ನಗರದ ವಿಧಾನ ಸಭಾ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ಮತಗಳು ಬೀಳುವ ನಿಟ್ಟಿಲ್ಲಿ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಸ್ವೀಪ್ ಸಮಿತಿ ಮತ ಜಾಗೃತಿ ನಡೆಸುತ್ತಿದೆ. 

ಪ್ರತಿದಿನವೂ ಒಂದಲ್ಲಾ ಒಂದು ವಿಶೇಷ ಕಾರ್ಯಕ್ರಮ ನಡೆಸುವ ಮೂಲಕ ಸಾರ್ವಜನಿಕರಿಗೆ ಮತ ಜಾಗೃತಿ ಮೂಡಿಸುತ್ತಿದೆ. ಏ.5 ರಂದು ಆರಂಭಗೊಂಡ ಕಾರ್ಯಕ್ರಮ ಸತತವಾಗಿ 8 ದಿನಗಳನ್ನ ಪೂರೈಸಿದೆ.

ಬೈಕ್ ಜಾಥಾ, ಮುಂಬತ್ತಿ ಮೆರವಣಿಗೆ, ತ್ರಿಚಕ್ರ ವಾಹನಗಳ ರ್ಯಾಲಿ, ಹೀಗೆ ಅನೇಕ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿರುವ ಸ್ವೀಪ್ ಸಮಿತಿ ಇಂದು ಸೋಮಿನ ಕೊಪ್ಪದಲ್ಲಿ ಮತ ಜಾಗೃತಿ ಮೂಡಿಸಲಾಗಿದೆ. 

ಮತಜಾಗೃತಿಯ ಜೊತೆ ಹೆಚ್ಚಮತಗಳನ್ನ ಹಾಕುವ ಮೂಲಕ ಪ್ರಜಾಪ್ರಭುತ್ವದ ಹಬ್ಬವನ್ನ ಸಡಗರದಿಂದ ಆಚರಿಸುವಂತೆ ಪ್ರತಿಜ್ಞಾವಿಧಿಯನ್ನ ಮಾಡಲಾಗಿದೆ. 

ವರದಿ ಪ್ರಜಾ ಶಕ್ತಿ…