ಅಪರಾಧ ತಡೆ ಮಾಸಾಚರಣೆ- 2023ರ ರಿಪ್ಪನ್ ಪೇಟೆಯ ಪದವಿ ಕಾಲೇಜಿನಲ್ಲಿ ಪೊಲೀಸ್ ಇಲಾಖೆಯ ಮುಖಾಂತರ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಶ್ರೀ ಗುರಣ್ಣ ಹೆಬ್ಬಾರ್ ಸಿಪಿಐ ಹೊಸನಗರ ವೃತ್ತ ರವರು ರಿಪ್ಪನ್ ಪೇಟೆಯ ಪದವಿ ಕಾಲೇಜಿನಲ್ಲಿ, ಶ್ರೀ ಭರತ್ ಪಿಐ ಮಹಿಳಾ ಠಾಣೆ ರವರು ಆಲ್ಕೊಳದ ಜೋಸೆಫ್ ಪದವಿಪೂರ್ವ ಕಾಲೇಜಿನಲ್ಲಿ, ಶ್ರೀ ಮಂಜುನಾಥ್ ಪಿಐ ತುಂಗಾನಗರ ರವರು ನಂಜಪ್ಪ ಲೇ ಔಟ್ ನ ಇಂಪೀರಿಯಲ್ ಕಾಲೇಜಿನಲ್ಲಿ, ಶ್ರೀ ಸಿದ್ದಪ್ಪ, ಪಿಎಸ್ಐ ಮಾಳೂರು ರವರು ಮಾಳೂರಿನ ಸಿಕೆ ರಸ್ತೆ ಪ್ರೌಢ ಶಾಲೆಯಲ್ಲಿ, ಶ್ರೀ ರಂಗನಾಥ್ ಅಂತರಗಟ್ಟಿ ಪಿಎಸ್ಐ ಆಗುಂಬೆ ರವರು ಆಗುಂಬೆಯ ಎಸ್ ವಿ ಎಸ್ ಪ್ರೌಢ ಶಾಲೆಯಲ್ಲಿ, ಶ್ರೀ ಸುನೀಲ್, ಪಿಎಸ್ಐ ವಿನೋಬನಗರ ರವರು ಡಿವಿಎಸ್ ಪದವಿ ಕಾಲೇಜಿನಲ್ಲಿ, ಶ್ರೀ ಶಾಂತರಾಜ್, ಪಿಎಸ್ಐ ಕುಂಸಿ ರವರು ಕುಂಸಿಯ ಪ್ರೌಢ ಶಾಲೆಯಲ್ಲಿ, ಶ್ರೀ ಮಂಜುನಾಥ್ ಎಸ್ ಕುರಿ ಪಿಎಸ್ಐ ಶಿರಾಳಕೊಪ್ಪ ರವರು ತಾಳಗುಂದದ ವೀರಭದ್ರೇಶ್ವರ ಬಿ ಇಡಿ ಕಾಲೇಜಿನಲ್ಲಿ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು.

ವಿಧ್ಯಾರ್ಥಿಗಳ ಕುರಿತು ಮಾತನಾಡಿ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಮಾದಕ ದ್ರವ್ಯದ ದುಷ್ಪರಿಣಾಮಗಳು, ವಿಧ್ಯಾರ್ಥಿ ಜೀವನದ ಮೇಲೆ ಸಾಮಾಜಿಕ ಜಾಲತಾಣದ ಅತಿಯಾದ ಬಳಕೆಯ ಅಡ್ಡ ಪರಿಣಾಮಗಳು, ರಸ್ತೆ ಅಪಘಾತ ನಿಯಂತ್ರಣದಲ್ಲಿ ವಿಧ್ಯಾರ್ಥಿಗಳ ಪಾತ್ರ ಮತ್ತು ಸಂಚಾರ ನಿಯಮ ಪಾಲನೆಯ ಮಹತ್ವಗಳು, ಬಾಲ್ಯ ವಿವಾಹ ನಿಷೇದ ಕಾಯ್ದೆ, ಬಾಲಕಾರ್ಮಿಕ ಪದ್ದತಿ ನಿಷೇದ ಕಾಯ್ದೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳು ಮತ್ತು ಪೋಕ್ಸೋ ಕಾಯ್ದೆಗಳ ಬಗ್ಗೆ ಮಾಹಿತಿಯನ್ನು ನೀಡಿರುತ್ತಾರೆ.

ವರದಿ ಪ್ರಜಾಶಕ್ತಿ…