ಸೊರಬ ನ್ಯೂಸ್…

ಬಗರ್ ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸಲು ಮುಂದಾಗಿರುವ ಶಾಸಕ ಕುಮಾರ್ ಬಂಗಾರಪ್ಪ ಅವರನ್ನು ಚುನಾವಣೆಯಲ್ಲಿ ಸೋಲಿಸುವ ಮೂಲಕ ರೈತರು ಸೇಡು ತೀರಿಸಿಕೊಳ್ಳಬೇಕು ಎಂದು ಕೆಪಿಸಿಸಿ ಹಿಂದುಳಿದ ವಿಭಾಗದ ಅಧ್ಯಕ್ಷ ಮಧು ಬಂಗಾರಪ್ಪ ತಿಳಿಸಿದರು.

ಪಟ್ಟಣದಲ್ಲಿ ತಾಲ್ಲೂಕಿನ ತಾಳಗುಪ್ಪ ಗ್ರಾಮದ ಬಗರ್ ಹುಕುಂ ರೈತರ ಜಮೀನು ತೆರವುಗೊಳಿಸಿರುವುದನ್ನು ವಿರೋಧಿಸಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಮರೆವಣಿಗೆ ಉದ್ದೇಶಿಸಿ ಅವರು ಮಾತನಾಡಿದರು.
ಕಳೆದ 11 ವರ್ಷಗಳ ಹಿಂದೆ ತಾಲ್ಲೂಕಿನ ತಾಳಗುಪ್ಪದಲ್ಲಿ ರೈತರ ಬಗರ್ ಹುಕುಂ ಜಮೀನು ತೆರವಿಗೆ ಸರ್ಕಾರ ಮುಂದಾಗಿತ್ತು. ಅಂದು ರೈತರಿಗೆ ಬೆಂಬಲವಾಗಿ ನಿಂತು ಶಿವಮೊಗ್ಗದವರೆಗೆ ಪಾದಯಾತ್ರೆ ನಡೆಸಿ ಸರ್ಕಾರಕ್ಕೆ ಎಚ್ಚರಿಕೆ‌ ನೀಡಲಾಗಿತ್ತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪುನಃ ಸಾಗುವಳಿದಾರರನ್ನು ಒಕ್ಕಲೆಬ್ಬಿಸಲು ಮುಂದಾಗಿದೆ ಎಂದರು.

ಶಾಸಕ ಕುಮಾರ್ ಬಂಗಾರಪ್ಪ ತೆರವು ಸ್ಥಳಕ್ಕೆ ಭೇಟಿ ನೀಡಿ ಭೂಮಿ ತೆರವುಗೊಳಿಸದಂತೆ ಅಧಿಕಾರಿಗಳ ಎದುರು ರೈತರಿಗೆ ನಾಟಕೀಯ ಭರವಸೆ ನೀಡಿ‌ ಪುನಃ ಅರಣ್ಯಾಧಿಕಾರಿಗಳ ಮೇಲೆ ಒತ್ತಡ ಹೇರಿ 6ಜನ ರೈತರ ಒಟ್ಟು 27 ಎಕರೆಯಲ್ಲಿ ಬೆಳೆಯಲಾಗಿದ್ದ ಅಡಿಕೆ ತೋಟವನ್ನು ನಾಶಪಡಿಸಿರುವುದರ ಹಿಂದೆ ಶಾಸಕರ ಕುಮ್ಮಕ್ಕು ಇದೆ. ಬಡ ರೈತರು ಬೀದಿಗೆ ಬರಲು ಕುಮಾರ್ ಬಂಗಾರಪ್ಪ ಅವರೆ ನೇರ ಹೊಣೆಯಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂತ್ರಸ್ತ ರೈತ ಮಹಿಳೆ ಗಂಗಮ್ಮ ಈಚೆಗೆ ಪತಿಯನ್ನು ಕಳೆದುಕೊಳ್ಳುವ ಜತೆಗೆ ಭೂಮಿ ಕಳೆದುಕೊಂಡು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಮನಗಂಡು ಮಧು ಬಂಗಾರಪ್ಪ ಅವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಗೆ ಯಾರಾದರೂ ಆರ್ಥಿಕ ಸಂಕಷ್ಟಕ್ಕೆ ಕೈಜೋಡಿಸುತ್ತೀರಾ ಎಂದು ಕೇಳಿದ ಒಂದೇ ಮಾತಿಗೆ ಸ್ಥಳದಲ್ಲಿಯೇ ರೂ 2.50 ಲಕ್ಷಕ್ಕೂ ಅಧಿಕ ಸಂಗ್ರಹವಾಗಿದ್ದು, ಮಧು ಬಂಗಾರಪ್ಪ ವ್ಯೆಯಕ್ತಿಕವಾಗಿ ರೂ 1ಲಕ್ಷ ಸಹಾಯ ಮಾಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ರಮೇಶ್,, ಕೆಪಿಸಿಸಿ ಹಿಂದುಳಿದ ವರ್ಗಗಳ ಸಂಯೋಜಕ ಜಿ.ಡಿ. ಮಂಜುನಾಥ್ ವಿಶ್ವನಾಥ್ ಕಾಶಿ ಗಣಪತಿ ಹುಲ್ತಿಕೊಪ್ಪ ಎಂ ಡಿ ಶೇಖರ್ ಕೆ.ಮಂಜುನಾಥ್, ಅಣ್ಣಪ್ಪ, ಸದಾನಂದಗೌಡ, ಕೆ ವಿ ಗೌಡ ಕೆ ಪಿ ರುದ್ರಗೌಡ ಎಲ್ ಜಿ ರಾಜು ಸುರೇಶ್ ಹಾವಣ್ಣನವರ್ ರಮೇಶ್ ಇದ್ದರು.

ವರದಿ ಪ್ರಜಾ ಶಕ್ತಿ…