ಕರ್ನಾಟಕ ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾ ಸಂಘ ಶಿವಮೊಗ್ಗ ಜಿಲ್ಲೆ ದೇವಸ್ಥಾನಗಳು ಹಿಂದೂ ಧರ್ಮದ ಅತ್ಯಂತ ಪವಿತ್ರ ಕ್ಷೇತ್ರಗಳು ಆದರೆ ಇತ್ತೀಚೆಗೆ ದೇವಸ್ಥಾನಗಳ ಮೇಲೆ ವಿವಿಧ ರೀತಿಯ ಆಕ್ರಮಗಳು ನಡೆಯುತ್ತಿವೆ ಎಂದು ವಿಜಯಕುಮಾರ್ ಹೇಳಿದರು.
ಅನಧಿಕೃತವೆಂದು ದೇವಸ್ಥಾನಗಳ ದ್ವಂಸಗೊಳಿಸುವುದು ದೇವಸ್ಥಾನಗಳ ಜಮೀನುಗಳ ಲೂಟಿ ಮುಂತಾದ ಸಮಸ್ಯೆಗಳಿವೆ. ದೇವಸ್ಥಾನಗಳಲ್ಲಿ ಧರ್ಮಪ್ರಸಾರ ಮಾಡಲು ದೇವಸ್ಥಾನಗಳಲ್ಲಿ ಭಕ್ತಾದಿಗಳಿಗೆ ಮೂಲ ಸೌಕರ್ಯ ಕಲ್ಪಿಸಲು ದೇವಸ್ಥಾನಗಳ ಸಂಘಟನೆ ಮಾಡಲು ದೇವಸ್ಥಾನದಲ್ಲಿ ವಸರ ಸಂಹಿತೆಯನ್ನು ಅಳವಡಿಸಲು ಜನಜಾಗೃತಿ ಸಮಿತಿ ಮತ್ತು ಕರ್ನಾಟಕ ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾ ಸಂಘದ ಆಶ್ರಯದಲ್ಲಿ ಮಾರ್ಚ್ ಮೂರರಂದು ಶಿವಮೊಗ್ಗದ ಬೆಕ್ಕಿನ ಕಲ್ಮಠ ಬಿಎಚ್ ರಸ್ತೆಯಲ್ಲಿ ಜಿಲ್ಲಾ ಮಟ್ಟದ ದೇವಸ್ಥಾನ ಪರಿಷತ್ತು ಆಯೋಜಿಸಲಾಗಿದೆ.
ಪರಿಷತ್ ನಲ್ಲಿ ಶಿವಮೊಗ್ಗ ದಾವಣಗೆರೆ ಚಿಕ್ಕಮಗಳೂರು ಜಿಲ್ಲೆಯಿಂದ 200 ಕಿಂತ ಹೆಚ್ಚಿನ ಆಮಂತ್ರಿತ ದೇವಸ್ಥಾನಗಳ ವಿದ್ವಾಂಸರು ಅರ್ಚಕರು ಪುರೋಹಿತರು ಪ್ರತಿನಿಧಿಗಳು ಭಾಗವಹಿಸ್ತಿದ್ದಾರೆ. ಈ ಪರಿಷತ್ತಿನಲ್ಲಿ ಅನೇಕ ವಿಷಯಗಳ ಮೇಲೆ ಚರ್ಚೆ ನಡೆಯಲಿದ್ದು ಈ ಅಧಿವೇಶನವು ಕೇವಲ ಆಮಂತ್ರಿ ತೆರೆಗೆ ಮಾತ್ರ ಇದು ಅಧಿವೇಶನದಲ್ಲಿ ಪಾಲ್ಗೊಳ್ಳಲು 7204082673 ಈ ಮೊಬೈಲ್ ನಂಬರಿಗೆ ಸಂಪರ್ಕಿಸಬೇಕು ಎಂದು ದೇವಸ್ಥಾನ ಮಹಾಸಂಗವು ಕರೆ ನೀಡಿದ್ದಾರೆ.