ಸರ್ಕಾರ 2021-22 ನೇ ಸಾಲಿನ ಆಯ-ವ್ಯಯ ಮಂಡಿಸುವಾಗ ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪಿಸುವ ಕುರಿತು ಹಾಗೂ ನಿಗಮಕ್ಕೆ 500 ಕೋಟಿ ರೂ ಕಾದಿರಿಸುವ ಘೋಷಣೆ ಮಾಡಿದ್ದು , ಅದರಂತೆ ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ 17-07-2021 ರಂದು ಸರ್ಕಾರದ ಅಧೀನ ಕಾರ್ಯದರ್ಶಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರು ಅಧಿಕೃತವಾಗಿ ನಿಗಮ ಸ್ಥಾಪನೆಗೆ ಆದೇಶ ಹೊರಡಿಸಿದ್ದು , ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿ ಒಕ್ಕಲಿಗ , ಸರ್ಪ ಒಕ್ಕಲಿಗ , ಹಳ್ಳಿಕಾರ್ ಒಕ್ಕಲಿಗ , ನಾಮಧಾರಿ ಒಕ್ಕಲಿಗ , ಗಂಗಡ್ ಕಾರ್ ಒಕ್ಕಲಿಗ , ದಾಸ್ ಒಕ್ಕಲಿಗ , ರೆಡ್ಡಿ ಒಕ್ಕಲಿಗ ,ಮರಸು ಒಕ್ಕಲಿಗ ,ಗೌಡ , ಕುಂಚಿಟಿಗ ಗೌಡ , ಕಾಪು , ಹೆಗ್ಗಡೆ , ಕಮ್ಮ ,ರಡ್ಡಿ ,ಗೌಂಡರ್ ,ನಾಮಧಾರಿ ಗೌಡ , ಉಪ್ಪಿನ ಕೊಳಗ / ಉತ್ತಮ ಕೊಳಗ ಜಾತಿಗಳಿಗೆ ಪ್ರವರ್ಗ 3 ‘ಎ ‘ ನಲ್ಲಿಯ ಕ್ರ. ಸ೦ 1 ರ (a) ಇಂದ (1) ವರೆಗೆ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗಾಗಿ ಒಕ್ಕಲಿಗರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಆದೇಶಿಸಿದೆ .
ಒಕ್ಕಲಿಗರ ಸಮುದಾಯದ ಅಭಿವೃದ್ಧಿಗಾಗಿ ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪಿಸಲು ವಿಶೇಷ ಕಾಳಜಿ ವಹಿಸಿದ ಮುಖ್ಯಮಂತ್ರಿ ಸನ್ಮಾನ್ಯ ಬಿ.ಎಸ್ . ಯಡಿಯೂರಪ್ಪನವರು ಹಾಗೂ ಸಚಿವ ಸಂಪುಟದ ಎಲ್ಲ ಮಂತ್ರಿಗಳು ಮತ್ತು ನೇರವಾಗಿ ಮತ್ತು ಪರೋಕ್ಷವಾಗಿ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಒಕ್ಕೂಟವು ಸಮಸ್ತ ಒಕ್ಕಲಿಗ ಸಂಘಟನೆಗಳು ಒಕ್ಕಲಿಗ ಸಮುದಾಯದ ಪರವಾಗಿ ಪಕ್ಷಾತೀತವಾಗಿ ಅಭಿನಂದನೆ ಹಾಗು ಧನ್ಯವಾದಗಳನ್ನು ಸಲ್ಲಿಸುತ್ತದೆ.
ಈ ಸಂದರ್ಭದಲ್ಲಿ ಗೋ ರಮೇಶ್ ಗೌಡ ಅಧ್ಯಕ್ಷರು , ದಿನೇಶ್ ಹಿ.ಉಪಾಧ್ಯಕ್ಷರು , ಶಾಂತ ಸುರೇಂದ್ರ ಗೌರವಧ್ಯಕ್ಷರು , ನಿಂಗರಾಜು ಉಪಾಧ್ಯಕ್ಷರು , ನರಸಿಂಹ , ದೇವೇಂದ್ರ ಪ್ರ ಕಾರ್ಯದರ್ಶಿ , ಕುಮಾರ್ ಖಜಾಂಚಿ , ವಾಸಣ್ಣ ನಿರ್ದೇಶಕರು , ಗೋವಿಂದಪ್ಪ ನಿರ್ದೇಶಕರು , ಶಾಂತಮ್ಮ , ಕೀರ್ತಿ ಪೂರ್ಣೇಶ್ , ಮುಂತಾದವರು ಉಪಸ್ಥಿತರಿದ್ದರು .
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ
CCTV SALES & SERVICE
9880074684
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153