ಶಿವಮೊಗ್ಗ ಮಲವಗೊಪ್ಪ ಬಸವೇಶ್ವರ ದೇವಸ್ಥಾನದಿಂದ ಜಿಲ್ಲಾಧಿಕಾರಿಯ ಕಚೇರಿಯವರಿಗೆ ಪಾದಯಾತ್ರೆ ಮೂಲಕ ಧರಣಿ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಹೌದು ಸುಮಾರು 50 ಮತ್ತು 60 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಇಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿರುವ ಶಿವಮೊಗ್ಗ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಸುಮಾರು 10 ಸಾವಿರ ಕುಟುಂಬಗಳಿವೆ.

ಶಿವಮೊಗ್ಗ ತಾಲೂಕಿನ 13 ರಿಂದ 14 ಗ್ರಾಮಗಳಾದ ಮಲವಗೊಪ್ಪ ತೊಪ್ಪಿನ ಘಟ್ಟ ಹರಿಗೆ ನಿಧಿಗೆ ಸದಾಶಿವಪುರ (ಅಕ್ಕಿ ಪಿಕಿ ಕ್ಯಾಂಪ್) ಚಿಕ್ಕಮರಡಿ ಹರಪನಹಳ್ಳಿ ಕ್ಯಾಂಪ್  ಹಾರೋಬೆನವಳ್ಳಿ ತಾಂಡ ತರಗನಹಳ್ಳಿ. ಪಿಳ್ಳಂಗೇರಿ ಬಿ ಬೀರನಹಳ್ಳಿ ಹಾರೋಬೆನವಳ್ಳಿ ಹೊಸ ಮನೆ ತಾಂಡ ಯರಗನಾಳ್ ಹಾತಿಕಟ್ಟ ಇನ್ನೂ ಇತರೆ ಗ್ರಾಮಗಳಲ್ಲಿ ಸಾವಿರಾರು ಕುಟುಂಬಗಳು ಬದುಕು ಕಟ್ಟಿಕೊಂಡಿವೆ.

ಸರ್ಕಾರಿ ಪಡ ಮತ್ತು ಸರ್ಕಾರಿ ಜಮೀನಿನಲ್ಲಿ ಸುಮಾರು 40 50 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಮನೆಗಳನ್ನು ಕಟ್ಟಿಕೊಂಡಿದ್ದಾರೆ.

ಜಮೀನುಗಳಿಗೆ ಫಾರಂ ನಂಬರ್ 50 53 ಮತ್ತು 57ರಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದಾರೆ ಮನೆಗಳಿಗೆ 94 ಸಿಸಿ 94 ಡಿ ಅರ್ಜಿಗಳನ್ನು ಸಲ್ಲಿಸಿದ್ದಾರೆ.

ಕೆಲವು ಬಗರ್ ಹುಕುಂ ಸಾಗುವಳಿದಾರರಿಗೆ ಮೇಲ್ಕಂಡ ಅರ್ಜಿ ಸಲ್ಲಿಸಿದಂತೆ ಹಾಗೂ ಮಾನ್ಯ ನ್ಯಾಯಾಲಯದ ಆದೇಶದಂತೆ ಹಕ್ಕುಪತ್ರಗಳನ್ನು ಸಹ ನೀಡಿತ್ತು ವಾಸ ಮಾಡುತ್ತಿರುವವರಿಗೆ ಮೂಲಸೌಕರ್ಯದೊಂದಿಗೆ ಎಲ್ಲಾ ಹಕ್ಕನ್ನು ಸಹ ನೀಡಲಾಗಿದೆ ಎಂದರು.

ಸಾಗುವಳಿ ಮಾಡಿಕೊಂಡು ಮನೆಗಳನ್ನು ಕಟ್ಟಿಕೊಂಡಿರುವ ಕೆಲವು ಕುಟುಂಬಗಳಿಗೆ ಹಕ್ಕುಪತ್ರವನ್ನು ನೀಡಿಲ್ಲ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆ ಹರಿಸದಿದ್ದರೆ ಸಾವಿರಾರು ಕುಟುಂಬದವರೊಂದಿಗೆ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಶಿವಮೊಗ್ಗ ತಾಲ್ಲೂಕು ಸಕ್ಕರೆ ಕಾರ್ಖಾನೆ ರೈತರು ಮತ್ತು ಕಾರ್ಮಿಕರ ನಿವಾಸಿಗಳ ಭೂ ಹಕ್ಕು ಹೋರಾಟ ಸಮಿತಿ ರವರು ಎಚ್ಚರಿಕೆ ನೀಡಿದ್ದಾರೆ.

ಶಿವಮೊಗ್ಗ ಗ್ರಾಮಾಂತರ ಶಾಸಕರು ಶಾರದಾ ಪೂರ್ಯ ನಾಯ್ಕ ಕೆ ಟಿ ಗಂಗಾಧರ್ ರಾಜ್ಯ ರೈತ ಸಂಘ ಹಸಿರು ಸೇನೆ ಮುಖ್ಯಸ್ಥರು ಮತ್ತು ಕಾಂಗ್ರೆಸ್ ಮುಖಂಡ ವಿಜಯ ಕುಮಾರ್ ಮುಖಂಡರು ಹಾಗೂ ಹಲವರು ಉಪಸ್ಥಿತರಿದ್ದರು.

ವರದಿ ಸಂತೋಷ್ ರಾಮ್