ಶಿವಮೊಗ್ಗ: ಈ ಬಾರಿಯ ಚುನಾವಣೆಯಲ್ಲಿ ಕೆ.ಎಸ್. ಈಶ್ವರಪ್ಪನವರಿಗೇ ಟಿಕೆಟ್ ನೀಡಬೇಕು. ಅಕಸ್ಮಾತ್ ಅದು ಸಾಧ್ಯವಾಗದಿದ್ದರೆ ಅವರ ಮಗ ಕೆ.ಈ. ಕಾಂತೇಶ್ ಅವರಿಗೆ ಟಿಕೆಟ್ ನೀಡಲೇಬೇಕು ಎಂದು ನಗರದ ವಿವಿಧ ಮಹಿಳಾ ಸಂಘಟನೆಗಳು ಹಾಗೂ ಕುರುಬ, ಬಲಿಜ ಸಮಾಜದ ಮುಖಂಡರು ಇಂದು ಬಿಜೆಪಿ ಹೈಕಮಾಂಡ್‌ಗೆ ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.
ಇಂದು ಮೀಡಿಯಾ ಹೌಸ್‌ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಸಂಗೊಳ್ಳಿ ರಾಯಣ್ಣ ಕುರುಬರ ವೇದಿಕೆ, ಕದಳಿ ವನಿತಾ ಸಮಾಜ, ಜಿಲ್ಲಾ ಕುರುಬರ ಸಂಘ, ಬಲಿಜ ಸಮಾಜದ ಮುಖಂಡರು, ಕನಕ ಮಹಿಳಾ ಸಂಘ, ಜಿಲ್ಲಾ ಜಂಗಮ ಮಹಿಳಾ ಸಮಾಜಗಳ ಪದಾಧಿಕಾರಿಗಳು, ಮುಖಂಡರು ಕೆ.ಎಸ್. ಈಶ್ವರಪ್ಪನವರಿಗೇ ಟಿಕೆಟ್ ನೀಡಬೇಕು. ಒಂದುಪಕ್ಷ ಅದಾಗದಿದ್ದರೆ ಕೆ.ಈ. ಕಾಂತೇಶ್‌ರವರಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಲ್ಲಾ ಸಂಘಟನೆಯ ಪ್ರಮುಖರು ಕೂಡ ಈಶ್ವರಪ್ಪನವರಿಗೆ ಟಿಕೆಟ್ ನೀಡದೆ ಇರುವುದನ್ನು ಬಲವಾಗಿ ವಿರೋಧಿಸಿದ್ದಾರೆ. ಬಿಜೆಪಿ ಹೈಕಮಾಂಡ್ ಯಾವ ಮಾನದಂಡದ ಮೇಲೆ ಟಿಕೆಟ್ ನೀಡುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ. ವಯಸ್ಸಾಗಿದೆ ಎಂದರೆ ಈಗಾಗಲೇ ವಯಸ್ಸಾದ ಅನೇಕರಿಗೆ ಟಿಕೆಟ್ ನೀಡಲಾಗಿದೆ. ಕುಟುಂಬ ರಾಜಕಾರಣ ಎಂಬ ಮಾನದಂಡ ನೋಡಿದರೆ ಅದೂ ಅಲ್ಲ. ಅನೇಕರ ಮಕ್ಕಳಿಗೆ ಟಿಕೆಟ್ ನೀಡಲಾಗಿದೆ. ಹೀಗಿರುವಾಗ ಈಶ್ವರಪ್ಪನವರಿಗೆ ಏಕೆ ಟಿಕೆಟ್ ನೀಡಿಲ್ಲ. ಅವರಿಗೇ ಟಿಕೆಟ್ ನೀಡಬೇಕು. ಇಲ್ಲದಿದ್ದರೆ ಅವರ ಮಗನಿಗೆ ನೀಡಬೇಕು ಎಂದು ಬಿಜೆಪಿಯ ವರಿಷ್ಠರಿಗೆ ಮನವಿ ಮಾಡಿದರು.

ಜಿಲ್ಲಾ ಕುರುಬರ ಸಂಘಗಳ ಒಕ್ಕೂಟ…

ಯಾವುದೇ ಕಾರಣಕ್ಕೂ ಈಶ್ವರಪ್ಪ ಅವರ ನಿವೃತ್ತಿ ಘೋಷಣೆಯ ಪತ್ರವನ್ನು ಅಂಗೀಕರಿಸಬಾರದು. ಅದರ ಬದಲು ಅವರಿಗೇ ಟಿಕೆಟ್ ನೀಡಬೇಕು ಎಂದು ಒಕ್ಕೂಟದ ಮುಖಂಡರು ಆಗ್ರಹಿಸಿದ್ದಾರೆ.
ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಡಾ. ಲಿಂಗದಹಳ್ಳಿ ಹಾಲಪ್ಪ, ಈಶ್ವರಪ್ಪನವರು ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದಾರೆ. ಅವರು ರಾಜ್ಯಾಧ್ಯಕ್ಷರಾಗಿದ್ದಾಗ ಕೇವಲ ನಾಲ್ಕು ಸೀಟುಗಳಿದ್ದವು. ನಂತರ ಅವರು ಇಳಿಯುವ ಹೊತ್ತಿಗೆ ೪೦ ಸೀಟುಗಳನ್ನು ಗೆಲ್ಲಿಸಿಕೊಟ್ಟಿದ್ದರು. ಅವರ ಕಾಲದಲ್ಲಿಯೇ ಬಿಜೆಪಿ ಪ್ರವರ್ಧಮಾನಕ್ಕೆ ಬಂದಿದ್ದು, ಇಂತಹ ಸಂಘಟನಾ ಚತುರನಿಗೆ ಬಿಜೆಪಿಯ ವರಿಷ್ಠರು ಟಿಕೆಟ್ ನೀಡದೆ ಇರುವುದು ಆಶ್ಚರ್ಯ ತಂದಿದೆ ಎಂದರು.
ಈಶ್ವರಪ್ಪನವರೇ ಈ ಬಾರಿಯೂ ಟಿಕೆಟ್ ನೀಡಬೇಕು. ಕೇವಲ ಪಕ್ಷವನ್ನು ಮಾತ್ರ ಅವರು ಬೆಳೆಸಿಲ್ಲ. ಶ್ರೀಗಂಧ ಸಂಸ್ಥೆಯ ಮೂಲಕ ಸಾಂಸ್ಕೃತಿಕವಾಗಿಯೂ ಗುರುತಿಸಿಕೊಂಡಿದ್ದಾರೆ. ಒಂದು ರೀತಿಯಲ್ಲಿ ಬಿಜೆಪಿಯ ನಿಷ್ಠಾವಂತರು ಅನೇಕರು ಪಕ್ಷ ಬಿಟ್ಟು ಬೇರೆ ಬೇರೆ ಕಡೆ ಹೋಗಿ ಮತ್ತೆ ಪಕ್ಷಕ್ಕೆ ಮರಳಿದ್ದಾರೆ. ಆದರೆ ಈಶ್ವರಪ್ಪನವರು ಮಾತ್ರ ಎಂದೂ ಪಕ್ಷ ಬಿಡದೆ ಪಕ್ಷನಿಷ್ಠ ತೋರಿಸಿದ್ದಾರೆ. ಇವರಿಗೇ ಟಿಕೆಟ್ ನೀಡಬೇಕು. ಒಂದುಪಕ್ಷ ಅದು ಸಾಧ್ಯವಾಗದಿದ್ದರೆ ಅವರ ಪುತ್ರ ಕೆ.ಈ. ಕಾಂತೇಶನಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಈಶ್ವರಪ್ಪನ ನವುಲೆ, ಷಡಾಕ್ಷರಿ, ಎ, ಮಾಯಪ್ಪ, ಹೆಚ್.ಎಸ್. ಮುರುಗೇಶ್, ಕೃಷ್ಣ, ಗಣೇಶ್‌ಬಾಬು, ಶಿವಮೂರ್ತಿ, ಮೋಹನ್, ವಿನಯ್, ಗಿಡ್ಡಪ್ಪ, ಮಧು, ಹನುಮಂತಪ್ಪ ಇನ್ನಿತರರು ಇದ್ದರು.

ಕದಳಿ ವನಿತಾ ಸಮಾಜ…

ಈಶ್ವರಪ್ಪನವರು ಕದಳಿ ಸಮಾಜ ಸೇರಿದಂತೆ ಎಲ್ಲಾ ಸಮಾಜಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗಿದ್ದಾರೆ. ಸಂಘ ಸಂಸ್ಥೆಗಳಿಗೆ ಸಹಕಾರ ನೀಡಿದ್ದಾರೆ. ಬಿಜೆಪಿಯನ್ನು ಕಟ್ಟಿ ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಕಷ್ಟ ಎಂದು ತಮ್ಮ ಬಳಿ ಬಂದವರನ್ನು ಎಂದೂ ಬರಿಗಯ್ಯಲ್ಲಿ ವಾಪಾಸ್ ಕಳುಹಿಸಿಲ್ಲ. ಹಿಂದು ಸಮಾಜವನ್ನು ಮತ್ತಷ್ಟು ಗಟ್ಟಿಗೊಳಿಸಿದ ಕೀರ್ತಿ ಈಶ್ವರಪ್ಪನವರದ್ದು. ಹಾಗಾಗಿ ಅವರು ರಾಜಕೀಯ ನಿವೃತ್ತಿ ಘೋಷಿಸಿದರೂ ಕೂಡ ಅದನ್ನು ಸ್ವೀಕರಿಸದೆ ಅವರನ್ನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಬೇಕು ಎಂದು ಅಧ್ಯಕ್ಷೆ ದಿವ್ಯಾ ಪ್ರೇಮ್ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಕುಂತಲಾ ಜಗದೀಶ್, ಶ್ವೇತಾ ಪ್ರಸನ್ನಕುಮಾರ್, ಸುರೇಖಾ ಪಾಲಾಕ್ಷಪ್ಪ, ಸವಿತಾ ಪಾಲಾಕ್ಷಪ್ಪ ಉಪ್ಥಿತರಿದ್ದರು.
ಜಿಲ್ಲಾ ಜಂಗಮ ಮಹಿಳಾ ಸಮಾಜ: ಈಶ್ವರಪ್ಪನವರು ಬಿಜೆಪಿಯನ್ನು ಇಡೀ ರಾಜ್ಯದಲ್ಲಿಯೇಕಟ್ಟಿ ಬೆಳೆಸಿದ್ದಾರೆ. ಅಂತವರಿಗೆ ಟಿಕೆಟ್ ಕೊಡದಿರುವುದು ಬೇಸರ ತಂದಿದೆ. ಅವರಿಗೆ ಈ ಬಾರಿ ಟಿಕೆಟ್ ನೀಡಲೇಬೇಕು. ಒಂದುಪಕ್ಷ ವಯಸ್ಸಿನ ನೆಪಹೇಳಿ ನೀಡದಿದ್ದಲ್ಲಿ ಅವರ ಪುತ್ರ ಕೆ.ಈ. ಕಾಂತೇಶ್‌ಗಾದರೂ ಟಿಕೆಟ್ ನೀಡಬೇಕು ಇದು ನಮ್ಮ ಆಗ್ರಹ ಎಂದು ಸಮಾಜದ ಪ್ರಮುಖರಾದ ಪ್ರತಿಭಾ ರಾಣಿ, ರೇಖಾ, ಗಿರಿಜಮ್ಮ, ಸುನಂದಾ ಹಿರೇಮಠ್, ಸುಜಯಾ ಪ್ರಸಾದ್ ಬಿಜೆಪಿ ವರಿಷ್ಠರಿಗೆ ಒತ್ತಾಯಿಸಿದರು.

ಬಲಿಜ ಸಮಾಜ…

ಶಿವಮೊಗ್ಗ ನಗರದಲ್ಲಿ ಸುಮಾರು ೪೦ ವರ್ಷಗಳಿಂದ ಶಾಸಕರಾಗಿ, ಸಚಿವರಾಗಿ, ಉಪಮುಖ್ಯಮಂತ್ರಿಯಾಗಿ, ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಅವಧಿಯಲ್ಲಿ ಹೆಚ್ಚಿನ ಶಾಸಕರನ್ನು ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಹಾಗೂ ಪಕ್ಷದ ಮತ್ತು ಶಿವಮೊಗ್ಗ ನಗರದ ಅಭಿವೃದ್ಧಿಯಲ್ಲಿ, ಎಲ್ಲಾ ಸಮುದಾಯಗಳಿಗೆ ಅನುದಾನ ಕೊಡಿಸುವಲ್ಲಿ ಶ್ರಮಿಸುತ್ತಾ ಬಂದಿರುವ ಜನಪ್ರಿಯ ಶಾಸಕ ಕೆ.ಎಸ್ ಈಶ್ವರಪ್ಪ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಟಿಕೆಟ್ ನೀಡಲೇಬೇಕು ಎಂದು ಸಮಾಜದ ಮುಖಂಡ ಎಸ್.ಎನ್ ವೆಂಕಟೇಶ್ ಆಗ್ರಹಿಸಿದರು.
ಈಶ್ವರಪ್ಪನವರಿಗೆ ಟಿಕೆಟ್ ನೀಡದಿದ್ದ ಪಕ್ಷದಲ್ಲಿ ಅವರ ಪುತ್ರ ಕೆ.ಈ. ಕಾಂತೇಶ್ ಅವರಿಗೆಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ದೇವದಾಸ್, ರಘುಕುಮಾರ್ ನಾಯ್ಡು, ಜಿ. ನಾಗರಾಜ್, ಅರುಣಾಚಲಂ, ಹನುಮಂತಪ್ಪ ಇನ್ನಿತರರು ಇದ್ದರು.
ಜಿಲ್ಲಾ ಸಂಗೊಳ್ಳಿ ರಾಯಣ್ಣ ಕುರುಬರ ವೇದಿಕೆ: ಬಿ.ಎಸ್. ಯಡಿಯೂರಪ್ಪ, ಅನಂತಕುಮಾರ್, ಡಿ.ಹೆಚ್. ಶಂಕರಮೂರ್ತಿ, ವಿ.ಎಸ್. ಆಚಾರ್ಯ ಅವರಂತೆ ಕೆ.ಎಸ್. ಈಶ್ವರಪ್ಪ ಅವರು ರಾಜ್ಯದಲ್ಲಿ ಬಿಜೆಪಿ ಸಂಘಟನೆಗೆ ಭದ್ರ ಬುನಾದಿ ಹಾಕಿದ್ದಾರೆ. ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ಈಶ್ವರಪ್ಪ ಅವರ ಪಾತ್ರ ಪ್ರಮುಖವಾಗಿದೆ. ಈಗ ಅವರು ರಾಜಕೀಯ ನಿವೃತ್ತಿ ಘೋಷಿಸುವಂತೆ ಪಕ್ಷದ ವರಿಷ್ಠರು ನಡೆದುಕೊಂಡಿರುವುದನ್ನು ವೇದಿಕೆ ತೀವ್ರವಾಗಿ ಖಂಡಿಸಿದೆ.
ಪಕ್ಷದ ಬೂತ್‌ಮಟ್ಟದ ಕಾರ್ಯಕರ್ತರಾಗಿ ಆರ್‌ಎಸ್‌ಎಸ್ ಮತ್ತು ಬಿಜೆಪಿಯನ್ನು ಎರಡು ಕಣ್ಣುಗಳಂತೆ ನೋಡಿಕೊಂಡು ಬಂದಿದ್ದ ಕೆ.ಎಸ್ ಈಶ್ವರಪ್ಪ ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶವಿದ್ದರೂ ಅವರು ಹಿಂದುಳಿದ ವರ್ಗದವರು ಎಂಬ ಕಾರಣಕ್ಕೆ ಅವರನ್ನು ಆ ಸ್ಥಾನದಿಂದ ವಂಚಿತರಾಗುವAತೆ ಮಾಡಲಾಯಿತು. ಈಗ ಇವರನ್ನು ಕೇವಲ ವಯಸ್ಸಿನ ಕಾರಣಕ್ಕೆ ಪಕ್ಷ ಕಡೆಗಣಿಸುವುದು ಸರಿಯಲ್ಲ ಎಂದು ವೇದಿಕೆಯ ಅಧ್ಯಕ್ಷ ರಾಮಕೃಷ್ಣ ಮೂಡ್ಲಿ ಹೇಳಿದರು.
ಪಕ್ಷದ ವರಿಷ್ಠರು ಕೂಡಲೇ ಮಾಡಿರುವ ತಪ್ಪನ್ನು ತಿದ್ದಿಕೊಳ್ಳಬೇಕು. ಈಶ್ವರಪ್ಪನವರ ರಾಜಕೀಯ ನಿವೃತ್ತಿ ಘೋಷಣೆಯನ್ನು ಹಿಂಪಡೆಯುವAತೆ ಮನವೊಲಿಸಿ ಅವರಿಗೆ ಟಿಕೆಟ್ ನೀಡಬೇಕು ಇಲ್ಲವೇ ಅವರ ಪುತ್ರ ಕೆ.ಈ. ಕಾಂತೇಶ್ ಅವರಿಗಾದರೂ ನೀಡಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸೀತಾರಾಮ್, ಅಣ್ಣಪ್ಪ, ಚಂದ್ರಶೇಖರ್, ಮಧು, ರಾಜಶೇಖರ್ ಇನ್ನಿತರರು ಉಪಸ್ಥಿತರಿದ್ದರು.

ಕನಕ ಮಹಿಳಾ ಸಂಘ…

ಈ ಬಾರಿಯ ಚುನಾವಣೆಯಲ್ಲಿ ಶಾಸಕ ಕೆ.ಎಸ್. ಈಶ್ವರಪ್ಪ ಅವರಿಗೆ ಟಿಕೆಟ್ ನೀಡದೆ ಕಡೆಗಣಿಸಲಾಗುತ್ತಿದೆ ಇದು ಸರಿಯಲ್ಲ. ಅವರು ಸಮಾಜಕ್ಕೆ ಹಲವು ರೀತಿಯ ಸೇವೆ ಸಲ್ಲಿಸಿದ್ದಾರೆ. ಯಾವ ಮಾನದಂಡದ ಆಧಾರದ ಮೇಲೆ ಅವರಿಗೆ ಟಿಕೆಟ್ ಸಿಗುವುದಿಲ್ಲವೋ ಗೊತ್ತಿಲ್ಲ. ಏಕೆಂದರೆ ಬೇರೆ ಬೇರೆ ಕಡೆ ಮಾನದಂಡವನ್ನು ಮೀರಿಯೇ ಹಲವರಿಗೆ ಟಿಕೆಟ್ ಕೊಟ್ಟಿದ್ದಾರೆ. ಒಂದು ಕಣ್ನಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಎಂಬAತಾಗಬಾರದು. ಅವರಿಗೇ ಟಿಕೆಟ್ ನೀಡಬೇಕು ಎಂದು ಸಂಘದ ಕಾರ್ಯದರ್ಶಿ ಬಿ.ಸಿ ಚಿತ್ರಾ ಹೇಳಿದರು. ಗೋಷ್ಠಿಯಲ್ಲಿ ತುಳಸಿ ಮಂಜುನಾಥ್ ಇದ್ದರು.

ಶಿವಮೊಗ್ಗ: ಈ ಬಾರಿಯ ಚುನಾವಣೆಯಲ್ಲಿ ಕೆ.ಎಸ್. ಈಶ್ವರಪ್ಪನವರಿಗೇ ಟಿಕೆಟ್ ನೀಡಬೇಕು. ಅಕಸ್ಮಾತ್ ಅದು ಸಾಧ್ಯವಾಗದಿದ್ದರೆ ಅವರ ಮಗ ಕೆ.ಈ. ಕಾಂತೇಶ್ ಅವರಿಗೆ ಟಿಕೆಟ್ ನೀಡಲೇಬೇಕು ಎಂದು ನಗರದ ವಿವಿಧ ಮಹಿಳಾ ಸಂಘಟನೆಗಳು ಹಾಗೂ ಕುರುಬ, ಬಲಿಜ ಸಮಾಜದ ಮುಖಂಡರು ಇಂದು ಬಿಜೆಪಿ ಹೈಕಮಾಂಡ್‌ಗೆ ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.
ಇಂದು ಮೀಡಿಯಾ ಹೌಸ್‌ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಸಂಗೊಳ್ಳಿ ರಾಯಣ್ಣ ಕುರುಬರ ವೇದಿಕೆ, ಕದಳಿ ವನಿತಾ ಸಮಾಜ, ಜಿಲ್ಲಾ ಕುರುಬರ ಸಂಘ, ಬಲಿಜ ಸಮಾಜದ ಮುಖಂಡರು, ಕನಕ ಮಹಿಳಾ ಸಂಘ, ಜಿಲ್ಲಾ ಜಂಗಮ ಮಹಿಳಾ ಸಮಾಜಗಳ ಪದಾಧಿಕಾರಿಗಳು, ಮುಖಂಡರು ಕೆ.ಎಸ್. ಈಶ್ವರಪ್ಪನವರಿಗೇ ಟಿಕೆಟ್ ನೀಡಬೇಕು. ಒಂದುಪಕ್ಷ ಅದಾಗದಿದ್ದರೆ ಕೆ.ಈ. ಕಾಂತೇಶ್‌ರವರಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಲ್ಲಾ ಸಂಘಟನೆಯ ಪ್ರಮುಖರು ಕೂಡ ಈಶ್ವರಪ್ಪನವರಿಗೆ ಟಿಕೆಟ್ ನೀಡದೆ ಇರುವುದನ್ನು ಬಲವಾಗಿ ವಿರೋಧಿಸಿದ್ದಾರೆ. ಬಿಜೆಪಿ ಹೈಕಮಾಂಡ್ ಯಾವ ಮಾನದಂಡದ ಮೇಲೆ ಟಿಕೆಟ್ ನೀಡುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ. ವಯಸ್ಸಾಗಿದೆ ಎಂದರೆ ಈಗಾಗಲೇ ವಯಸ್ಸಾದ ಅನೇಕರಿಗೆ ಟಿಕೆಟ್ ನೀಡಲಾಗಿದೆ. ಕುಟುಂಬ ರಾಜಕಾರಣ ಎಂಬ ಮಾನದಂಡ ನೋಡಿದರೆ ಅದೂ ಅಲ್ಲ. ಅನೇಕರ ಮಕ್ಕಳಿಗೆ ಟಿಕೆಟ್ ನೀಡಲಾಗಿದೆ. ಹೀಗಿರುವಾಗ ಈಶ್ವರಪ್ಪನವರಿಗೆ ಏಕೆ ಟಿಕೆಟ್ ನೀಡಿಲ್ಲ. ಅವರಿಗೇ ಟಿಕೆಟ್ ನೀಡಬೇಕು. ಇಲ್ಲದಿದ್ದರೆ ಅವರ ಮಗನಿಗೆ ನೀಡಬೇಕು ಎಂದು ಬಿಜೆಪಿಯ ವರಿಷ್ಠರಿಗೆ ಮನವಿ ಮಾಡಿದರು.

ಜಿಲ್ಲಾ ಕುರುಬರ ಸಂಘಗಳ ಒಕ್ಕೂಟ…

ಯಾವುದೇ ಕಾರಣಕ್ಕೂ ಈಶ್ವರಪ್ಪ ಅವರ ನಿವೃತ್ತಿ ಘೋಷಣೆಯ ಪತ್ರವನ್ನು ಅಂಗೀಕರಿಸಬಾರದು. ಅದರ ಬದಲು ಅವರಿಗೇ ಟಿಕೆಟ್ ನೀಡಬೇಕು ಎಂದು ಒಕ್ಕೂಟದ ಮುಖಂಡರು ಆಗ್ರಹಿಸಿದ್ದಾರೆ.
ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಡಾ. ಲಿಂಗದಹಳ್ಳಿ ಹಾಲಪ್ಪ, ಈಶ್ವರಪ್ಪನವರು ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದಾರೆ. ಅವರು ರಾಜ್ಯಾಧ್ಯಕ್ಷರಾಗಿದ್ದಾಗ ಕೇವಲ ನಾಲ್ಕು ಸೀಟುಗಳಿದ್ದವು. ನಂತರ ಅವರು ಇಳಿಯುವ ಹೊತ್ತಿಗೆ ೪೦ ಸೀಟುಗಳನ್ನು ಗೆಲ್ಲಿಸಿಕೊಟ್ಟಿದ್ದರು. ಅವರ ಕಾಲದಲ್ಲಿಯೇ ಬಿಜೆಪಿ ಪ್ರವರ್ಧಮಾನಕ್ಕೆ ಬಂದಿದ್ದು, ಇಂತಹ ಸಂಘಟನಾ ಚತುರನಿಗೆ ಬಿಜೆಪಿಯ ವರಿಷ್ಠರು ಟಿಕೆಟ್ ನೀಡದೆ ಇರುವುದು ಆಶ್ಚರ್ಯ ತಂದಿದೆ ಎಂದರು.
ಈಶ್ವರಪ್ಪನವರೇ ಈ ಬಾರಿಯೂ ಟಿಕೆಟ್ ನೀಡಬೇಕು. ಕೇವಲ ಪಕ್ಷವನ್ನು ಮಾತ್ರ ಅವರು ಬೆಳೆಸಿಲ್ಲ. ಶ್ರೀಗಂಧ ಸಂಸ್ಥೆಯ ಮೂಲಕ ಸಾಂಸ್ಕೃತಿಕವಾಗಿಯೂ ಗುರುತಿಸಿಕೊಂಡಿದ್ದಾರೆ. ಒಂದು ರೀತಿಯಲ್ಲಿ ಬಿಜೆಪಿಯ ನಿಷ್ಠಾವಂತರು ಅನೇಕರು ಪಕ್ಷ ಬಿಟ್ಟು ಬೇರೆ ಬೇರೆ ಕಡೆ ಹೋಗಿ ಮತ್ತೆ ಪಕ್ಷಕ್ಕೆ ಮರಳಿದ್ದಾರೆ. ಆದರೆ ಈಶ್ವರಪ್ಪನವರು ಮಾತ್ರ ಎಂದೂ ಪಕ್ಷ ಬಿಡದೆ ಪಕ್ಷನಿಷ್ಠ ತೋರಿಸಿದ್ದಾರೆ. ಇವರಿಗೇ ಟಿಕೆಟ್ ನೀಡಬೇಕು. ಒಂದುಪಕ್ಷ ಅದು ಸಾಧ್ಯವಾಗದಿದ್ದರೆ ಅವರ ಪುತ್ರ ಕೆ.ಈ. ಕಾಂತೇಶನಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಈಶ್ವರಪ್ಪನ ನವುಲೆ, ಷಡಾಕ್ಷರಿ, ಎ, ಮಾಯಪ್ಪ, ಹೆಚ್.ಎಸ್. ಮುರುಗೇಶ್, ಕೃಷ್ಣ, ಗಣೇಶ್‌ಬಾಬು, ಶಿವಮೂರ್ತಿ, ಮೋಹನ್, ವಿನಯ್, ಗಿಡ್ಡಪ್ಪ, ಮಧು, ಹನುಮಂತಪ್ಪ ಇನ್ನಿತರರು ಇದ್ದರು.

ಜಿಲ್ಲಾ ಜಂಗಮ ಮಹಿಳಾ ಸಮಾಜ…

ಈಶ್ವರಪ್ಪನವರು ಬಿಜೆಪಿಯನ್ನು ಇಡೀ ರಾಜ್ಯದಲ್ಲಿಯೇಕಟ್ಟಿ ಬೆಳೆಸಿದ್ದಾರೆ. ಅಂತವರಿಗೆ ಟಿಕೆಟ್ ಕೊಡದಿರುವುದು ಬೇಸರ ತಂದಿದೆ. ಅವರಿಗೆ ಈ ಬಾರಿ ಟಿಕೆಟ್ ನೀಡಲೇಬೇಕು. ಒಂದುಪಕ್ಷ ವಯಸ್ಸಿನ ನೆಪಹೇಳಿ ನೀಡದಿದ್ದಲ್ಲಿ ಅವರ ಪುತ್ರ ಕೆ.ಈ. ಕಾಂತೇಶ್‌ಗಾದರೂ ಟಿಕೆಟ್ ನೀಡಬೇಕು ಇದು ನಮ್ಮ ಆಗ್ರಹ ಎಂದು ಸಮಾಜದ ಪ್ರಮುಖರಾದ ಪ್ರತಿಭಾ ರಾಣಿ, ರೇಖಾ, ಗಿರಿಜಮ್ಮ, ಸುನಂದಾ ಹಿರೇಮಠ್, ಸುಜಯಾ ಪ್ರಸಾದ್ ಬಿಜೆಪಿ ವರಿಷ್ಠರಿಗೆ ಒತ್ತಾಯಿಸಿದರು.

ವರದಿ ಪ್ರಜಾ ಶಕ್ತಿ…