ರಾಜ್ಯದ ಜನನಾಯಕ, ಅಭಿವೃದ್ಧಿಯ ಹರಿಕಾರ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬಾರದು ಎಂದು ಅಖಿಲ ವೀರಶೈವ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಜಿ.ವಿಜಯ್‌ಕುಮಾರ್ ಹಾಗೂ ನಿರ್ದೇಶಕ ಮಂಡಳಿ ಸದಸ್ಯರು ಒತ್ತಾಯಿಸಿದ್ದಾರೆ.
ಅಖಿಲ ವೀರಶೈವ ಮಹಾಸಭಾ ತಾಲೂಕು ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಚರ್ಚೆ ನಡೆಸಿ ಮಾತನಾಡಿ, ವೀರಶೈವ ಸಮುದಾಯ ಧೀಮಂತ ನಾಯಕ, ರಾಜ್ಯದ ಚಿತ್ರಣ ಬದಲಾಯಿಸಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಸುತ್ತಿರುವ ನಾಯಕ ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅಭಿವೃದ್ಧಿ ಕಾರ್ಯ ನಡೆಸುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿಯೂ ಶಕ್ತಿ ಮೀರಿ ಶ್ರಮಿಸುತ್ತ ಪರಿಸ್ಥಿತಿ ನಿರ್ವಹಣೆಯಲ್ಲಿ ಯಶಸ್ವಿಯಾಗಿದ್ದಾರೆ. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬಾರದು ಎಂದು ಆಗ್ರಹಿಸಿದರು.
ನಲವತ್ತು ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ಕೆಲಸ ಮಾಡುವ ಜತೆಯಲ್ಲಿ ರಾಜ್ಯದ ಎಲ್ಲ ಜಾತಿ ಜನಾಂಗದ ಅಭಿವೃದ್ಧಿಗೆ ಹಾಗೂ ಮಠಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಕ ಯೋಜನೆಗಳನ್ನು ಅನುಷ್ಠಾನ ಮಾಡಿದ್ದಾರೆ. ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದಲ್ಲಿ ರಾಜ್ಯಕ್ಕೆ ಮತ್ತು ಪಕ್ಷಕ್ಕೆ ಅನಾಹುತ ಆಗಲಿದೆ ಎಂದು ತಿಳಿಸಿದರು.
ವೀರಶೈವ ಮಹಾಸಭಾ ತಾಲೂಕು ಘಟಕದ ಸಭೆಯಲ್ಲಿ ಅಧ್ಯಕ್ಷ ಜಿ.ವಿಜಯ್‌ಕುಮಾರ್, ಕಾರ್ಯದರ್ಶಿ ಸಂಗಮೇಶ್ ಮಠದ್, ಉಪಾಧ್ಯಕ್ಷ ಎ.ಎಂ.ಚAದ್ರಶೇಖರಪ್ಪ, ಎಂ.ಜಿ.ಪುಷ್ಪಾ ಹಾಲಪ್ಪ, ಎನ್.ಬಿ.ಮಂಜುನಾಥ್, ಎಸ್.ಟಿ.ಪುಷ್ಪಾವತಿ, ಖಜಾಂಚಿ ಎಚ್.ಎಸ್.ಶೇಖರ್, ನಿರ್ದೇಶಕರಾದ ಎನ್.ಎಚ್.ದೇವಿಕುಮಾರ್, ಉಮೇಶ್‌ಹಿರೇಮಠ್, ಎಸ್.ಎನ್.ಓಂಕಾರಮೂರ್ತಿ, ವಿ.ಟಿ.ಅರುಣ್, ಎಂ.ಎಸ್.ಸುರೇಶ್, ಎಸ್.ಬಿ.ಸುಮಾ, ಕೋಕಿಲಾ ಚಂದ್ರಶೇಖರ್, ಹೊನ್ನಮ್ಮ, ವಾಣಿ, ಸುಮನಾ, ಚಂದ್ರಪ್ಪ ಶೆಟ್ಟಿ, ಶಂಕ್ರಪ್ಪ, ಕೆ.ಶಿವಪ್ಪ, ಎಂ.ರುದ್ರಪ್ಪ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153