತ್ತು ನೆಟ್ವರ್ಕ್ ಹುಡುಕಾಟದಲ್ಲಿ ಅಲೆದಾಡುವ ಪರಿಸ್ಥಿತಿ ವಿದ್ಯಾರ್ಥಿಗಳಿಗೆ ಎದುರಾಗಿರುವುದು ಶೋಚನೀಯ. ಆ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸಹ ಆನ್ಲೈನ್ ಪಾಠ ಪ್ರವಚನಗಳು ಶಿಕ್ಷಣದ ಭಾಗವಾಗಿರುವುದರಿಂದ ಈ ನೆಟ್ವರ್ಕ್ ಸಮಸ್ಯೆಯನ್ನು ಸಹ ಶೀಘ್ರವಾಗಿ ಪರಿಹರಿಸಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಶಿವಮೊಗ್ಗ ಶಾಖೆಯು ತಮ್ಮಲ್ಲಿ ವಿನಂತಿಸಿಕೊಳ್ಳುತ್ತದೆ.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ
CCTV SALES & SERVICE
9880074684
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153