ಕೇಂದ್ರ ಸರ್ಕಾರ ತಂದಿರುವ ಹೊಸ ಮಸೂದೆಯನ್ನು ಹಿಂಪಡೆಯಲು ಕೋರಿ ಲಾರಿ ಚಾಲಕರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.
ಐಪಿಎಸ್ ಆಕ್ಟ್ ನಲ್ಲಿ ಹಿಟ್ ಅಂಡ್ ರನ್ ಕಾಯ್ದೆಗೆ ತಿದ್ದುಪಡಿ ತಂದಿರುವುದನ್ನು ವಿರೋಧಿಸಿ ಲಾರಿ ಚಾಲಕರು ಇಂದು ಬೀದಿಗಿಳಿದು ಸುಮಾರು 140ಕ್ಕೂ ಹೆಚ್ಚು ಸರಕು ತುಂಬಿರುವ ಲಾರಿಗಳನ್ನು ನಗರದ ಎಂ ಆರ್ ಎಸ್ ವೃತ್ತದಿಂದ ಕಿಲೋಮೀಟರ್ ಗಟ್ಟಲೆ ಲಾರಿಗಳನ್ನು ನಿಲ್ಲಿಸಿ ಮಸೂದೆಯನ್ನು ಹಿಂಪಡೆಯಬೇಕು ಎಂದು ಘೋಷಣೆ ಕೂಗುತ್ತಾ ಪ್ರತಿಭಟನೆ ಮಾಡಿದರು.
ಈ ಸಂದರ್ಭದಲ್ಲಿ ಲಾರಿ ಮಾಲೀಕರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿರಿದರು.