ಶಿವಮೊಗ್ಗ ಮಲವಗೊಪ್ಪ ಲಂಬಾಣಿ ನಾರಿಯರು ದೀಪಾವಳಿ ಹಬ್ಬವನ್ನು ಆಚರಿಸಿದ್ದು ಹೀಗೆ
ಮಲವಗೊಪ್ಪ ತಾಂಡಾದಲ್ಲಿ ನೂರಾರು ರೂಪಾಯಿ ಬೆಲೆ ಬಾಳುವ ಪಟಾಕಿ ಹಚ್ಚಿ ವಾಯುಮಾಲಿನ್ಯ ಮಾಡದೆ ಪರಿಸರದೊಂದಿಗೆ ಹಬ್ಬ ಆಚರಿಸಿಕೊಂಡು ಬರುವುದು ಸಂಪ್ರದಾಯವಾಗಿದೆ.

ದೀಪಾವಳಿಯನ್ನು ಲಂಬಾಣಿ ನಾರಿಯರು ಸಂಭ್ರಮದಿಂದ ಆಚರಣೆ ಮಾಡಿದರು. ಬಣ್ಣ-ಬಣ್ಣದ ಸಾಂಪ್ರದಾಯಿಕ ಉಡುಗೆ ಧರಿಸಿ ಲಂಬಾಣಿ ಹಾಡಿಗೆ ಹೆಜ್ಜೆ ಹಾಕಿ ಸಖತ್ ಡ್ಯಾನ್ಸ್ ಮಾಡುವ ಮೂಲಕ ಬೆಳಕಿನ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.
ದೀಪಾವಳಿಯನ್ನು ಲಂಬಾಣಿ ನಾರಿಯರು ಸಂಭ್ರಮದಿಂದ ಆಚರಣೆ ಮಾಡಿದರು. ಬಣ್ಣ-ಬಣ್ಣದ ಸಾಂಪ್ರದಾಯಿಕ ಉಡುಗೆ ಧರಿಸಿ ಲಂಬಾಣಿ ಹಾಡಿಗೆ ಹೆಜ್ಜೆ ಹಾಕಿ ಸಖತ್ ಡ್ಯಾನ್ಸ್ ಮಾಡುವ ಮೂಲಕ ಬೆಳಕಿನ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.

ಇಡೀ ದೇಶದೆಲ್ಲೆಡೆ ಪಟಾಕಿ ಹಚ್ಚಿ ಸದ್ದು ಗದ್ದಲದಿಂದ ಬೆಳಕಿನ ಹಬ್ಬವನ್ನು ಆಚರಿಸುತ್ತಾರೆ. ಆದರೆ ಲಂಬಾಣಿ(ಬಂಜಾರ) ಸಮುದಾಯದ ತಾಂಡಾ ನಿವಾಸಿಗಳು ಮಾತ್ರ ಪುರಾತನ ಕಾಲದಿಂದ ಪರಿಸರ ಕಾಳಜಿ ಉಳಿಸಿಕೊಂಡು ಬಂದಿದ್ದಾರೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ನಮೂನೆಯ ಪಟಾಕಿ ತಂದು ಸಂಭ್ರಮಿಸುವ ಬದಲು ತಾಂಡಾ ನಿವಾಸಿಗಳು ಪುರಾತನ ಕಾಲದಿಂದ ನಡೆದುಕೊಂಡು ಬಂದ ಸಂಪ್ರದಾಯದಂತೆ ಸಂಸ್ಕೃತಿಯ ಪರಂಪರೆಯನ್ನು ಪಾಲನೆ ಮಾಡಿಕೊಂಡು ಹಬ್ಬ ಆಚರಿಸುತ್ತಾರೆ.

ಸ್ನೇಹಿತರೆಲ್ಲರೂ ಸೇರಿ ಸಿಹಿತಿನಿಸುಗಳನ್ನ ಸವಿಯುತ್ತಾರೆ. ಇದು ಈ ಹಬ್ಬದ ವಿಶೇಷಗಳಲ್ಲಿ ಒಂದು. ಬಳಿಕ ತಾಂಡಾದ ಮುಖ್ಯಸ್ಥರೊಬ್ಬರ ಮನೆ ಮುಂದೆ ಸೇರಿಕೊಂಡು ತಾಂಡಾದ ಹೊರ ಭಾಗದ ಕಾಡಿಗೆ ಹಾಡನ್ನು ಹಾಡುತ್ತಾ ತೆರಳುತ್ತಾರೆ.

ಯುವತಿಯರು ಲಂಬಾಣಿ ಸಂಸ್ಕೃತಿ ಬಿಂಬಿಸುವ ಉಡುಪು ತೊಟ್ಟು, ಬಲಿಪಾಡ್ಯದಂದು ಸ್ನೇಹಿತೆಯರೊಂದಿಗೆ ಹೂದೋಟಕ್ಕೆ ಲಗ್ಗೆ ಇಡುತ್ತಾರೆ. ಇದು ಅಪರೂಪ ಹಾಗೂ ದೀಪಾವಳಿಯ ವಿಶೇಷ. ಇದು ಕಂಡು ಬರುವುದು ಬಂಜಾರ ಸಮುದಾಯದಲ್ಲಿ ಮಾತ್ರ. ಆಧುನಿಕ ಭರಾಟೆಯಲ್ಲಿದ್ದರೂ, ಬಲಿಪಾಡ್ಯದಂದು ಸಾಂಪ್ರದಾಯಿಕ ಉಡುಗೆ ಕಣ್ಮನ ಸೆಳೆಯುತ್ತದೆ. ಪಾಂಮ್ಡಿ, ಫೆಟಿಯಾ, ಬಲಿಯಾ, ಚೊಟ್ಲಾ, ಭುರಿಯಾ, ಜಾಂಜರ್, ಸಡಕ್ ಘುಗರಿ, ಕೋಡಿ, ಪುಂದಾ, ಬುಡ್ಡಿ, ಪಟಿಯಾ, ಆಡಿ ಸಾಂಕ್ಳಿ, ಈಂಟಿ, ಇವೆಲ್ಲವೂಗಳಿಂದ ಶೃಂಗಾರಗೊಂಡು ಸಾಂಪ್ರದಾಯಿಕ ಪ್ರಕೃತಿಯತ್ತ ಧಾವಿಸುತ್ತಾರೆ.

ಆಧುನಿಕವಾಗಿ ಎಷ್ಟೇ ಮುಂದುವರೆದರೂ ಲಂಬಾಣಿ ಜನರು ಮೂಲ ಸಂಪ್ರದಾಯವನ್ನು ಮರೆತಿಲ್ಲ. ಹೀಗಾಗಿ ಪ್ರತಿ ವರ್ಷ ಬೆಳಕಿನ ಹಬ್ಬ ದೀಪಾವಳಿ ಲಂಬಾಣಿ ಸಂಪ್ರದಾಯ ಉಡುಗೆ ತೊಟ್ಟು ನೃತ್ಯ ಮಾಡುವ ಮೂಲಕ ಸಂಭ್ರಮದಿಂದ ಹಬ್ಬ ಆಚರಣೆ ಮಾಡಿದ್ದೇವೆ ಮಲವಗೊಪ್ಪ ಗ್ರಾಮಸ್ಥರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಆಧುನಿಕವಾಗಿ ಎಷ್ಟೇ ಮುಂದುವರೆದರೂ ಲಂಬಾಣಿ ಜನರು ಮೂಲ ಸಂಪ್ರದಾಯವನ್ನು ಮರೆತಿಲ್ಲ. ಹೀಗಾಗಿ ಪ್ರತಿ ವರ್ಷ ಬೆಳಕಿನ ಹಬ್ಬ ದೀಪಾವಳಿ ಲಂಬಾಣಿ ಸಂಪ್ರದಾಯ ಉಡುಗೆ ತೊಟ್ಟು ನೃತ್ಯ ಮಾಡುವ ಮೂಲಕ ಸಂಭ್ರಮದಿಂದ ಹಬ್ಬ ಆಚರಣೆ ಮಾಡುತ್ತಿದ್ದಾರೆ.

ವರದಿ ಪ್ರಜಾಶಕ್ತಿ…