ಎಪಿಎಂಸಿ ಕಾರ್ಯದರ್ಶಿ ಕೋಡಿಗೌಡ ಮತ್ತು ಕೇಸ್ ವರ್ಕರ್ ಯೋಗೇಶ್ ಲೋಕಯುಕ್ತ ಬಲೆಗೆ ಬಿದ್ದಿದ್ದಾರೆ.

ಎಪಿಎಂಸಿ ಆವರಣದಲ್ಲಿ ಮಳಿಗೆ ನಂಬರ್ 16 ನ್ನ ಪಡೆಯಲು ರವೀಂದ್ರ ವೀರಭದ್ರಪ್ಪ ನೇರಳೆ ಟೆಂಡರ್ ನಲ್ಲಿ ಇವರು ಆಯ್ಕೆಯಾಗಿದ್ದರು.ಮಳಿಗೆ ಹಂಚಲು ಒಂದು ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿದ್ದರು.ಎರಡು ಲಕ್ಷರೂ ಬೇಡಿಕೆಯ ಮಾತುಕತೆಯಿಂದ ಒಂದು ಲಕ್ಷಕ್ಕೆ ಮಾತುಕತೆ ನಿಂತಿತ್ತು ಎಂದು ಆರೋಪಿಸಿದ್ದಾರೆ.

ಕಾರ್ಯದರ್ಶಿ ಕೋಡಿಗೌಡ ನಿಮಗೆ ಮಳಿಗೆ ಆಗಲಿದೆ ಆದರೆ ಮೇಲಿನ ಅಧಿಕಾರಿಗಳನ್ನ‌ ನೋಡಿಕೊಳ್ಳಬೇಕು. ಆದ್ದರಿಂದ ಕೇಸ್ ವರ್ಕರ್ ಯೋಗೀಶ್ ರನ್ನ ಭೇಟಿ ಮಾಡಿ ಎಂದು ಹೇಳಿದ್ದಾರೆ. ನೇರಳೆಯವರು ಯೋಗೀಶ್ ರನ್ನ ಭೇಟಿಯಾದಾಗ ಎರಡು ಲಕ್ಷದ ಲಂಚದ ಬೇಡಿಕೆಯನ್ನಿಟ್ಟಿರುತ್ತಾರೆ. ನಂತರ 1 ಲಕ್ಷಕ್ಕೆ ತೀರ್ಮಾನವಾಗಿರುತ್ತದೆ ಎಂದಿದ್ದಾರೆ.

50 ಸಾವಿರ ರೂ. ಹಣ ನೀಡುವಾಗ ಕಾರ್ಯರ್ಶಿ ಕೋಡಿಗೌಡ ಮತ್ತು ಯೋಗೀಶ್ ಲೋಕಾಯುಕ್ತ ಬಲೆಗೆ ಲೋಕಾಯುಕ್ತ ದಾಳಿಯಲ್ಲಿ ಶಿವಮೊಗ್ಗ ಇವರು ಕೈಗೊಂಡಿದ್ದು ಇರುತ್ತದೆ. ಕರ್ನಾಟಕ ಲೋಕಾಯುಕ್ತ, ಚಿತ್ರದುರ್ಗ ಕಛೇರಿಯ ಪೊಲೀಸ್ ಅಧೀಕ್ಷಕರಾದ ಶ್ರೀ ಎನ್. ವಾಸುದೇವರಾಮ ಇವರ ಮಾರ್ಗದರ್ಶನದಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ. ಪೊಲೀಸ್‌ ಉಪಾಧೀಕ್ಷಕರಾದ ಶ್ರೀ ಉಮೇಶ ಈಶ್ವರ ನಾಯ್ಕ ಇವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.

ವರದಿ ಪ್ರಜಾ ಶಕ್ತಿ