ಭಾರತೀಯ ವೈದ್ಯಕೀಯ ಸಂಘ ಶಿವಮೊಗ್ಗ ಶಾಖೆಯಿಂದ ಸೈಕಲ್ ಜಾಥಾ ಮೂಲಕ ಆಚರಿಸಿದರು.ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ಸೈಕಲ್ ಕ್ಲಬ್ ಸದಸ್ಯರೂ ಐಎಂಎ ಹಾಲ್ನಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಎಸ್ಪಿ ಮಿಥುನಕುಮಾರ್ ಅವರು ಹಸಿರು ಭಾವುಟದಿಂದ ಸೈಕಲ್ ಜಾಥಾಗೆ ಚಾಲನೆ ನೀಡುತ್ತಾ ಉದ್ಘಾಟಿಸಿದರು.

ಬದಲಾದ ಜೀವನಶೈಲಿಯ ಪ್ರಭಾವದಿಂದ ಇಂದಿನ ದಿನಗಳಲ್ಲಿ ಆರೋಗ್ಯ ಹದಗೆಡುತ್ತಿದೆ . ಅದಕ್ಕೋಸ್ಕರ ಎಲ್ಲ ವಯಸ್ಸಿನವರೂ ಸೇರಿ ತಮ್ಮ ದಿನಚರಿಯಲ್ಲಿ ದೈಹಿಕ ಚಟುವಟಿಕೆಗೆ ಸಮಯ ಕಲ್ಪಿಸಿಕೊಂಡು ನಿರಂತರವಾಗಿ ಅದನ್ನು ಪಾಲಿಸ ಬೇಕು . ವ್ಯಾಯಾಮ ಉತ್ತಮ ಆರೋಗ್ಯಕ್ಕೆ ರಹದಾರಿ ಎಂಬ ಮುಖ್ಯವಾದ ಸಂದೇಶವನ್ನು ಕೊಟ್ಟರು . ಐಎಂಎ ಅಧ್ಯಕ್ಷರಾದ ಡಾ . ಅರುಣ್.ಎಂ.ಎಸ್ ಅವರು ಜಾಗತಿಕವಾಗಿ ಆಚರಿಸಲ್ಪಡುವ ವಿಶ್ವ ಆರೋಗ್ಯ ದಿನಾಚರಣೆ ಜನರಲ್ಲಿ ಉತ್ತಮ ಆರೋಗ್ಯಕ್ಕಾಗಿ ಪಾಲಿಸಬೇಕಾದ ಸೂತ್ರಗಳ ಬಗ್ಗೆ ಜಾಗೃತಗೊಳಿಸಲು ಅವಕಾಶ ಕಲ್ಪಿಸುತ್ತದೆ ಎಂದರು.

ಆರೋಗ್ಯವು ಜೀವನದ ಮೂಲತತ್ವ, ಅದು ಇಲ್ಲದೆ ಎಲ್ಲವೂ ನಿಷ್ಪ್ರಯೋಜಕ ಎಂದು ನುಡಿದರು . ಸೈಕಲ್ ಜಾಥಾ ಆರೋಗ್ಯ ಘೋಷಣೆಗಳೊಂದಿಗೆ ನಗರದ ಜೈಲ್ ಸರ್ಕಲ್ ,ಲಕ್ಷ್ಮಿ ಚಿತ್ರಮಂದಿರ , ಉಷಾ ನರ್ಸಿಂಗ್ ಹೋಂ , ಸವಳಂಗ ರಸ್ತೆ – ಈ ಪ್ರಮುಖ ಬೀದಿಗಳ ಮೂಲಕ ತೆರಳಿ ಅಬ್ಬಲಗೆರೆ ಈಶ್ವರ ವನದಲ್ಲಿ ತೆರವುಕಂಡಿತು . ಪ್ರಮುಖರಾದ ಡಾ . ಶ್ರೀಕಾಂತ್ ಹೆಗ್ಡೆ , ಡಾ . ಪರಮೇಶ್ವರ್ , ಡಾ . ವಿನಾಯಕ್ ಬಾಬು , ಡಾ . ಚಂದ್ರಪ್ರಕಾಶ್ , ಡಾ . ಶಂಭುಲಿಂಗ , ಡಾ . ಕೌಸ್ತುಭ ಹಾಗು ಶ್ರೀ . ವಿಜಯಕುಮಾರ್ , ಶ್ರೀ . ಗಿರೀಶ್ , ಶ್ರೀ. ನವ್ಯಶ್ರೀ ನಾಗೇಶ್ ಉಪಸ್ಥಿತರಿದ್ದರು . ಐಎಂಎ ಕಾರ್ಯದರ್ಶಿ ಡಾ . ರಕ್ಷಾ ರಾವ್ ಸ್ವಾಗತ ಕೋರಿ ನಿರೂಪಿಸಿದರು . ಎಸ್ ಸಿ ಸಿ ಅಧ್ಯಕ್ಷ ಶ್ರೀ . ಶ್ರೀಕಾಂತ್ ವಂದನಾರ್ಪಣೆ ಮಾಡಿದರು . ಹಿರಿಯ ಕಿರಿಯ ಐಎಂಎ ಹಾಗು ಎಸ್ ಸಿ ಸಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ವರದಿ ಪ್ರಜಾ ಶಕ್ತಿ…