ಕಂಬಳ ನ್ಯೂಸ್…

ಇತಿಹಾಸದಲ್ಲಿ ಮೊದಲ ಬಾರಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳ ನಡೆಯಿತು.25 ಮತ್ತು 26ರಂದು ನಡೆದ ಕಂಬಳ ಕಾರ್ಯಕ್ರಮವನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.

ರಾಜಧಾನಿ ಬೆಂಗಳೂರು ಅರಮನೆ ಮೈದಾನದಲ್ಲಿ ಪ್ರಥಮವಾಗಿ ನಡೆದ ಕಂಬಳ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಉಡುಪಿ ಮತ್ತು ರಾಜ್ಯದ ಎಲ್ಲಾ ಕಡೆಯಿಂದ 200 ಕು ಹೆಚ್ಚು ಕೋಣಗಳು ಭಾಗವಹಿಸಿದ್ದವು. ಈ ಕಾರ್ಯಕ್ರಮಕ್ಕೆ ರಾಜ್ಯ ದೇಶ ವಿದೇಶಗಳಿಂದ ಸುಮಾರು 10 ಲಕ್ಷ ಕಂಬಳ ಪ್ರಿಯರು ಆಗಮಿಸಿದ್ದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಿ ಎಸ್ ಯಡಿಯೂರಪ್ಪ , ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಡಿವೈನ್ ಸ್ಟಾರ್ ರಿಶಬ್ ಶೆಟ್ಟಿ , ಅಶ್ವಿನಿ ಪುನೀತ್ ರಾಜಕುಮಾರ್ , ರಿಯಲ್ ಸ್ಟಾರ್ ಉಪೇಂದ್ರ ,ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ,ಪೂಜಾ ಹೆಗ್ಡೆ ಅನುಷ್ಕಾ ಶೆಟ್ಟಿ ಪಾಲ್ಗೊಂಡಿದ್ದರು.ಈ ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಅಧ್ಯಕ್ಷರಾದ ಪೂತ್ತುರು ಶಾಸಕ ಅಶೋಕ್ ಕುಮಾರ್ ರೈ ಉಪಾಧ್ಯಕ್ಷರಾದ ಗುಣರಂಜನ್ ಶೆಟ್ಟಿ ಕಾರ್ಯಧ್ಯಕ್ಷರಾದ ಗುರುಕಿರಣ್ ಉಪಸ್ಥಿತರಿದ್ದರು.

ಬಹುಮಾನಗಳ ವಿವರ…


ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ :

ಕನೆಹಲಗೆ: 07 ಜೊತೆ
ಅಡ್ಡಹಲಗೆ: 06 ಜೊತೆ
ಹಗ್ಗ ಹಿರಿಯ: 21 ಜೊತೆ
ನೇಗಿಲು ಹಿರಿಯ: 32 ಜೊತೆ
ಹಗ್ಗ ಕಿರಿಯ: 31 ಜೊತೆ
ನೇಗಿಲು ಕಿರಿಯ: 62 ಜೊತೆ
ಒಟ್ಟು ಕೋಣಗಳ ಸಂಖ್ಯೆ: 159 ಜೊತೆ


ಕನೆಹಲಗೆ:

( 6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ )
ಬೊಳ್ಳಂಬಳ್ಳಿ ಚೈತ್ರ ಪರಮೇಶ್ವರ ಭಟ್ “ಬಿ”
ಹಲಗೆ ಮುಟ್ಟಿದವರು: ಉಲ್ಲೂರು ಕಂದಾವರ ಗಣೇಶ್


ಅಡ್ಡ ಹಲಗೆ:

ಪ್ರಥಮ: ಎಸ್. ಎಮ್. ಎಸ್ ಫ್ಯಾಮಿಲಿ ಬೆಂಗಳೂರು
ಹಲಗೆ ಮುಟ್ಟಿದವರು: ಭಟ್ಕಳ ಹರೀಶ್

ದ್ವಿತೀಯ: ಬೋಳಾರ ತ್ರಿಶಾಲ್ ಕೆ ಪೂಜಾರಿ
ಹಲಗೆ ಮುಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ


ಹಗ್ಗ ಹಿರಿಯ:

ಪ್ರಥಮ: ನಂದಳಿಕೆ ಶ್ರೀಕಾಂತ್ ಭಟ್ “ಸಿ”
ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ

ದ್ವಿತೀಯ: ಮಾಳ ಆನಂದ ನಿಲಯ ಶೇಖರ ಎ ಶೆಟ್ಟಿ
ಓಡಿಸಿದವರು: ಭಟ್ಕಳ ಶಂಕರ್ ನಾಯ್ಕ್


ಹಗ್ಗ ಕಿರಿಯ:

ಪ್ರಥಮ: ಸುರತ್ಕಲ್ ಪಾಂಚಜನ್ಯ ಯೋಗೀಶ್ ಕರಿಯ ಪೂಜಾರಿ
ಓಡಿಸಿದವರು: ಮಾಸ್ತಿ ಕಟ್ಟೆ ಸ್ವರೂಪ್

ದ್ವಿತೀಯ: ನಿಟ್ಟೆ ಪರಪ್ಪಾಡಿ ಸುರೇಶ್ ಕೋಟ್ಯಾನ್ “ಎ”
ಓಡಿಸಿದವರು: ಅತ್ತೂರು ಕೋಡಂಗೆ ಸುಧೀರ್ ಸಾಲ್ಯಾನ್


ನೇಗಿಲು ಹಿರಿಯ:

ಪ್ರಥಮ: ಬಂಗಾಡಿ ಪರಂಬೇಲು ನಾರಾಯಣ ಮಲೆ ಕುಡಿಯ
ಓಡಿಸಿದವರು: ಸರಪಾಡಿ ಧನಂಜಯ ಗೌಡ

ದ್ವಿತೀಯ: ಮಾಳ ಆನಂದ ನಿಲಯ ಶೇಖರ ಎ ಶೆಟ್ಟಿ
ಓಡಿಸಿದವರು: ಪಟ್ಟೆ ಗುರು ಚರಣ್


ನೇಗಿಲು ಕಿರಿಯ:

ಪ್ರಥಮ: ಜೈ ತುಳುನಾಡು ಪುತ್ತೂರು ಬೊಟ್ಯಾಡಿ ಕಿಶೋರ್ ಭಂಡಾರಿ
ಓಡಿಸಿದವರು: ಪೆಂರ್ಗಾಲು ಕೃತಿಕ್ ಗೌಡ

ದ್ವಿತೀಯ: ಎರ್ಮಾಳ್ ಪುಚ್ಚೊಟ್ಟುಬೀಡು ಬಾಲಚಂದ್ರ ಶೆಟ್ಟಿ
ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ ಪಡೆದಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ…