ಶಿವಮೊಗ್ಗ: ಗಾಂಧೀಜಿಯವರ ಸತ್ಯಾನ್ವೇಷಣೆ ಮತ್ತು ಅವರ ಆತ್ಮಚರಿತ್ರೆಯ ಪುಸ್ತಕ ನನ್ನ ಬದುಕನ್ನೇ ಬದಲಾಯಿಸಿತು. ಪಾತಕಲೋಕದಲ್ಲಿದ್ದ ನನ್ನನ್ನು ಒಳ್ಳೆಯ ಮನುಷ್ಯನನ್ನಾಗಿ ಪರಿವರ್ತಿಸಿತು ಎಂದು ಜಿಂದಗಿ ಲೈವ್ ರಾಷ್ಟಿçÃಯ ಪ್ರಶಸ್ತಿ ವಿಜೇತ ಹಾಗೂ ಗಾಂಧೀವಾದಿ ಲಕ್ಷö್ಮಣ ತುಕಾರಾಂ ಗೋಲೆ ಹೇಳಿದರು.

ಅವರು ಇಂದು ಮೀಡಿಯಾ ಹೌಸ್‌ನಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸತ್ಯ ಎಂದಿಗೂ ಗೆಲ್ಲುತ್ತದೆ. ಒಳ್ಳೆಯ ಪುಸ್ತಕಗಳನ್ನು ಓದುವುದರಿಂದ ಅಪರಾಧ ಪ್ರಜ್ಞೆ ಹೊರಟು ಹೋಗುತ್ತದೆ. ಒಳ್ಳೆಯ ಮನುಷ್ಯನನ್ನಾಗಿ ಅವು ಬದಲಾಯಿಸುತ್ತವೆ. ನನ್ನ ಬದುಕನ್ನು ಕೂಡ ಇಂತಹ ಪುಸ್ತಕಗಳೇ ಬದಲಾಯಿಸಿದವು. ೧೪ನೇ ವಯಸ್ಸಿನಲ್ಲಿಯೇ ನಾನು ಅಪರಾಧ ಕೃತ್ಯ ಮಾಡಿ ಜೈಲು ಸೇರಿದೆ. ನಂತರ ನನ್ನ ಜೈಲು ಪಯಣ ಸಾಗಿತು. ಸುಮಾರು ವರ್ಷಗಳ ಕಾಲ ಜೈಲಿನಲ್ಲೇ ಇದ್ದೆ. ನಾಸಿಕ್ ಜೈಲಿನಲ್ಲಿ ಬಂಧಿತನಾಗಿದ್ದಾಗ ಗಾಂಧೀಜಿಯವರ ಆತ್ಮಚರಿತ್ರೆ `ದಸ್ಟೋರಿ ಆಫ್ ಮೈ ಎಕ್ಸ÷್ಪರಿಮೆಂಟ್ ವಿತ್ ಟ್ರೂತ್ಸ್’ ಪುಸ್ತಕ ಕಣ್ಣಿಗೆ ಬಿತ್ತು. ಅದನ್ನು ಓದುತ್ತಾ ಹೋದ ಹಾಗೆ ನನ್ನ ಮನಸ್ಸು ಪರಿವರ್ತನೆಯಾಯಿತು ಎಂದರು.
ನನ್ನ ಅಪರಾಧಗಳನ್ನು ನಾನು ನ್ಯಾಯಾಧೀಶರ ಮುಂದೆ ಒಪ್ಪಿಕೊಂಡು ಶಿಕ್ಷೆ ಕೊಡಲು ಮನವಿ ಮಾಡಿದೆ. ಅದಕ್ಕೆ ತಕ್ಕಂತೆ ಶಿಕ್ಷೆ ಅನುಭವಿಸಿದೆ. ನನ್ನ ಮೇಲೆ ಒಟ್ಟು ೧೯ ಪ್ರಕರಣಗಳು ದಾಖಲಾಗಿದ್ದವು. ಹದಿನೆಂಟು ಪ್ರಕರಣಗಳಲ್ಲಿ ಖುಲಾಸೆಗೊಳಿಸಲಾಯಿತು. ಜೈಲಿನಿಂದ ಬಿಡುಗಡೆ ಆದ ನಂತರ ಸರ್ವೋದಯ ಮಂಡಲಿಗಾಗಿ ಕೆಲಸ ಮಾಡಿದೆ. ತಿಹಾರ್ ಜೈಲು ಸೇರಿದಂತೆ ಭಾರತೀಯ ಜೈಲುಗಳಲ್ಲಿ ಗಾಂಧಿ ತತ್ವ ಶಾಸ್ತç ಕುರಿತು ಉಪನ್ಯಾಸ ನೀಡಿದೆ ಎಂದರು.

ಜೈಲಿನಿAದ ಬಂದ ನಾನು ಗಾಂಧಿ ತತ್ವದ ಪ್ರಚಾರದವರೆಗೆ ಬಂದಿದ್ದು, ಪುಸ್ತಕಗಳಿಂದಲೇ ಎಂದು ಹೇಳಬಹುದು. ಪುಸ್ತಕಗಳು ಅಂತರAಗದ ಶೋಧಕಗಳು. ಆತ್ಮದ ಪರಿಶೋಧನೆ ಮಾಡುತ್ತವೆ. ನನಗೆ ಆದದ್ದೂ ಹಾಗೆಯೇ. ರಕ್ತ ಚಿಮ್ಮಿಸಿದ ಕೈಗಳಿಂದ ರಕ್ತದಾನ ಮಾಡುವವರೆಗೂ ಬೆಳೆದು ಬಂದೆ. ಇದು ನನ್ನ ಬಾಳಿನಲ್ಲಿ ಆದ ಮಹತ್ತರವಾದ ಬದಲಾವಣೆ ಎಂದರು.

ನಮ್ಮೊಳಗೇ ಶತ್ರುಗಳಿದ್ದಾರೆ. ಕಾಮ. ಕ್ರೋಧ, ಮೋಹ, ಮದ, ಮತ್ಸರ ಇವೆಲ್ಲವೂ ನಮ್ಮ ಶತ್ರುಗಳು. ಇವುಗಳನ್ನು ಗೆಲ್ಲಬೇಕಾದದ್ದೇ ನಮ್ಮ ವ್ಯಕ್ತಿತ್ವ ಬೆಳೆಸಿಕೊಳ್ಳುವ ರೀತಿಯಾಗಿದೆ. ಜೈಲಿನಲ್ಲಿರುವ ಖೈದಿಗಳ ಮನ ಪರಿವರ್ತನೆಗಾಗಿಯೇ ನನ್ನ ಬದುಕನ್ನು ಮೀಸಲಾಗಿಡುವೆ. ಅಪರಾಧಗಳನ್ನು ತಿದ್ದಿಕೊಂಡು ಒಳ್ಳೆಯ ಮನುಷ್ಯತ್ವ ಬೆಳೆಸಿಕೊಳ್ಳುವುದೇ ಇದರ ಉದ್ದೇಶವಾಗಿದೆ. ಭಾರತದಲ್ಲಿ ಖೈದಿಗಳ ಮನ ಪರಿವರ್ತನೆಗೆ ಅವಕಾಶವಿದೆ ಎಂದರು.

ಸಂವಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಜಿಲ್ಲಾಧ್ಯಕ್ಷ ಕೆ.ವಿ. ಶಿವಕುಮಾರ್ ವಹಿಸಿದ್ದರು. ಪ್ರಮುಖರಾದ ವಿ.ಟಿ. ಅರುಣ್, ದೀಪಕ್ ಸಾಗರ್, ವೈದ್ಯ, ಲೇಖಕ ಡಾ. ಹೆಚ್.ಎಸ್. ಸುರೇಶ್, ಕಮಲಾ ನೆಹರು ಕಾಲೇಜಿನ ಪ್ರಾಂಶುಪಾಲ ನಾಗಭೂಷಣ್ ಇದ್ದರು.

ವರದಿ ಪ್ರಜಾ ಶಕ್ತಿ…