ಶಿವಮೊಗ್ಗ: ಚನ್ನಗಿರಿ ತಾಲ್ಲೂಕಿನ ಸೂಳೆಕೆರೆ,ಸಂತೆಬೆನ್ನೂರುನಲ್ಲಿ ಪುಂಡಾಟ ನಡೆಸಿ, ಯುವತಿಯೊಬ್ಬಳನ್ನು ತುಳಿದು ಸಾಯಿಸಿದ್ದ ಒಂಟಿ ಸಲಗವನ್ನು ಇಂದು ಅವಳಿ ತಾಲ್ಲೂಕಿನ ಜೀನಹಳ್ಳಿ-ಕೆಂಚಿಕೊಪ್ಪ ಬಳಿ ಅರವಳಿಕೆ ನೀಡಿ ಸೆರೆ ಹಿಡಿಯಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಡಾ.ವಿನಯ್ ಮೇಲೆ ಪುಂಡಾನೆ ಮಾರಣಾಂತಿಕ ದಾಳಿ ನಡೆಸಿದ್ದು ವಿನಯ್ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.

ವರದಿ ಪ್ರಜಾ ಶಕ್ತಿ…