ವಿದ್ಯಾರ್ಥಿಗಳು ವೈಜ್ಞಾನಿಕ ದೃಷ್ಟಿಕೋನ ಹೊಂದಿ ಅದೇ ನಿಟ್ಟಿನಲ್ಲಿ ಪ್ರಶ್ನಿಸುವುದರಿಂದ ವೈಜ್ಞಾನಿಕ ಮನೋಭಾವ ಬೆಳಸಿಕೊಳ್ಳಬಹುದು ಎಂದು ಜಿ.ಪಂ ಸಿಪಿಓ ಗಾಯತ್ರಿ ಸಿ.ಎಸ್ ನುಡಿದರು.


ಭಾರತೀಯ ನೋಬಲ್ ಪ್ರಶಸ್ತಿ ವಿಜೇತರಾದ ಭೌತಶಾಸ್ತ್ರಜ್ಞ ಸರ್ ಸಿ.ವಿ. ರಾಮನ್ ಇವರ ರಾಮನ್ ಪರಿಣಾಮದ ಆವಿμÁ್ಕರವನ್ನು ಗುರುತಿಸಲು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಬೆಂಗಳೂರು, ನ್ಯಾಷನಲ್ ಕೌನ್ಸಿಲ್ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ ಕಮ್ಯುನಿಕೇಷನ್, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಭಾರತ ಸರ್ಕಾರದ ಬೆಂಬಲ ಹಾಗೂ ಜಿಲ್ಲಾ ಪಂಚಾಯತ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ಫೆ. 28 ರಂದು ನಗರದ ಕಸ್ತೂರಿ ಬಾ ಬಾಲಕಿಯರ ಪ್ರೌಢಶಾಲೆಯಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವೈಜ್ಞಾನಿಕ ಮನೋಭಾವ ಹೊಂದುವುದು ಅತ್ಯಂತ ಪ್ರಮುಖವಾಗಿದೆ. ವೈಜ್ಞಾನಿಕವಾಗಿ ವಿಧ್ಯಾರ್ಥಿಗಳು ಯೋಚಿಸಿದಾಗ ಮಾತ್ರ ದೇಶದ ಮುನ್ನಡೆ ಸಾಧ್ಯ . ದೈನಿಂದಿನ ಜೀವನದಲ್ಲಿ ನೆಡೆಯುವ ಸಣ್ಣಪುಟ್ಟ ಕಾರ್ಯದಲ್ಲಿ ವಿಜ್ಞಾನವಿದೆ. ಅದನ್ನು ಗಮನಿಸುವುದು, ವಿಶ್ಲೇಷಿಸುವುದು ಮುಖ್ಯ ಎಂದ ಅವರು ಇಂತಹ ಕಾರ್ಯಕ್ರಮಗಳ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದರು.


ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಉದ್ಯಮಿ ನಿವೇದನ್ ನಿಂಬೆ ಮಾತನಾಡಿ, ದೈನಂದಿನ ಬದುಕಿನಲ್ಲಿ ನಮಗರಿವಿಲ್ಲದಂತೆ ವಿಜ್ಞಾನ ಹೇಗೆ ಹಾಸುಹೊಕ್ಕಾಗಿದೆ ಎಂಬುದನ್ನ ಸಾಂಪ್ರದಾಯಿಕ ವಿಧಾನಗಳನ್ನು ಗಮನಿಸುತ್ತಾ ವಿಜ್ಞಾನವನ್ನು ಅರಿಯುವ ಬಗೆಯನ್ನು ವಿದ್ಯಾರ್ಥಿಗಳಿಗೆ ಎಳೆ ಎಳೆಯಾಗಿ ತಿಳಿಸಿದರು.


ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ಮಾತನಾಡಿ, ಸ್ಥಳೀಯ ತಂತ್ರಜ್ಞಾನದಿಂದ ಉತ್ಪಾದಿಸಿದ ಉತ್ಪನ್ನಗಳನ್ನು ಪ್ರಚಾರ ಮಾಡಿ, ಬಳಸುವುದರಿಂದ ದೇಶದ ಏಳಿಗೆ ಸಾಧ್ಯ ಎಂದ ಅವರು ಸ್ಥಳೀಯ ತಂತ್ರಜ್ಞಾನದ ಅವಶ್ಯಕತೆ ಹಾಗೂ ಸಿ.ವಿ ರಾಮನ್ ರವರ ಬದುಕು, ಅವರ ಆವಿμÁ್ಕರಗಳು, ರಾಮನ್ ಪರಿಣಾಮ, ಬಣ್ಣಗಳ ಚದುರುವಿಕೆಯನ್ನು ಹೇಗೆ ದಿನನಿತ್ಯದ ಬದುಕಿನಲ್ಲಿ ಕಾಣಬಹುದಾಗಿದೆ ಎಂಬ ಬಗ್ಗೆ ಹಾಗೂ ಆಧುನಿಕ ತಂತ್ರಜ್ಞಾನಗಳು ಹೇಗೆ ಮನುಷ್ಯನನ್ನು ಏಕಾಂಗಿಯಾಗಿ ಮಾಡಿವೆ ಎಂದು ವಿಜ್ಞಾನದ ಮತ್ತೊಂದು ಮಗ್ಗುಲನ್ನು ವಿವರಿಸಿದರು ಹಾಗೂ ವಿಧ್ಯಾರ್ಥಿನಿಯರೊಂದಿಗೆ ಸಂವಾದ ನೆಡೆಸಿದರು.


ಕಸ್ತೂರಿ ಬಾ ಬಾಲಕಿಯರ ಫ್ರೌಢಶಾಲೆ ಮುಖ್ಯೋಪಾದ್ಯಾಯರಾದ ಸಿ.ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಎನ್‍ಆರ್‍ಡಿಎಂಎಸ್ ಅಧಿಕಾರಿ ಶಂಕರ್, ಜಿ.ಪಂ ನ ಅಂದಾಜು ಮೌಲ್ಯಮಾಪನಾಧಿಕಾರಿ, ಶಾಲೆಯ ಎಲ್ಲಾ ಶಿಕ್ಷಕರು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು, ಸಂಪನ್ಮೂಲ ವ್ಯಕ್ತಿಗಳು ವಿಜ್ಞಾನದ ಶಾಲಾ ಪಠ್ಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಇದೇ ವೇಳೆ ಸರ್ಕಾರದ ಅಧಿಸೂಚನೆಯ ಮೇರೆಗೆ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಾಯಿತು.


ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಸೇರಿದಂತೆ 700 ಕ್ಕೂ ಹೆಚ್ಚು ಮಕ್ಕಳು ಸಕ್ರಿಯವಾಗಿ ಭಾಗವಹಿಸಿದ್ದರು. ಹಾಗೂ ವಿದ್ಯಾರ್ಥಿಗಳಿಗೆ ಸ್ಥಳದಲ್ಲಿಯೇ ಚಿತ್ರ ಬರೆಯುವ ಸ್ಪರ್ಧೆ ಆಯೋಜಿಸಲಾಗಿದ್ದು, ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ನೀಡಲಾಯಿತು.

ವರದಿ ಪ್ರಜಾ ಶಕ್ತಿ