ಕರ್ನಾಟಕ ಒಲಂಪಿಕ್ ಭವನದಲ್ಲಿ ನಡೆದ ಬಾಕ್ಸಿಂಗ್ ಚುನಾವಣೆಯಲ್ಲಿ
ರಾಜ್ಯ ಸಹ ಕಾರ್ಯದರ್ಶಿಯಾಗಿ ಶಿವಮೊಗ್ಗ ವಿನೋದ್ ಆಯ್ಕೆಯಾಗಿದ್ದಾರೆ.

ಬೆಂಗಳೂರಿನ ಕರ್ನಾಟಕ ಒಲಂಪಿಕ್ ಭವನದಲ್ಲಿ ನಡೆದ ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ನ ಚುನಾವಣೆಯಲ್ಲಿ ಸಹ ಕಾರ್ಯದರ್ಶಿ
ಸ್ಥಾನಕ್ಕೆ ಸ್ಪರ್ಧಿಸಿದ್ದ ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ಜಿಲ್ಲಾ ಅಮೆಚೂರು ಬಾಕ್ಸಿಂಗ್ ಅಸೋಸಿಯೇಷನ್ ಅಧ್ಯಕ್ಷ ಶಿವಮೊಗ್ಗ ವಿನೋದ್ ಅವಿರೋಧವಾಗಿ 2023 ರಿಂದ 2027ನೇ ಸಾಲಿನ ಅವಧಿಗೆ ಕರ್ನಾಟಕ ಅಮೆಚೂರು ಬಾಕ್ಸಿಂಗ್ ಅಸೋಸಿಯೇಷನ್ ಸಹ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
ಸದರಿಯ ಅಸೋಸಿಯೇಷನ್ ಬಾಕ್ಸಿಂಗ್ ಫೆಡರೇಷನ್ ಆಫ್ ಇಂಡಿಯಾ ಹಾಗೂ ಕರ್ನಾಟಕ ಒಲಂಪಿಕ್ ಸಂಸ್ಥೆ ಹಾಗೂ ಕರ್ನಾಟಕ ಕ್ರೀಡಾ ಪ್ರಾಧಿಕಾರದಿಂದ ಮಾನ್ಯತೆ ಪಡೆದಿರುವ ಅಸೋಸಿಯೇಷನ್ ಆಗಿದೆ.

ಈ ಸಂದರ್ಭದಲ್ಲಿ ಚುನಾವಣೆ ನಿರ್ದೇಶಕರಾಗಿ ಹೈ ಕೋರ್ಟ್ ವಕೀಲರಾದ ಶಶಿವರ್ದನ್ ಹಾಗೂ ಯುವಸಬಲಿಕರಣ ಮತ್ತು ಕ್ರೀಡಾ ಇಲಾಖೆಯ ವೀಕ್ಷಕರಾಗಿ ಶ್ರೀಮತಿ ಶಶಿಕಲಾ ಮತ್ತು ಕರ್ನಾಟಕ ಒಲಂಪಿಕ ಅಸೋಸಿಯೇಷನ್ ವೀಕ್ಷಕರಾಗಿ ಆರ್ ಪ್ರಕಾಶ್ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಸಹ ಕಾರ್ಯದರ್ಶಿ ಸ್ಥಾನಕ್ಕೆ ಆಯ್ಕೆಯಾಗಲು ಸಹಕರಿಸಿದ ಕರ್ನಾಟಕ ಒಲಂಪಿಕ್ ಅಧ್ಯಕ್ಷರಾದ ಕೆ ಗೋವಿಂದರಾಜು ಉಪಾಧ್ಯಕ್ಷರಾದ ಡಾ ಮಂಜೇಗೌಡ
ಮತ್ತು ಪ್ರಧಾನ ಕಾರ್ಯದರ್ಶಿ ಅನಂತರಾಜು ಮತ್ತು ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಸಾಯಿ ಸತೀಶ್ ರವರಿಗೆ ಶಿವಮೊಗ್ಗ ವಿನೋದ ಅಭಿನಂದನೆಗಳನ್ನು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಹಾಗೂ ರಾಜ್ಯದಲ್ಲಿ ಬಾಕ್ಸಿಂಗ್ ಅಭಿವೃದ್ಧಿಗೆ ಈ ಹುದ್ದೆ ಇಂದ ನಿಷ್ಠೆಯಿಂದ ಕೆಲಸ ನಿರ್ವಹಿಸುವುದಾಗಿ ಹೇಳಿದ್ದಾರೆ.

ವರದಿ ಪ್ರಜಾಶಕ್ತಿ…