ಐತಿಹಾಸಿಕ ಕೋಟೆ ಶ್ರೀ ಮಾರಿಕಾಂಬ ಜಾತ್ರೆಗೆ ಶಿವಮೊಗ್ಗ ಸಿಟಿ ಕೋ ಆಪರೇಟಿವ್ ಬ್ಯಾಂಕ್ ನಿಂದ ದೇಣಿಗೆ
ನಗರದ ಗ್ರಾಮ ದೇವತೆ ಐತಿಹಾಸಿಕ ಸುಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬ ದೇವಿಯ ಅದ್ದೂರಿ ಜಾತ್ರಾ ಮಹೋತ್ಸವಕ್ಕೆ ಶಿವಮೊಗ್ಗ ಸಿಟಿ ಕೋ ಆಪರೇಟಿವ್ ಬ್ಯಾಂಕ್ ವತಿಯಿಂದ ದೇಣಿಗೆಯನ್ನು ಜಾತ್ರಾ ಮಹೋತ್ಸವದ ಸಮಿತಿಯ ಅಧ್ಯಕ್ಷರಾದ ಎಸ್ ಕೆ ಮರಿಯಪ್ಪ ಹಾಗೂ ಕಾರ್ಯದರ್ಶಿ ಎನ್.ಮಂಜುನಾಥ್ ಮತ್ತು ಪದಾಧಿಕಾರಿಗಳಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಕೆ ರಂಗನಾಥ್, ನಿರ್ದೇಶಕರುಗಳಾದ ಸಿ ಹೊನ್ನಪ್ಪ, ರಾಕೇಶ್, ಸೀತಾರಾಮ್ ನಾಯಕ್, ರಘುವೀರ್ ಸಿಂಗ್ , ಬ್ಯಾಂಕಿನ ಸಿಇಓ ಮನೋಜ್ ಕುಮಾರ್ ,ಪ್ರಸಾದ್ ,ದೇವಸ್ಥಾನ ಸಮಿತಿಯ ಪ್ರಮುಖರಾದ ಎ.ಎಚ್. ಸುನಿಲ್, ಪ್ರಭಾಕರ್ ಗೌಡ, ಮಾರಪ್ಪ ಹಾಗೂ ಇತರರು ಉಪಸ್ಥಿತರಿದ್ದರು.