ದೇಶದಲ್ಲಿ 400+ ಅಭ್ಯರ್ಥಿಗಳನ್ನು ಗೆಲ್ಲಿಸಿ-ಪ್ರಧಾನಿ ನರೇಂದ್ರ ಮೋದಿ…

ಕನ್ನಡದಲ್ಲಿ ಭಾಷಣ ಶುರು ಮಾಡಿದ ಜೊತೆಗೆ ಸಿಗಂದೂರು ಚೌಡೇಶ್ವರಿ ನಮಸ್ಕರಿಸುತ್ತಾ ದೇಶದಲ್ಲಿ ಈ ಬಾರಿ 400+ ಭಾರತೀಯ ಜನತಾ ಪಕ್ಷದ ಬಿಜೆಪಿ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಇಂದು ಶಿವಮೊಗ್ಗದ ಅಲ್ಲಮಪ್ರಭು ಕ್ರೀಡಾಂಗಣ ಫ್ರೀಡಂ ಪಾರ್ಕ್ ನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ತಿಳಿಸಿದರು.

ರಾಜ್ಯದ 28 ಕ್ಷೇತ್ರದ ಲೋಕಸಭಾ ಅಭ್ಯರ್ಥಿಗಳನ್ನು ಅತ್ಯಧಿಕ ಮತಗಳಿಂದ ಗೆಲ್ಲಸೆಬೇಕು ಎಂದರು. ರಾಜ್ಯದಲ್ಲಿ 400+ ಸೀಟುಗಳನ್ನು ಬರಲು ನಿಮ್ಮ ಮತ ಅಮೂಲ್ಯವಾದದು ಎಂದು ತಿಳಿಸಿದರು.

ಶಿವಮೊಗ್ಗ ಲೋಕಸಭಾ ಅಭ್ಯರ್ಥಿ ಬಿ ವೈ ರಾಘವೇಂದ್ರ ರವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿ ಜೊತೆಗೆ ಮಂಗಳೂರು ಅಭ್ಯರ್ಥಿ ಕ್ಯಾಪ್ಟನ್ ಬಿಗ್ಗೆಸ್ಟ್ ಚೌಟ ದಾವಣಗೆರೆ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ಉಡುಪಿ ಚಿಕ್ಕಮಗಳೂರು ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಚಿತ್ರದುರ್ಗ ಅಭ್ಯರ್ಥಿ ನಾರಾಯಣಸ್ವಾಮಿ ರವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿ ಎಂದು ಹೇಳಿದರು.

ಕಾಂಗ್ರೆಸ್ನವರ ಲೂಟಿ ಎಷ್ಟು ನಡೆದಿದೆ ಎಂದರೆ ಸರ್ಕಾರ ನಡೆಸಲು ಅವರ ಬಳಿ ಹಣವಿಲ್ಲ ರಾಜ್ಯದಲ್ಲಿ ಅಧಿಕಾರದಲ್ಲಿರುವ ಸಿಎಂ, ಭವಿಷ್ಯದ ಸಿಎಂ, ಸೂಪರ್ ಸಿಎಂ ಶ್ಯಾಡೋ ಸಿಎಂ ಇದ್ದಾರೆ . ಇವರ ಮಧ್ಯೆ ಕಲೆಕ್ಷನ್ ಏಜೆಂಟ್ ಇದ್ದಾರೆ .ಮಹಾರಾಷ್ಟ್ರದ ಮುಂಬೈನಲ್ಲಿ ಇಂಡಿಯಾ ಒಕ್ಕೂಟ ಒಂದು ಬಹಿರಂಗ ಹೇಳಿಕೆ ನೀಡಿದೆ ಹಿಂದೂ ಶಕ್ತಿಯನ್ನು ಸಮಾಪ್ತಿ ಮಾಡುವುದಾಗಿ ಹೇಳಿದ್ದಾರೆ .

ಹಾರ್ದಿಕ ಶಕ್ತಿ ಪರ್ವ ಶಕ್ತಿಯ ವಿರುದ್ಧ ಎಂದರೆ ನಾರಿ ಶಕ್ತಿಯ ವಿರುದ್ಧವಾಗಿದೆ ಇಂಡಿಯಾ ಒಕ್ಕೂಟದ ಕಾಂಗ್ರೆಸ್ ಇದರ ವಿರುದ್ಧವಾಗಿದೆ ಜೂನ್ ನಾಲ್ಕರಂದು ಶಕ್ತಿಯ ಮುಟ್ಟಿದ್ದಕ್ಕೆ ಅದರ ಪರಿಣಾಮ ಏನಾಗುತ್ತದೆಂದು ಕಾಂಗ್ರೆಸ್ಗೆ ತಿಳಿಯಲಿದೆ ಬ್ರಿಟಿಷರು ಭಾರತವನ್ನು ತೊರೆದಿದ್ದರೂ ಅವರ ಮಾನಸಿಕತೆ ಕಾಂಗ್ರೆಸ್ ನಲ್ಲಿ ಇದೆ ಎಂದರು.

ದೇಶವನ್ನು ವಿಭಜಿಸುವ ಕಾಂಗ್ರೆಸ್ ಪಕ್ಷಕ್ಕೆ ಹುಡುಕಿ ಹುಡುಕಿ ಸ್ವಚ್ಛಗೊಳಿಸಿಏಪ್ರಿಲ್ 26 ಮತ್ತು ಮೇ 7ರಂದು ಕಾಂಗ್ರೆಸ್ ಪಕ್ಷದ ವಿಭಜನಕಾರಿ ಮನಸತ್ವವನ್ನು ಕರ್ನಾಟಕದಲ್ಲಿ ಆರೋಗ್ಯದ ಸಮಸ್ಯೆ ಬಂದರೆ ಬಡವ ಮತ್ತಷ್ಟು ಬಡವನಾಗುತ್ತಾನೆ ಅದಕ್ಕಾಗಿ ಕೇಂದ್ರ ಸರ್ಕಾರ 5 ಲಕ್ಷ ಉಚಿತ ಆರೋಗ್ಯ ಸೌಲಭ್ಯ ನೀಡುವ ಆಯುಷ್ಮಾನ್ ಕಾರ್ಡ್ ಜಾರಿಗೆ ತಂದಿದ್ದೇವೆ ಎಂದರು.

ತುಮಕೂರು ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ
6,000 ಕೋಟಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಆಗುತ್ತಿದೆಶಿವಮೊಗ್ಗ ತಾಳಗುಪ್ಪ ಜಂಬಗಾರು ರೈಲ್ವೆ ನಿಲ್ದಾಣಗಳನ್ನು ಉನ್ನತಿಕರಣ ಮಾಡಲಾಗುತ್ತಿದೆಮುಂದಿನ ಐದು ವರ್ಷಗಳಲ್ಲಿ ಯುವಕರಿಗೆ ಹೊಸ ಮಾರ್ಗ ಒದಗಿಸಲಾಗುವುದು ಎಂದರು.

ವರದಿ ಪ್ರಜಾ ಶಕ್ತಿ