ಬನ್ನಿ ಸರ್ ಬನ್ನಿ ಅಮ್ಮ ಜ್ಯೂಸ್ ತಗೋಳಿ, ಆಂಟಿ ತರಕಾರಿ ಬೇಕಾ? ಅಂಕಲ್ ಸ್ಪೆಷಲ್ ಗಿರ್ಮಿಟ್ ಬೇಕಾ? ಯಾವುದು ಬೇಕು ಬಂದು ಆರಿಸಿಕೊಳ್ಳಿ ಬನ್ನಿ ಎಂದು ಕೂಗುವ ಧ್ವನಿ ಒಂದೆಡೆಯಾದರೆ ಬಾಳೆಹಣ್ಣು ಹಪ್ಪಳ ಕಲ್ಲಂಗಡಿ ತಿನ್ನಿ ಎಂದು ವಾಪಸ್ತರಂತೆ ಮಾರಾಟಕ್ಕೆ ನಿಂತ ಚಿಣ್ಣರ ಸಾಲು.
ಶಿವಮೊಗ್ಗದ ಕೋಟೆ ರಸ್ತೆಯಲ್ಲಿರುವ ವಾಸವಿ ಪಬ್ಲಿಕ್ ಶಾಲೆ ವತಿಯಿಂದ ಶಾಲೆಯ ಮಕ್ಕಳಿಗೆ ವಿಭಿನ್ನ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಮಕ್ಕಳಲ್ಲಿ ವಿಜ್ಞಾನ ಜ್ಞಾನದ ಜೊತೆಗೆ ವ್ಯವಹಾರಿಕ ಜ್ಞಾನ ಹಾಗೂ ದುಡಿಮೆಯ ಮಹತ್ವ ತಿಳಿಸುವ ಮಕ್ಕಳಲ್ಲಿ ಕುಶಲತೆ ಸಂವಹನ ಕಲೆ ಸಾಮಾಜಿಕ ಬದುಕಿನೊಂದಿಗೆ ಒಡನಾಟದ ಕೌಶಲ್ಯವನ್ನು ಕಳಿಸುವುದು ಅವರಲ್ಲಿ ಸೃಜನಶೀಲತೆ ಅನಾವರನ ಗೊಲಿಸುವ ಉದ್ದೇಶದಿಂದ ವಾಸವಿ ಚಿಣ್ಣರ ಸಂತೆ ಕಾರ್ಯಕ್ರಮವನ್ನು 3ರಂದು ಭಾನುವಾರ ಸಂಜೆ 4 ರಿಂದ 6 ಗಂಟೆವರೆಗೆ ಮಾಡಲಾಗಿದೆ.
ಜನರು ಕೂಡ ಇಲ್ಲೇ ಬಂದು ತರಕಾರಿ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ.
ಒಂದು ದಿನದ ಮಟ್ಟಿಗೆ ವಾಸವಿ ಶಾಲೆ ಆವರಣ ಅಕ್ಷರ ವಾತಾವರಣವಾಗಿ ಪರಿವರ್ತನೆ ಆಗುತ್ತದೆ. ಶಾಲೆಯ ಮಕ್ಕಳೆಲ್ಲ ತರಕಾರಿ ಮಾರುವ ರೈತರಾಗಿರುತ್ತಾರೆ. ಪೋಷಕರು ಅಕ್ಕಪಕ್ಕದ ನಿವಾಸಿಗಳಲ್ಲ ಗ್ರಾಹಕರಾಗಿದ್ದಾರೆ. ಈ ಸಂತೆಯಲ್ಲಿ ಸಾರ್ವಜನಿಕರು ಪೋಷಕರು ಮತ್ತು ಆಡಳಿತ ಮಂಡಳಿ ಸದಸ್ಯರು ಪಾಲ್ಗೊಳ್ಳಲು ಅವಕಾಶವಿರುತ್ತದೆ. ಎಲ್ಲರೂ ಭಾಗವಹಿಸಲು ಆಡಳಿತ ಮಂಡಳಿ ವಿನಂತಿಸಿದ್ದಾರೆ .