ರಶ್ಮಿಕ ಮಂದಣ್ಣನವರು ಚಲನಚಿತ್ರ ತಾರೆಯಾಗಿ ಎಲ್ಲರಿಗೂ ಚಿರಪರಿಚಿತ. ಕನ್ನಡ ಭಾಷೆಯಲ್ಲದೆ ವಿವಿಧ ಭಾಷೆಗಳಲ್ಲಿ ಹೀರೋಯಿನ್ ಆಗಿ ಮಿಂಚಿದ ಒಳ್ಳೆ ಕಲಾವಿದೆ. ಈ ಮಧ್ಯ ಸೋಶಿಯಲ್ ಮೀಡಿಯಾದಲ್ಲೊಂದು ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ರಶ್ಮಿಕ ಮಂದಣ್ಣನವರು ನಟಿಸಿರುವ ಹಾಗೆ ಕೃತಕ ಬುದ್ಧಿ ಮೆತ್ತೆ AI deep ಫೇಕ್ video ಉಪಯೋಗಿಸಿ ಮಾಡಲಾಗಿದ್ದು. ಯಾವುದೋ ಒಬ್ಬ ಬೇರೆ ಯುವತಿಯನ್ನು ಉಪಯೋಗಿಸಿ ರಶ್ಮಿಕಾ ಮಂದಣ್ಣ ಎಂಬಂತೆ ಬಿಂಬಿಸಲಾಗಿತ್ತು. ಈ ವಿಚಾರವಾಗಿ ತಮ್ಮ X ( formerly known as twitter) ಅಧಿಕೃತ ಖಾತೆಯಲ್ಲಿ ಬರೆದುಕೊಂಡ ರಶ್ಮಿಕ ಮಂದಣ್ಣನವರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಈಗಿನ ಕಾಲದ ತಂತ್ರಜ್ಞಾನದಲ್ಲಿ ಏನು ಬೇಕಾದರೂ ಮಾಡಬಹುದು ಆದರೆ ಅದರೆ ಈ ತರಹ ದ ದುರುಪಯೋಗದಿಂದಾಗಿ ನನಗೆ ತುಂಬಾ ಆಘಾತವಾಗಿದೆ. ಇದೇ ನಾನು ವಿದ್ಯಾರ್ಥಿನಿಯಾಗಿದ್ದಾಗ ಆಗಿದ್ದರೆ ನಾನು ಹೇಗೆ ಎದುರಿಸಬೇಕಿತ್ತು?
ಒಬ್ಬ ನಟಿ ಯಾಗಿ ನನ್ನ ಕುಟುಂಬ ಹಾಗೂ ಸ್ನೇಹಿತರ ಬೆಂಬಲದಿಂದ ಗಟ್ಟಿಯಾಗಿದ್ದೇನೆ. ಎಂದು ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.