ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ವತಿಯಿಂದ ಡಿಸೆಂಬರ್ 3ರಂದು ಅಶೋಕನಗರ ಮುಖ್ಯ ರಸ್ತೆಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.ನಾಡಗೀತೆಯೊಂದಿಗೆ ಪ್ರಾರಂಭವಾಗಿ ಕಾರ್ಯಕ್ರಮದಲ್ಲಿಅಧ್ಯಕ್ಷತೆಯನ್ನು ಕರವೇ ಯುವಸೇನೆ ಜಿಲ್ಲಾಧ್ಯಕ್ಷರಾದ ಕಿರಣ್ ಕುಮಾರ್ ಹೆಚ್ಎಸ್ ವಹಿಸಿದ್ದರು.

ಮಾಜಿ ಶಾಸಕರು ಹಾಗೂ ಜೆಡಿಎಸ್ ಮುಖಂಡರಾದ ಕೆ ಬಿ ಪ್ರಸನ್ನ ಕುಮಾರ್ ಮಹಮ್ಮದ್ ಶಫಿವುಲ್ಲಾ ಅಧ್ಯಕ್ಷರು ವರ್ಕ್ ಬೋರ್ಡ್ ಸಲಹಾ ಸಮಿತಿ ಪತ್ರಕರ್ತರು ಹಾಗೂ ಸಾಹಿತಿಗಳಾದ ಗಾರಾ ಶ್ರೀನಿವಾಸ್ ಕರವೇ ಯುವ ಸೇನೆಯ ಕಾನೂನು ಸಲಹೆಗಾರರ ಟಿ ಕೆ ಅನಿಲ್ ಕುಮಾರ ಸಮಾಜ ಸೇವಕರಾದ ಚಿರಂಜೀವಿ ಬಾಬು ಪಂಚ ಬಾಷಾ ಚಲನಚಿತ್ರ ನಟ ರಘುರಾಜ್ ಮಲ್ನಾಡ ಪ್ರಗತಿಪರ ರೈತರಾದ ದೇವರಾಜ್ ಹಾಗೂ ವಿಶೇಷ ಆಹ್ವಾನಿತರಾಗಿ ಇಲಾಖೆ ಶಿವಪ್ಪ ಸಂಗಣ್ಣನವರ್ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಎನ್ ಮಾಲತೇಶ್ ರವರು ಉಪಸ್ಥಿತರಿದ್ದರು.

ಪತ್ರಕರ್ತ ಸಾಹಿತಿ ಗಾರಾ ಶ್ರೀನಿವಾಸ್ ಕಾನೂನು ಸಲಹೆಗಾರರ ಅನಿಲ್ ಕುಮಾರ್ ಹಾಗೂ ಸಮಾಜ ಸೇವಕರಾದ ಚಿರಂಜೀವಿ ಬಾಬು ಶ್ರೀ ಶಿವಪ್ಪ ಸಂಗಣ್ಣನವರ್ ಹಾಗೂ ಭದ್ರಾವತಿ ತಾಲೂಕು ಅಧ್ಯಕ್ಷರಾದ ಮಂಜುನಾಥ್ ಹಾಗೂ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಎನ್. ಮಾಲತೇಶ್ ರವರು ಉಪಸ್ಥಿತರಿದ್ದರು

ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸೇವಾ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತು.ಹಾಗೂ ಕಾರ್ಯಕ್ರಮದ ಕೊನೆಯಲ್ಲಿ ಪ್ರೀತಂ ಮಲೋಡಿ ಆರ್ಕೆಸ್ಟ್ರಾ ಅವರಿಂದ ರಸಮಂಜರಿ ಕಾರ್ಯಕ್ರಮ ಏರ್ಪಡಿಸಿದ್ದರು.

ವರದಿ ಪ್ರಜಾಶಕ್ತಿ…