ಎಸ್ ಆರ್ ಎನ್ ಎಂ ಕಾಲೇಜ್ ನಲ್ಲಿ ಅಷ್ಟಾವಧಾನ ಒಂದು ಬೌದ್ಧಿಕವಾದ ಕಲೆ. ಇದು ಅತ್ಯಂತ ತಾಳ್ಮೆ ಅಧ್ಯಯನ ಶ್ರದ್ಧೆಗಳನ್ನು ಅಪೇಕ್ಷಿಸುತ್ತದೆ. ಯುವಜನರು ಇಂಥ ಕಲೆಗಳಿಂದ ಆಕರ್ಷಿತರಾಗಬೇಕು. ಭಾಷಾಶುದ್ಧತೆ, ಸಾಹಿತ್ಯಾಸಕ್ತಿ ಯುವಜನರಲ್ಲಿ ಬೆಳೆಯಲಿ ಎಂದು ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಜಿ ಎಸ್ ನಾರಾಯಣ್ ರಾವ್ ತಿಳಿಸಿದರು.

    ಸಂಸ್ಕೃತ ಉಪನ್ಯಾಸಕರಾದ ವಿದ್ವಾನ್ ಮಂಜುನಾಥ ಭಟ್ಟರ ನಿರ್ದೇಶನದಲ್ಲಿ ವಿದ್ಯಾರ್ಥಿಗಳು ಕನ್ನಡ ಹಾಗೂ ಸಂಸ್ಕೃತ ಭಾಷೆಯಲ್ಲಿ ಅಷ್ಟಾವಧಾನವನ್ನು ನಡೆಸಿಕೊಟ್ಟರು.
    ಪ್ರಾಂಶುಪಾಲರಾದ ಡಾ.ಅರವಿಂದ ಕೆ ಎಲ್ ಅವರು ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಎಲ್ಲ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು.

    ವರದಿ ಪ್ರಜಾಶಕ್ತಿ…