ವಂಚಕನೊಬ್ಬ ಅಡಿಕೆ ಅಡಿಕೆ ಸುಲಿಯಲು ತೀರ್ಥಳ್ಳಿ ತೆರಳುತ್ತಿದ್ದ ತರೀಕೆರೆಯ ಶ್ರೀಮತಿ ಲಕ್ಷ್ಮಮ್ಮ ಎನ್ನುವವರಿಗೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಮಗಳ ಚಿಕಿತ್ಸೆಗೆ ಹಣವಿಲ್ಲವೆಂದು ನಂಬಿಸಿ ತನ್ನ ಬಳಿ ಇದ್ದ ನಕಲಿ ಬಂಗಾರದ ಕಾಸಿನ ಸರವನ್ನು ಮಹಿಳೆಗೆ ಕೊಟ್ಟು ಇದನ್ನು ಮಾರಿದರೆ ತುಂಬಾ ಹಣ ಬರುತ್ತದೆ ಎಂದು ನಂಬಿಸಿ ಮಹಿಳೆಯ ಬಳಿಯಿದ್ದ ಬಂಗಾರದ ಓಲೆ ಮತ್ತು ಕಿವಿ ಚೈನ್ ತೆಗೆದುಕೊಂಡು ಮೋಸ ಮಾಡಿದ್ದ.


ಈ ಬಗ್ಗೆ ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಶ್ರೀ ಮಿಥುನ್ ಕುಮಾರ್ ಜಿ. ಕೆ, ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ಶ್ರೀ ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಮತ್ತು ಶ್ರೀ ಕಾರಿಯಪ್ಪ ಎ ಜಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ರವರ ಮಾರ್ಗದರ್ಶನದಲ್ಲಿ ಶ್ರೀ ಬಾಲರಾಜ್ ಬಿ, ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಎ ಉಪ ವಿಭಾಗ ರವರ ಮೇಲ್ವಿಚಾರಣೆಯಲ್ಲಿ, ಶ್ರೀ ರವಿ ಪಾಟೀಲ್, ಪಿಐ, ದೊಡ್ಡಪೇಟೆ ರವರ ನೇತೃತ್ವದ ಶ್ರೀನಿವಾಸ್ ಪಿಎಸ್ಐ, ಮತ್ತು ಸಿಬ್ಬಂಧಿಗಲಾದ ಹೆಚ್ ಸಿ – ಪಾಲಾಕ್ಷ ನಾಯ್ಕ, ಲಚ್ಚಾನಾಯ್ಕ, ಸಿಪಿಸಿ – ಚಂದ್ರಾನಾಯ್ಕ, ನಿತಿನ್, ಪುನಿತ್, ಚಂದ್ರಾನಾಯ್ಕ ಎಂ ಮತ್ತು ಮನೋಹರರವರನ್ನು ಒಳಗೊಂಡ *ತನಿಖಾ ತಂಡವನ್ನು ರಚಿಸಲಾಗಿತ್ತು

ತನಿಖಾ ತಂಡವು ಪ್ರಕರಣದ ಆರೋಪಿ ಕೃಷ್ಣಪ್ಪ, 62 ವರ್ಷ, ಭದ್ರಾಪುರ ಗ್ರಾಮ ತರಲಘಟ್ಟ, ಶಿಕಾರಿಪುರ* ಈತನನ್ನು ದಸ್ತಗಿರಿ ಮಾಡಿ, ಆರೋಪಿತನಿಂದ ಅಂದಾಜು ಮೌಲ್ಯ 25,000/- ರೂಗಳ 05 ಗ್ರಾಂ ತೂಕದ* ಬಂಗಾರ ಕಿವಿ ಓಲೆ ಮತ್ತು ಮಾಟಿಯನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.

ತನಿಖಾ ತಂಡದ ಉತ್ತಮ ಕಾರ್ಯವನ್ನು* ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿದ್ದಾರೆ.

ವರದಿ ಪ್ರಜಾಶಕ್ತಿ