ಅಪರಾಧ ತಡೆ ಮಾಸಾಚರಣೆ- 2023ರ ಅಂಗವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿಸುವ ಶ್ರೀ ಗುರಣ್ಣ ಹೆಬ್ಬಾರ್, ಸಿಪಿಐ, ಹೊಸನಗರ ವೃತ್ತ ರವರು ಹೊಸನಗರ ಪಟ್ಟಣದ ಮಲ್ನಾಡ್ ಶಾಲೆಯಲ್ಲಿ, ಶ್ರೀ ರವಿ ಪಾಟೀಲ್ ಪಿಐ ದೊಡ್ಡಪೇಟೆ ಪೊಲೀಸ್ ಠಾಣೆ ರವರು ಶಿವಮೊಗ್ಗ ನಗರದ ಜೆಪಿ ನಾರಾಯಣ್ ಪದವಿ ಪೂರ್ವ ಕಾಲೇಜಿನಲ್ಲಿ, ಶ್ರೀಮತಿ ಚಂದ್ರಕಲಾ, ಪಿಐ ವಿನೋಬನಗರ ಪೊಲೀಸ್ ಠಾಣೆ ರವರು ಕಲ್ಲಳ್ಳಿಯ ಸ್ವಾಮಿ ವಿವೇಕಾನಂದ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ, ಶ್ರೀ ನಾಗರಾಜ್ ಹೆಚ್ ಎನ್, ಪಿಎಸ್ಐ ಸೊರಬ ಪೊಲೀಸ್ ಠಾಣೆ ರವರು ಸೊರಬದ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ, ಶ್ರೀ ತಿರುಮಲೇಶ್, ಪಿಎಸ್ಐ ಶಿವಮೊಗ್ಗ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ರವರು ದುರ್ಗಿಗುಡಿ ಪ್ರೌಢ ಶಾಲೆಯಲ್ಲಿ, ಶ್ರೀ ಮಂಜುನಾಥ್ ಕುರಿ ಪಿಎಸ್ಐ ಶಿರಾಳಕೊಪ್ಪ ಪೊಲೀಸ್ ಠಾಣೆ ರವರು ತಡಗಣಿಯ ಅಕ್ಕಮಹಾದೇವಿ ಶಾಲೆಯಲ್ಲಿ, ಶ್ರೀ ರಘುವೀರ್, ಪಿಎಸ್ಐ ತುಂಗಾನಗರ ಪೊಲೀಸ್ ಠಾಣೆ ರವರು ರಾಮಕೃಷ್ಣ ವಿಧ್ಯಾನಿಖೇತನ ಶಾಲೆಯಲ್ಲಿ, ಶ್ರೀ ಕುಮಾರ್, ಪಿಎಸ್ಐ ಕೋಟೆ ಪೊಲೀಸ್ ಠಾಣೆ ರವರು ಕೋಟೆ ವ್ಯಾಪ್ತಿ ಸರ್ಕಾರಿ ಶಾಲೆಯಲ್ಲಿ ಮತ್ತು ಶ್ರೀ ಕೃಷ್ಣಪ್ಪ, ಪಿಎಸ್ಐ ಹೊಸಮನೆ ಪೊಲೀಸ್ ಠಾಣೆ ರವರು ಹೊಸಮನೆ ಸರ್ಕಾರಿ ಪ್ರೌಢ ಶಾಲೆಯಲ್ಲಿ, ಕಾನೂನು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳಿಗೆ ಪೋಕ್ಸೋ ಕಾಯ್ದೆ, ಐಎಂವಿ ಕಾಯ್ದೆ, ಸೈಬರ್ ಕ್ರೈಂ, ಮಾದಕ ದ್ರವ್ಯ ವ್ಯಸನದ ದುಷ್ಪರಿಣಾಮಗಳು, ರಸ್ತೆ ಸುರಕ್ಷತೆ, ಸಂಚಾರ ನಿಯಮ ಪಾಲನೆ, ಸಾಮಾಜಿಕ ಜಾಲ ತಾಣದ ಅತಿಯಾದ ಬಳಕೆಯ ದುಪರಿಣಾಮಗಳು ಮತ್ತು ಕಾನೂನಿನಲ್ಲಿ ಮಕ್ಕಳಿಗಿರುವ ರಕ್ಷಣೆಯ ಬಗ್ಗೆ ಮಾಹಿತಿಯನ್ನು ನೀಡಿದರು.

ವರದಿ ಪ್ರಜಾಶಕ್ತಿ…