ಶಿವಮೊಗ್ಗ: ಇಷ್ಟರಲ್ಲಿಯೇ ವಿಧಾನ ಪರಿಷತ್ ಶಾಸಕನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಜೊತೆಗೆ ಕ.ಎಸ್ ಈಶ್ವರಪ್ಪ ಅವರಾಗಲಿ, ಅವರ ಮಗನಾಗಲಿ ನನ್ನ ವಿರುದ್ಧ ಸ್ಪರ್ಧಿಸುವಂತೆ ರಣಾಹ್ವಾನ ನೀಡುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಇಂದು ಸವಾಲು ಹಾಕಿದರು.

ಹೋಟೆಲ್ ಮಥುರಾ ಪ್ಯಾರಾಡೈಸ್‍ನಲ್ಲಿ ನಡೆದ ಪತ್ರಿಕಾಗೋಷ್ಠಿಯ ಉದ್ದಕ್ಕೂ ಶಾಸಕ ಕೆ.ಎಸ್. ಈಶ್ವರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡು ವ್ಯಂಗ್ಯಮಿಶ್ರಿತ ಧ್ವನಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಆಯನೂರು ಮಂಜುನಾಥ್ ಮುಂಬರು ವಿಧಾಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಯಕೆಯನ್ನು ಬಿಚ್ಚಿಟ್ಟರು.
ಈಶ್ವರಪ್ಪನವರು ಈ ಹಿಂದೆ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡಿದ್ದನ್ನೇ ಪ್ರಮುಖ ಆಯುಧವನ್ನಾಗಿ ಬಳಸಿಕೊಂಡ ಆಯನೂರು ಈಶ್ವರಪ್ಪ ಅವರು, `ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿ ನಿನ್ನನ್ನೇ ಕೇರ್ ಮಾಡಲ್ಲ. ಅವನದೇನು ಲೆಕ್ಕ? ಎಂದು ನನ್ನ ವಿರುದ್ಧವೇ ಏಕವಚನದಲ್ಲಿ ಮಾತನಾಡಿದ್ದಾರೆ. ಅವರ ಏಕವಚನ ಅವರ ಶಿಕ್ಷಣ ಮಟ್ಟವನ್ನು ಸೂಚಿಸುತ್ತದೆ. ಅವರ ವಿಚೇಚನೆಯ ಲೆಕ್ಕ ತೋರಿಸುತ್ತದೆ. ಅವರಿಗೆ ನಾಲಿಗೆ ಮೇಲೆ ಹಿಡಿತ ಇಲ್ಲ ಎನ್ನುವುದನ್ನು ಮತ್ತೆ ಮತ್ತೆ ಸಾಬೀಸುಪಡಿಸುತ್ತದೆ. ಅವರಿಗೆ ಬಹುವಚನ ಗೊತ್ತೇ ಇಲ್ಲ. ನಾನ್ಯಾವ ಲೆಕ್ಕ ಎನ್ನುವುದನ್ನು ಅವರಿಗೆ ತೋರಿಸುತ್ತೇನೆ. ಈ ರಾಜಕೀಯ ಲೆಕ್ಕಾಚಾರವನ್ನು ಎಣಿಸಲು ಅವರ ಮನೆಯಲ್ಲಿರುವ ಹಳೆ ಕೌಂಟಿಂಗ್ ಮಿಷಿಷನ್‍ಗಳನ್ನು ಉಪಯೋಗಿಸಲಿ ಎಂದು ಹರಿತ ಮತ್ತು ವ್ಯಂಗ್ಯದ ಧ್ವನಿಯಲ್ಲಿ ಹೇಳಿದರು.

ಈಶ್ವರಪ್ಪನವರಿಗೆ ಅಧಿಕಾರದ ದಾಹ ಹಪಾಹಪಿತನ ಎಷ್ಟಿದೆ ಎಂದರೆ ತಮಗೆ ಟಿಕೆಟ್ ಸಿಗದಿದ್ದರೆ ತಮ್ಮ ಮಗನಿಗಾದರೂ ಸಿಗಬೇಕು ಎಂದು ಒದ್ದಾಡುತ್ತಿದ್ದಾರೆ. ಬಿಜೆಪಿಯಲ್ಲಿ ರುದ್ರೇಗೌಡರ, ಸಿದ್ರಾಮಣ್ಣ, ಭಾನುಪ್ರಕಾಶ್, ಗಿರೀಶ್ ಪಟೇಲ್, ಚನ್ನಬಸಪ್ಪ, ದತ್ತಾತ್ರಿ ಮುಂತಾದವರು ಇರಲಿಲ್ಲವೇ? ಇವರಿಗೆ ಪಕ್ಷಕ್ಕಿಂತ ಮಗನೇ ಹೆಚ್ಚಾದನೆ ಎಂದು ಪ್ರಶ್ನಿಸಿದರು.

ಈಶ್ವರಪ್ಪ ರಾಜ್ಯ ನಾಯಕರು. ಎಷ್ಟು ಎಚಿದರೆ ಶಿವಮೊಗ್ಗವನ್ನು ಬಿಟ್ಟು ಬೇರೆ ಎಲ್ಲೂ ಗೆಲ್ಲಲಾರದಷ್ಟು. ಈಶ್ವರಪ್ಪನವರು ಹೇಳಿಕೆಯನ್ನು ನಾನು ಗಂಭೀರವಾಗಿ ಪರಿಗಣಿಸಿದ್ದೇನೆ. ಅವರ ವಿರುದ್ಧ ಸ್ಪಧೆ ್ ಮಾಡಲೇಬೇಕು ಎಂದು ತಿರ್ಮಾನಿಸಿದ್ದೇನೆ. ಬಿಜೆಪಿಯಲ್ಲಿ ನನಗೇ ಟಿಕೆಟ್ ಸಿಗಬಹುದು ಎಂಬ ಯಾವ ಲP್ಪ್ಷಣಗಳೂ ಈಗ ಕಾಣಿಸುತ್ತಿಲ್ಲ. ಹಾಗಾಗಿ ತಮ್ಮ ಸ್ಥಾನಕ್ಕೆ ಇನ್ನು ಎರಡು ಮೂರು ದಿನಗಳಲ್ಲಿ ರಾಜೀನಾಮೆ ನೀಡುತ್ತೇನೆ. ಶಿವಮೊಗ್ಗದಲ್ಲಿ ನನ್ನ ಸ್ಪರ್ಧೆ ಖಚಿತ. ನನ್ನ ನಿಲುವುಗಳನ್ನು, ನನ್ನ ಭಾವನೆಗಳನ್ನು ಈಗಾಗಲೇ ಪಕ್ಷದ ಮುಖಂಡರ ಗಮನಕ್ಕೆ ತಂದಿದ್ದೇನೆ ಎಂದರು.

ಈಶ್ವರಪ್ಪನವರಿಗೆ ಹಣದ ಮದ ಇದೆ. ಅಧಿಕಾರದ ಮದವಿದೆ. ಸಂವಿಧಾನವೇ ಗೊತ್ತಿಲ್ಲ. ಅವರು ಶಾಸಕ ಸ್ಥಾನಕ್ಕೆ ಸ್ಪರ್ಧಿಸುವವರಲ್ಲ. ಮಂತ್ರಿ ಸ್ಥಾನಕ್ಕೆ ಸ್ಪರ್ಧಿಸುವವರು. ಮಂತ್ರಿ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಸದನಕ್ಕೆ ಹೋಗದೆ ಅಗೌರವ ತೋರಿಸಿದವರು. ಅವರಿಗೆ ಆಚಾರವೂ ಗೊತ್ತಿಲ್ಲ. ವಿಚಾರವೂ ಗೊತ್ತಿಲ್ಲ. ಸೊಳ್ಳೆ ಓಡಿಸಲಾಗದವರು ಸೊಳ್ಳೆಪರದೆ ಕೊಟ್ಟರು. ಕೇವಲ ಪ್ರಚೋದನೆಗಳ ಮೂಲಕ ಶಾಂತಿಯನ್ನೇ ಕದಡುವ ಅವರಿಗೆ ಯಾವ ಮುಜುಗರವೂ ಇಲ್ಲ. ನಾಚಿಕೆಯೂ ಇಲ್ಲ. ಇತ್ತೀಚೆಗೆ ಶಿವಮೊಗ್ಗದಲ್ಲಿ 4.5 ಕೋಟಿ ಬೆಲೆ ಬಾಳುವ ಸೀರೆಗಳು, 1.30 ಕೋಟಿ ಕ್ಯಾಶ್ ಸಿಕ್ಕಿದೆ. ಇಷ್ಟೊಂದು ಹಂಚಲು ಇರುವ ಶಕ್ತಿ ಇನ್ಯಾರಿಗಿದೆ ಎಂದು ಅಪ್ರತ್ಯಕ್ಷವಾಗಿ ಈಶ್ವರಪ್ಪನವರ ಕಡೆಗೆ ಬೊಟ್ಟು ತೋರಿಸಿದರು.

ಆಯನೂರು ಮಾತುಗಳು…

  1. ಶಿವಮೊಗ್ಗದಲ್ಲಿ ಶಾಂತಿ ನೆಲೆಸಬೇಕು.
  2. ಅಶಾಂತಿಯ ಸೂಚನೆಗಳಿವೆ. ಎಚ್ಚರ ಅಗತ್ಯ
  3. ಹಣ, ಅಧಿಕಾರದ ದಾಹಕ್ಕೆ ಇತಿಶ್ರೀ ಹಾಡಬೇಕು
  4. ಅವನದೇನು ಲೆಕ್ಕ ಎನ್ನುವವರಿಗೆ ಎಣಿಕೆ ಮಿಷನ್ ಲೆಕ್ಕ ಕೊಡುತ್ತದೆ.
  5. ಈಶ್ವರಪ್ಪ-ಮಗ ಈ ಚೈನ್ ಇಲ್ಲಿಗೆ ತುಂಡಾಗಬೇಕು
  6. ಬಿ.ಎಸ್.ವೈ. ಟೀಕಿಸಿದವರಿಗೆ ಪಾಠವಾಗಬೇಕು
  7. ಮುರಿದುಹೋದ ಮನಸುಗಳು ಬೆಸುಗೆಯಾಗಬೇಕು.
    7 ಸೊಳ್ಳೆಪರದೆ ಬೇಡ. ಸೊಳ್ಳೆ ಓಡಿಸಬೇಕು.
  8. ಕಾರ್ಮಿಕರು, ಮುಸ್ಲಿಂರು, ಆಟೋ ಚಾಲಕರು ನನ್ನ ಜೊತೆಗಿದ್ದಾರೆ.
  9. ನಾಲಿಗೆ ತನ್ನ ಗುಣ ಹೇಳುತ್ತದೆ.
  10. ನನ್ನ ಸ್ಪರ್ಧೆ ಖಚಿತ. ಇಷ್ಟರಲ್ಲೇ ರಾಜೀನಾಮೆ

ವರದಿ ಪ್ರಜಾ ಶಕ್ತಿ…