ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರಿಗೆ ವಿತರಿಸುವ ರೇಷನ್ ಕಿಟ್ ಗಳನ್ನು ಶಿವಮೊಗ್ಗ ಗ್ರಾಮಾಂತರ ಬಿಜೆಪಿ ಶಾಸಕ ಅಶೋಕ್ ನಾಯ್ಕ ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಹಾಗೂ ತಮ್ಮ ಬೆಂಬಲಿಗರಿಗೆ ವಿತರಿಸಲು ಶಾಸಕರ ಒಡೆತನದ ಖಾಸಗಿ ಶಿಕ್ಷಣ ಸಂಸ್ಥೆ ಅಕ್ಷರ ಕಾಲೇಜಿನಲ್ಲಿ ಸರ್ಕಾರದಿಂದ ಬಂದ ಕಾರ್ಮಿಕರ ಸಾವಿರಾರು ರೇಷನ್ ಕಿಟ್ ಗಳನ್ನು ಸಂಗ್ರಹಿಸಿದ್ದು ಈ ಸ್ಥಳಕ್ಕೆ ಶುಕ್ರವಾರ ಮಧ್ಯಾಹ್ನ ಯುವ ಕಾಂಗ್ರೆಸ್ನ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಕಾರ್ಮಿಕ ಅಧಿಕಾರಿ ಪ್ರತಿಭಟನಾಕಾರರಿಗೆ ಉಡಾಫೆ ಉತ್ತರ ನೀಡಿದರು. ದಾಸ್ತಾನು ಆಗಿರುವ ಅಕ್ಷರ ಕಾಲೇಜಿನಲ್ಲಿ ಯಾವುದೇ ಕಾರ್ಮಿಕ ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಗಳು ಇಲ್ಲದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಯುವ ಕಾಂಗ್ರೆಸ್ ಕಾರ್ಯಕರ್ತರು ಸ್ಥಳಕ್ಕೆ ಹೋದ ಸಂದರ್ಭದಲ್ಲಿ ಆಟೋರಿಕ್ಷ ಗಳು ಹಾಗೂ ಓಮಿನಿ ವ್ಯಾನ್ ಗಳಲ್ಲಿ ಶಾಸಕರ ಬೆಂಬಲಿಗರು ರೇಷನ್ ಕಿಟ್ ಗಳನ್ನು ಸಾಗುತ್ತಿರುವುದು ಕಂಡು ಬಂದಿರುತ್ತದೆ.

ಶಾಸಕರು ಹಾಗೂ ಕಾರ್ಮಿಕ ಅಧಿಕಾರಿಗಳು ನೇರವಾಗಿ ಶಾಮೀಲಾಗಿರುವುದು ತೋರುತ್ತಿದ್ದು ಇಂಥವರ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಡಳಿತಕ್ಕೆ ಯುವ ಕಾಂಗ್ರೆಸ್ ಆಗ್ರಹಿಸುತ್ತದೆ.

ಮನವಿಯ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್. ಪಿ. ಗಿರೀಶ್, ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ, ಬಿ.ಲೋಕೇಶ್, ದಕ್ಷಿಣ ಯುವ ಕಾಂಗ್ರೆಸ್ ಬ್ಲಾಕ್, ಎಸ್. ಕುಮರೇಶ್ , ಪದಾಧಿಕಾರಿಗಳಾದ, ಉಮೇಶ್ ಬಾಳೆಗುಂಡಿ, ಪುಷ್ಪಕ್ ಕುಮಾರ್, ಮಸ್ತಾನ್ , ವೆಂಕಟೇಶ್ ಕಲ್ಲೂರು , ಕೆ.ಎಲ್ ಪವನ್ ಸುಹಾಸ್ ಗೌಡ , ವಿನಯ್ , ಚಿನ್ಮಯ, ಅದ್ನಾನ್ ಅಹಮದ್ ಮನವಿ ಮಾಡಿದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153