ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಕರ್ನಾಟಕ ಸರ್ಕಾರ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಭೇಟಿ ಮಾಡಿ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಮಂಜೂರು ಮಾಡುವುದಾಗಿ ಭರವಸೆ ನೀಡಿದರು. ಶಿವಮೊಗ್ಗದ ಬಹುದಿನದ ಬೇಡಿಕೆಯಂತೆ ಸುಮಾರು 50 ವಿದ್ಯಾರ್ಥಿಗಳನ್ನೊಳಗೊಂಡ ಆಗಮ ವೇದ ಪಾಠಶಾಲೆಯನ್ನು ಪ್ರಾರಂಭಿಸುವುದಾಗಿ ಹೇಳಿದರು. ಈ ವೇದ ಪಾಠಶಾಲೆಯ ವಿಶೇಷವೇನೆಂದರೆ ಇದು ವಸತಿ ಶಾಲೆಯಾಗಿದ್ದು ಎಲ್ಲಾ ಐವತ್ತು ವಿದ್ಯಾರ್ಥಿಗಳಿಗೆ ವಸತಿ ಸೌಕರ್ಯದೊಂದಿಗೆ ವೇದವನ್ನು ತಿಳಿಸಿಕೊಡಲಾಗುತ್ತದೆ. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ರಾಜ್ಯದ ನೂರು ಆಯ್ದ ದೇವಸ್ಥಾನಗಳಲ್ಲಿ ಆಗಸ್ಟ್ ತಿಂಗಳಿನಿಂದ ಸಪ್ತಪದಿ ಕಾರ್ಯಕ್ರಮವನ್ನು ಮತ್ತೆ ಶುರು ಮಾಡುವುದಾಗಿ ತಿಳಿಸಿದರು.ತಿಂಗಳಿನಲ್ಲಿ ಸ್ಥಳೀಯವಾಗಿ 4ಅಥವಾ 5 ಮುಹೂರ್ತ ಗಳನ್ನು ನಿಗದಿಪಡಿಸಿ ಆ ಮುಹೂರ್ತಗಳಲ್ಲಿ ಈ ಸಪ್ತಪದಿ ಯೋಜನೆಯಲ್ಲಿ ಮದುವೆಯಾಗುವವರಿಗೆ 8ಗ್ರಾಂ ಚಿನ್ನ ಸೇರಿದಂತೆ ಐವತ್ತೈದು ಸಾವಿರ ಬೆಲೆ ಬಾಳುವಷ್ಟು ಸಹಾಯ ದೊರೆಯಲಿದೆ ಎಂದವರು ತಿಳಿಸಿದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153