ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ನೂತನ ಅಧ್ಯಕ್ಷರಾಗಿ ಡಾ. ಆರ್.ಎಂ.ಮಂಜುನಾಥ್ ಗೌಡ ಅಧಿಕಾರ ಸ್ವೀಕರಿಸಿದರು.ಪಶ್ಚಿಮ ಘಟ್ಟದ ಸಾಲುಗಳಲ್ಲಿ 13 ಜಿಲ್ಲೆಗಳು ಬರುವಂತ ನಮ್ಮ ಮಲೆನಾಡಿನ ಹೆಬ್ಬಾಗಿಲು ಆಗಿರುವ ಈ ನಮ್ಮ ಶಿವಮೊಗ್ಗ ಎಂದು ಬಣ್ಣಿಸಿದರು.


ಕುವೆಂಪು ವಿಶ್ವ ವಿದ್ಯಾನಿಲಯ ದಿಂದ ಡಾಕ್ಟರೇಟ್ ಪಡೆದಂತಹ ಅತೀ ಸರಳ ವ್ಯೇಕ್ತಿ ಎಂದೇ ಹೆಸರು ಪಡೆದ ವ್ಯೆಕ್ತಿ ಡಾ ಆರ್ ಎಂ ಮಂಜುನಾಥ ಗೌಡರು.

ಶಿವಮೊಗ್ಗದ ಸೂಡಾ ಅಧ್ಯಕ್ಷರು ಸೇರಿದಂತೆ ಹಲವು ಗಣ್ಯತೆ ಗಣ್ಯರು ಸಮಾರಂಭಕ್ಕೆ ಆಗಮಿಸಿ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ನೂತನ ಅಧ್ಯಕ್ಷರಿಗೆ  ಸನ್ಮಾನಿಸಿದರು.

ಆರ್ ಎಂ ಮಂಜುನಾಥ್ ರವರನ್ನು ಷಡ್ಯಂತರ ರೂಪಿಸುವವರಲ್ಲಿ ನಾನು ಒಬ್ಬನು ಎಂದು ತಪ್ಪೊಪ್ಪಿಕೊಳ್ಳುವ ಮೂಲಕ  ಮಾಜಿ ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್  ರವರು  ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.

ದೇವರ ಹೆಸರಿನಲ್ಲಿ ಪ್ರಮಾಣಿಕರಿಸುತ್ತ ನನಗೆ ಕೊಟ್ಟಂತ ಅಧಿಕಾರವನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುವ ಮೂಲಕ ಪಶ್ಚಿಮ ಘಟ್ಟದ 13 ಜಿಲ್ಲೆಯುಳ್ಳ ಮಲೆನಾಡನ್ನು ಅಭಿವೃದ್ಧಿಯತ್ತ ಸಾಗುತ್ತೇನೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ. ನೂತನ ಸೂಡಾ ಅಧ್ಯಕ್ಷರು ಆದ ಸುಂದರೇಶ್. ಸಾಗರದ ಶಾಸಕರಾದ ವೇಣುಗೋಪಾಲ ಕೃಷ್ಣ   ಜಿಲ್ಲಾ ಕಾಂಗ್ರೆಸ್ ಮುಖಂಡ ಎಂ ಶ್ರೀಕಾಂತ್ ಮತ್ತು ಪಕ್ಷದ ಮುಖಂಡರು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.


ವರದಿ ಸಂತೋಷ್ ರಾಮ್