ಶಿವಮೊಗ್ಗ: ಮತದಾನ ಜಾಗೃತಿಗೆ ಸಂಬAಧಿಸಿದAತೆ ಹಲವು ವಿಶಿಷ್ಟ ವಿನೂತನ ಆಕರ್ಷಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಹೇಳಿದರು.

ಅವರು ಪಾಲಿಕೆ ಆವರಣದಲ್ಲಿ ಮತದಾರರ ಜಾಗೃತಿಗಾಗಿ ಆಯೋಜಿಸಿದ್ದ ಬೈಕ್ ರ‍್ಯಾಲಿಗೆ ಚಾಲನೆ ನೀಡಿ ಮಾತನಾಡಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮಹಾನಗರ ಪಾಲಿಕೆ, ಸ್ವೀಪ್ ಸಂಸ್ಥೆಗಳು ಮತದಾನ ಜಾಗೃತಿಗಾಗಿ ಈಗಾಗಲೇ ಹಲವು ಕಾರ್ಯಕ್ರಮಗಳನ್ನು ರೂಪಿಸಿ ಯಶಸ್ಸಿನತ್ತ ಸಾಗುತ್ತಿದೆ ಎಂದರು.
ಇದನ್ನು ಮತ್ತಷ್ಟು ಆಕರ್ಷಕಗೊಳಿಸಲು ಮತಕೇಂದ್ರಗಳನ್ನು ಜನಸ್ನೇಹಿಯಾಗಿ ರೂಪುಗೊಳಿಸಲಾಗುತ್ತದೆ. ಇದು ತಾಂತ್ರಿಕ ಯುಗವಾದ್ದರಿಂದ ಯುವಕ ಯುವತಿಯರನ್ನು ಆಕರ್ಷಿಸಲು ಸೆಲ್ಫಿ ಪಾಯಿಂಟ್‌ಗಳನ್ನು ಮತಗಟ್ಟೆಯ ಸಮೀಪ ನಿರ್ಮಿಸಲಾಗುವುದು. ಸಾಂಸ್ಕೃತಿಕ ಕಲೆಗಳನ್ನು ಬಿಂಬಿಸಲು ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಹಲವು ವಿನ್ಯಾಸಗಳ ಅಲಂಕಾರ, ಮಹಿಳೆಯರಿಗಾಗಿ ಪಿಂಕ್ ಬೂತ್‌ಗಳು, ಮತದಾರರನ್ನು ಸೆಳೆಯುವ ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.

ಕ್ರೀಡಾಸ್ಪರ್ಧೆಗಳ ಮೂಲಕ ಕೂಡ ಮತದಾರರ ಗಮನಸೆಳೆಯಲಾಗುವುದು. ಹೊನಲು ಬೆಳಕಿನ ಆಟಗಳು, ಹಲವಾರು ಜಾಥಾಗಳು, ಬೀದಿನಾಟಕಗಳು ಹೀಗೆ ಎಲ್ಲಾ ರೀತಿಯಿಂದಲೂ ಜಾಗೃತಿ ಮೂಡಿಸಲಾಗುವುದು. ಮುಖ್ಯವಾಗಿ ಕಳೆದ ಬಾರಿ ಯಾವ ಯಾವ ಮತಗಟ್ಟೆಗಳಲ್ಲಿ ಶೇಕಡವಾರು ಮತದಾನ ಕಡಿಮೆ ಆಗಿದೆಯೋ ಆ ಮತಗಟ್ಟೆಗಲ್ಲಿ ಹೆಚ್ಚು ಜಾಗೃತಿ ಮೂಡಿಸಲು ಪ್ರಯತ್ನಿಸಲಾಗುವುದು. ಜೊತೆಗೆ ಮನೆಮನೆಗೆ ತೆರಳಿ ಮೇ ೧೦ರಂದು ನಡೆಯುವ ಚುನಾವಣೆಯಲ್ಲಿ ನಿಮ್ಮ ಮತವನ್ನು ಚಲಾಯಿಸಲೇಬೇಕೆಂದು ಮನವಿ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಸ್ವೀಪ್ ಸಮಿತಿ ಅಧ್ಯಕ್ಷೆ ಅನುಪಮಾ, ಜಿ.ಪಂ. ಸಿಇಒ ಲೋಖಂಡೆ ಸ್ನೇಹಲ್ ಸುಧಾಕರ್, ಪ್ರಮುಖರಾದ ಜಿ. ಚಂದ್ರಶೇಖರ್, ಜಿ. ಪದ್ಮನಾಭ್, ಶಿ.ಜು. ಪಾಶಾ, ರತ್ನಾಕರ್, ಗೀತಾ ಸೇರಿದಂತೆ ಹಲವರಿದ್ದರು.
ಇದೇ ಸಂದರ್ಭದಲ್ಲಿ ನಗರದಲ್ಲಿ ಬೈಕ್ ಜಾಥಾದ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು.

ವರದಿ ಪ್ರಜಾ ಶಕ್ತಿ…