ಶಿವಮೊಗ್ಗ: ಕರ್ನಾಟಕ ನ್ಯೂರೋ ಸೈನ್ಸ್ ಅಕಾಡೆಮಿ ವತಿಯಿಂದ ೧೨ನೇ ವಾರ್ಷಿಕ ವೈಜ್ಞಾನಿಕ ಸಮ್ಮೇಳನವನ್ನು ಏ.೨೮, ೨೯ ಹಾಗೂ ೩೦ರಂದು ಶಿವಮೊಗ್ಗದ ಸುಬ್ಬಯ್ಯ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನಲ್ಲಿ ಹಮ್ಮಿಕೊಳ್ಳಲಾಗಿದೆ.ರಾಜ್ಯ ಮಟ್ಟದ ಈ ಸಮ್ಮೇಳನದ ಜವಾಬ್ದಾರಿ ಹಾಗೂ ಆತಿಥ್ಯವನ್ನು ಶಿವಮೊಗ್ಗದ ಸಹ್ಯಾದ್ರಿ ನ್ಯೂರೋ ಸೈಕ್ಯಾಟರಿ ಅಸೋಸಿಯೇಷನ್ ವಹಿಸಲಿದೆ ಎಂದು ಸಮ್ಮೇಳನದ ಆಯೋಜಕ ಡಾ.ಎ.ಶಿವರಾಮಕೃಷ್ಣ ಆರೂರ್ ಇಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.


ಏ.೨೮ ಮತ್ತು ೨೯ರಂದು ಪೂರ್ವಭಾವಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗಿದೆ. ಹಾಗೆಯೇ ಏ.೨೯ರ ಮಧ್ಯಾಹ್ನ ೧೨ ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ನ ಬ್ರೆöÊನ್ ರೀಸರ್ಚ್ ಲ್ಯಾಬ್‌ನ ನಿರ್ದೇಶಕ ಡಾ. ವೈ. ನರಹರಿ, ಎಸ್‌ಎನ್‌ಪಿಎ ಅಧ್ಯಕ್ಷ ಡಾ.ಹರೀಶ್ ದೇಲಂತಬೆಟ್ಟು, ಡಾ. ಕೆ.ಆರ್. ಶ್ರೀಧರ್ ಆಗಮಿಸಲಿದ್ದು, ಅಧ್ಯಕ್ಷತೆಯನ್ನು ಕೆ.ಎನ್.ಎ. ಅಧ್ಯಕ್ಷ ಡಾ. ಎಸ್.ಪಿ. ಬಳಿಗಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ನ್ಯೂರೋ ಸರ್ಜನ್ ಡಾ. ಎಲ್. ಕೃಷ್ಣಮೂರ್ತಿ, ಡಾ. ಬಿ.ಎ. ಚಂದ್ರಮೌಳಿ, ಡಾ. ಜಿ.ಎಸ್. ಉಮಾಮಹೇಶ್ವರ ರಾವ್ ಅವರನ್ನು ಸನ್ಮಾನಿಸಲಾಗುವುದು ಎಂದರು.


ಈ ಸಮ್ಮೇಳನದಲ್ಲಿ ರಾಜ್ಯ ಹಾಗೂ ದೇಶದ ವಿವಿಧ ಭಾಗಗಳಿಂದ ನರಶಾಸ್ತçಜ್ಞರು, ನರರೋಗ ಶಸ್ತç ಚಿಕಿತ್ಸಕರು, ಮನೋವೈದ್ಯರು ಹಾಗೂ ಇತರೆ ವೈದ್ಯರು ಭಾಗವಹಿಸಲಿದ್ದು, ಮೆದುಳು ಹಾಗೂ ನರಮಂಡಲದ ವೈಜ್ಞಾನಿಕ ಬೆಳವಣಿಗೆಗಳು, ನರವಿಜ್ಞಾನದಲ್ಲಿ ಇತ್ತೀಚಿನ ಸಂಶೋಧನೆಗಳು ಮತ್ತು ತಂತ್ರಜ್ಞಾನದ ಬಳಕೆ ಬಗ್ಗೆ ತಜ್ಞರು ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ ಎಂದ ಅವರು, ಸಮ್ಮೇಳನದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಹಾಗೂ ದಾದಿಯರಿಗೆ ವಿಶೇಷ ಕಾರ್ಯಾಗಾರ ಮತ್ತು ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.


ಸಾರ್ವಜನಿಕರ ಅನುಕೂಲಕ್ಕಾಗಿ ಏ.೩೦ರ ಬೆಳಿಗ್ಗೆ ೧೦ ಗಂಟೆಯಿAದ ೧೧ ಗಂಟೆಯವರೆಗೆ ಶಿವಮೊಗ್ಗದ ಐಎಂಎ ಕಟ್ಟಡದಲ್ಲಿ ಉಪನ್ಯಾಸ ಹಮ್ಮಿಕೊಂಡಿದ್ದು, ಬೆಂಗಳೂರು ನ್ಯೂರೋ ಸೆಂಟರ್‌ನ ನ್ಯೂರಾಲಜಿಸ್ಟ್ ಡಾ. ಆರ್.ಉಮಾಶಂಕರ್ ಅವರು ಪಾರ್ಶ್ವ ವಾಯು-ಕಾರಣ, ಲಕ್ಷಣಗಳು ಹಾಗೂ ಚಿಕಿತ್ಸೆ’ ಕುರಿತು ಮತ್ತು ಧಾರವಾಡದ ಎಸ್‌ಡಿಎಂ ಮೆಡಿಕಲ್ ಕಾಲೇಜಿನ ನ್ಯೂರೋ ಸರ್ಜನ್ ಡಾ. ಸುನಿಲ್ ಮಾಳಗಿ ಅವರುತಲೆ ಪೆಟ್ಟು -ಪರಿಣಾಮ, ನಿರ್ಧರಿಸುವಿಕೆ ಹಾಗೂ ಚಿಕಿತ್ಸೆ’ ಕುರಿತು ಮಾಹಿತಿ ಹಾಗೂ ಸಾರ್ವಜನಿಕರೊಂದಿಗೆ ಸಂವಾದ ನಡೆಸುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ನಾರಾಯಣ ಪಂಜಿ, ಡಾ. ಕೆ.ಆರ್. ಶ್ರೀಧರ್ ಡಾ. ಹರೀಶ್ ದೇಲಂತಬೆಟ್ಟು, ಡಾ. ರೂಪಾ, ಡಾ. ಸಾತ್ವಿಕ್, ಡಾ. ಎ.ವಿ. ನಾಗರಾಜ್ ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ…