ಶಿವಮೊಗ್ಗ: ಗೋಪಾಲಗೌಡ ಬಡಾವಣೆಯ ಚಂದನ ಪಾರ್ಕ್ ಗೆಳೆಯರ ಬಳಗದಿಂದ ಇಂದು ಮತದಾನ ಜಾಗೃತಿ ಜೊತೆಗೆ ಪಾರ್ಕ್ ಸ್ವಚ್ಛಗೊಳಿಸುವ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಇಂಜಿನಿಯರ್ ಎ. ಹಾಲೇಶಪ್ಪ, ಬಲಿಷ್ಠ ಭವ್ಯ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಮತದಾನದಲ್ಲಿ ಪಾಲ್ಗೊಳ್ಳಬೇಕು. ಅದರಲ್ಲೂ ಯುವಕರು ಮತದಾನದ ಪ್ರಕ್ರಿಯೆಯಿಂದ ದೂರ ಉಳಿಯಬಾರದು. ಪ್ರಜಾಪ್ರಭುತ್ವದ ಯಶಸ್ಸಿಗೆ ಮತದಾನವೇ ಅಡಿಗಲ್ಲು ಎಂದರು.
ಮತದಾನ ಎಂಬುದು ಅಭಿವೃದ್ಧಿಗೂ ಪೂರಕವಾಗುತ್ತದೆ. ಒಳ್ಳೆಯ ಆಡಳಿತಕ್ಕೆ ಪ್ರೇರಕವಾಗುತ್ತದೆ. ನಿರ್ಭೀತಿಯಿಂದ ಎಲ್ಲರೂ ಮತ ಹಾಕಬೇಕು ಎಂದು ಕರೆ ನೀಡಿದರು.

ನಿವೃತ್ತ ಶಿಕ್ಷಕ ಜಿ. ಕೆಂಚಪ್ಪ ಮಾತನಾಡಿ, ಯಾವುದೇ ಆಮಿಷಗಳಿಗೆ ಒಳಗಾಗದೆ ಒಳ್ಳೆಯವರನ್ನು ಗುರುತಿಸಿ ಮತ ಚಲಾಯಿಸಿ. ಒಳ್ಳೆಯ ವ್ಯಕ್ತಿಗಳಿಂದ ಒಳ್ಳೆಯ ಸರ್ಕಾರ ಬಂದು ಒಳ್ಳೆಯ ಆಡಳಿತ ನಡೆಸಲು ಸಹಕಾರವಾಗುತ್ತದೆ ಎಂದರು.
ಪಾರ್ಕ್ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಯಣ್ಣ ಮಾತನಾಡಿ, ರಾಜಕೀಯ ಪಕ್ಷದವರು ಮತ ಸೆಳೆಯಲು ಅನೇಕ ಆಸೆ, ಆಮಿಷಗಳನ್ನು ನೀಡುತ್ತಾರೆ. ಅವುಗಳಿಗೆ ಬಲಿಯಾಗದೆ ಮತ್ತು ನಿರ್ಲಕ್ಷ್ಯ ಮಾಡದೆ ಜವಾಬ್ದಾರಿಯಿಂದ ಮತ ಚಲಾಯಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಪಾರ್ಕ್ ಸ್ವಚ್ಛಗೊಳಿಸಲಾಯಿತು.

ಈ ಸಂದರ್ಭದಲ್ಲಿ ಪ್ರಮುಖರಾದ ಜಿ. ನಾಗಪ್ಪ, ಟಿ.ವಿ. ಲಕ್ಷ್ಮಣರೆಡ್ಡಿ, ಪ್ರೀತಮ್ ಶೆಟ್ಟಿ ,ದೇವರಾಜು, ಚಂದ್ರು, ನವಿಲಪ್ಪ, ಶಿವಕುಮಾರ್, ಪ್ರಭಾಕರ್, ರಂಗನಾಥ್, ಕರಿಯಣ್ಣ, ಜಯಣ್ಣ, ಶ್ರೀನಿವಾಸಮೂರ್ತಿ, ಮಲ್ಲಿಕಾರ್ಜುನ್ ಸೇರಿದಂತೆ ಹಲವರಿದ್ದರು.

ವರದಿ ಪ್ರಜಾ ಶಕ್ತಿ…