ಕಾರ್ಮಿಕ ಇಲಾಖೆಯ ಮೂಲಕ ಕಟ್ಟಡ ಕಾರ್ಮಿಕರಿಗೆ ನೀಡಬೇಕಾಗಿದ್ದ ಫುಡ್ ಕಿಟ್ ಗಳನ್ನು ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ .ಬಿ .ಅಶೋಕ್ ನಾಯ್ಕ್ ಅವರಿಗೆ ಸೇರಿದ ಕಾಲೇಜಿನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಪ್ರಕರಣವನ್ನು ಸಿಒಡಿ ತನಿಖೆಗೆ ಒಪ್ಪಿಸಬೇಕೆಂದು ಹಸೂಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಚೈತ್ರಾ ಆರ್. ಮೋಹನ್ ಒತ್ತಾಯಿಸಿದ್ದಾರೆ.ಇಲ್ಲಿನ ಸವಳಂಗ ರಸ್ತೆಯಲ್ಲಿರುವ ಶಾಸಕರಿಗೆ ಸೇರಿದ ಅಕ್ಷರ ಕಾಲೇಜಿನಲ್ಲಿ 2ಸಾವಿರಕ್ಕೂ ಅಧಿಕ ಫುಡ್ ಕಿಟ್ ಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದು ಪತ್ತೆಯಾಗಿದೆ.ಕೊರೊನ ದಂತಹ ಸಂಕಷ್ಟದ ಸಮಯದಲ್ಲಿ ಸರ್ಕಾರ ಕಟ್ಟಡ ಕಾರ್ಮಿಕರಿಗೆ ಉಚಿತವಾಗಿ ವಿತರಿಸಲು ಫುಡ್ ಕಿಟ್ ಗಳನ್ನು ಪೂರೈಸುತ್ತಿದೆ ಆದರೆ ಶಾಸಕ ಅಶೋಕ್ ನಾಯ್ಕ್ ಅಧಿಕಾರ ದುರುಪಯೋಗ ಪಡಿಸಿಕೊಂಡು ಫುಡ್ ಕಿಟ್ ಗಳನ್ನು ಅಕ್ರಮವಾಗಿ ಸಂಗ್ರಹಿಸಡಲು ಕುಮ್ಮಕ್ಕು ನೀಡಿದ್ದಾರೆ. ಜಿಲ್ಲೆಯಲ್ಲಿ 1.7ಲಕ್ಷ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿದ್ದು, ಅಗತ್ಯವಿರುವಷ್ಟು ಫುಡ್ ಕಿಟ್ ಗಳು ಪೂರೈಕೆಯಾಗುತ್ತಿಲ್ಲ. ಪೂರೈಕೆಯಾಗಿರುವ ಕಿಟ್ ಗಳ ವಿತರಣೆಯಲ್ಲೂ ತಾರತಮ್ಯ ಮಾಡಲಾಗುತ್ತದೆ.ಶಾಸಕರು ತಮ್ಮ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿತ ಕಾರ್ಮಿಕರನ್ನು ಗುರುತಿಸಿ ಮುಂಬರುವ ಜಿ ಪಂ ಹಾಗೂ ತಾ ಪಂ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಫುಡ್ ಕಿಟ್ ವಿತರಣೆ ಆಗುವಂತೆ ಮಾಡುತ್ತಿದ್ದಾರೆ. ಈ ಮೂಲಕ ಸರ್ಕಾರದ ಸೌಲಭ್ಯ ದುರ್ಬಳಕೆ ಹಾಗೂ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇವರೊಂದಿಗೆ ಪಿಡಿಒಗಳು ಸಹ ಶಾಮೀಲಾಗಿದ್ದಾರೆ.ಶಾಸಕ ಅಶೋಕ್ ನಾಯ್ಕ್ ಅವರ ಪ್ರಭಾವಿತ ದಿಂದಾಗಿ ಸಾವಿರಾರು ನಕಲಿ ಕಾರ್ಮಿಕರು ಕಾರ್ಡುಗಳನ್ನು ಪಡೆದಿದ್ದಾರೆ. ಇದರಿಂದಾಗಿ ಕಟ್ಟಡ ಕಾರ್ಮಿಕರಲ್ಲದವರನ್ನು, ಸಹ ಸರ್ಕಾರದ ಸೌಲಭ್ಯ ಪಡೆಯುತ್ತಿದ್ದಾರೆ. ಇಂತಹ ವಂಚನೆಗೆ ಶಾಸಕರೇ ಪ್ರೇರಣೆ ನೀಡುತ್ತಿದ್ದಾರೆ.ಈ ಬಗ್ಗೆ ತನಿಖೆ ನಡೆದಲ್ಲಿ ಶಾಸಕರ ಅಕ್ರಮ ಬಹಿರಂಗವಾಗಲಿದೆ.ಆದ್ದರಿಂದ ಅಶೋಕ್ ನಾಯ್ಕ್ ಅವರ ನಡೆಸಲು ಪ್ರಕರಣವನ್ನು ಸಿಓಡಿಗೆ ವಹಿಸಬೇಕೆಂದು ಚೈತ್ರಾ ಮೋಹನ್ ಪತ್ರಿಕಾ ಹೇಳಿಕೆ ಮೂಲಕ ಒತ್ತಾಯಿಸಿದ್ದಾರೆ. ಕಾಲೇಜಿನಲ್ಲಿ ಅಕ್ರಮ ಸಂಗ್ರಹ ಸೇರಿದಂತೆ ಸರ್ಕಾರ ಕೂಡಲೇ, ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಪ್ರಕರಣವನ್ನು ಸಿಓಡಿಗೆ ವಹಿಸಬೇಕೆಂದು ಚೈತ್ರಾ ಮೋಹನ್ ಪತ್ರಿಕಾ ಹೇಳಿಕೆ ಮೂಲಕ ಒತ್ತಾಯಿಸಿದ್ದಾರೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153