ಮಾತೃವಾತ್ಸಲ್ಯ -ಮದರ್ & ಬೇಬಿಕೇರ್ ಆಸ್ಪತ್ರೆಯು ಫೆಬ್ರವರಿ 4 ಭಾನುವಾರದಂದು ಪ್ರಾರಂಭಗೊಳ್ಳಲಿದೆ ಎಂದು ಡಾ. ಪೃಥ್ವಿ ತಿಳಿಸಿದರು.ಸಹೋದ್ಯೋಗಿ ವೈದ್ಯ ಮಿತ್ರರು, ಹಿತೈಷಿಗಳ ಭೇಟಿ ಹಾಗೂ ನಮ್ಮ ಆತಿಥ್ಯ ಬೆಳಿಗ್ಗೆ 10ರಿಂದ ಸಂಜೆ 4 ರ ವರೆಗೆ ಆಯೋಜಿಸಲಾಗಿದೆ ಎಂದರು.

ದೊರೆಯುವ ಸೌಲಭ್ಯಗಳು…

ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 24 ಗಂಟೆಗಳ ತುರ್ತು ಸೇವೆ ಲಭ್ಯವಿದೆ. ಮಕ್ಕಳ ತೀವ್ರ ನಿಗಾ ಘಟಕ (NICU, PICU ) ನಾರ್ಮಲ್ ಡೆಲಿವರಿ, ಸಿಸೇರಿಯನ್ ಡೆಲಿವರಿ, ಗರ್ಭಿಣಿಯರ ಆರೈಕೆ, ನೋವುರಹಿತ ಡೆಲಿವರಿ ಹಾಗೂ ಸುಸಜ್ಜಿತ ಆಪರೇಷನ್ ಥಿಯೇಟರ್ಸ್, ಲೇಬರ್ ಥಿಯೇಟರ್, ಮಕ್ಕಳ ಶಸ್ತ್ರಚಿಕಿತ್ಸೆ, ಲ್ಯಾಪ್ರೊಸ್ಕೋಪಿಕ್ ಸರ್ಜರಿ, ವ್ಯಾಕ್ಸಿನಷನ್ ವ್ಯವಸ್ಥೆ, ಸೂಟ್ ಡೆಲಿವರಿ ವ್ಯವಸ್ಥೆ, ಡಿಲಕ್ಸ್ ಮತ್ತು ಸ್ಪೆಷಲ್ ವಾರ್ಡ್ ಗಳ ವ್ಯವಸ್ಥೆ ಇರುತ್ತದೆ.


ಇಂದಿನಿಂದಲೇ ಉಚಿತ OPD ಹಾಗೂ ಎಲ್ಲಾ ಚಿಕಿತ್ಸೆಗಳು ರಿಯಾಯಿತಿ ದರದಲ್ಲಿ ಲಭ್ಯವಿರುತ್ತದೆ. ನುರಿತ ಪ್ರಸೂತಿ ಹಾಗೂ ಸ್ಟ್ರಿರೋಗತಜ್ಞರ, ಮಕ್ಕಳ ವೈದ್ಯರ ತಂಡ ಲಭ್ಯವಿರುತ್ತದೆ.
ಈ ಪತ್ರಿಕಾಗೋಷ್ಠಿಯಲ್ಲಿ ಮಾನ್ಯ ಮಾಜಿ ಉಪಮುಖ್ಯಮಂತ್ರಿಗಳಾದ ಶ್ರೀ ಕೆ ಎಸ್ ಈಶ್ವರಪ್ಪನವರು, ನಿರ್ದೇಶಕರುಗಳಾದ ಕೆ. ಈ. ಕಾಂತೇಶ್, ಡಾ. ಲಕ್ಷ್ಮೀನಾರಾಯಣ ಆಚಾರ್, ಡಾ. ತೇಜಸ್ವಿ ಟಿ. ಎಸ್, ಡಾ. ಪೃಥ್ವಿ ಬಿ. ಸಿ., ಡಾ. ವಾಮನ್ ಶಾನಭಾಗ್, ಆಸ್ಪತ್ರೆಯ ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞರಾದ ಡಾ. ಸುಮ ಕೆ. ಎಂ., ಡಾ. ನಾಗಮಣಿ ಎಂ. ಸಿ., ಮಕ್ಕಳ ತಜ್ಞರಾದ ಡಾ. ವೆಂಕಟೇಶ್ ಮೂರ್ತಿ, ಡಾ. ಶ್ವೇತ ಇವರುಗಳು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ