“ಬಣ್ಣಗಳ ಹಬ್ಬ – ಹೋಳಿ ಹಬ್ಬ”

ಶಿವಮೊಗ್ಗ ನಗರದ ಗೋಪಿ ವೃತ್ತದಲ್ಲಿ ಕೇಸರಿ ಹಿಂದೂ ಅಲಂಕಾರ ಸಮಿತಿಯು ಅದ್ದೂರಿಯಾಗಿ ಏರ್ಪಡಿಸಿದ್ದ “ಹೋಳಿ ಹಬ್ಬ” ಆಚರಣೆಯಲ್ಲಿ ಬಿ ವೈ ರಾಘವೇಂದ್ರ ರವರು ಪಾಲ್ಗೊಂಡು ನೆರೆದಿದ್ದ ಸಾರ್ವಜನಿಕರೊಂದಿಗೆ ಹಾಗೂ ಕಾರ್ಯಕರ್ತರೊಂದಿಗೆ ಅಪ್ಪು ಹಾಡಿಗೆ ಕುಣಿದು  ಕೆಲ ಸಮಯ ಬೆರೆತು ಬಣ್ಣದ ಓಕುಳಿಯಲ್ಲಿ ಮಿಂದೇಳಲಾಯಿತು


ಬಣ್ಣವನ್ನು ನಮ್ಮ ಮನಸ್ಸಿಗೆ ಹೋಲಿಸಲಾಗುತ್ತದೆ. ಬಣ್ಣಗಳಲ್ಲಿ ಹೇಗೆ ವೈವಿಧ್ಯತೆ ಇದೆಯೋ ಹಾಗೆ ಮನಸ್ಸಿನ ಪ್ರತಿಯೊಂದು ಭಾವನೆಗಳಿಗೂ ಬಣ್ಣದೊಂದಿಗೆ ಸಾಮರಸ್ಯವಿದೆ


“ಕೆಂಪು” ಎಂದರೆ ಕೋಪ ಮತ್ತು ಪ್ರೀತಿ ಬಿಂಬಿಸುತ್ತದೆ. “ಕೇಸರಿ” ಎಂದರೆ ವಿಶ್ವಾಸ ಮತ್ತು ನಂಬಿಕೆ ಪ್ರಜ್ವಲಿಸುತ್ತದೆ. “ಹಸಿರು” ಸಮೃದ್ಧಿಯನ್ನು ಸೂಚಿಸುತ್ತದೆ. “ನೀಲಿ” ಶಾಂತಿ ಮತ್ತು ಸಹನೆಯ ಪ್ರತಿಬಿಂಬ. “ಬಿಳಿ” ತಾಳ್ಮೆಯ ಮತ್ತು ಪರಿಶುದ್ಧತೆಯ ಸಂಕೇತ. “ಹಳದಿ” ಉತ್ಸಾಹ ಮತ್ತು ಸ್ನೇಹಭಾವದ ಪ್ರತೀಕ


ಹೀಗೆ ಒಂದೊಂದು ಬಣ್ಣಗಳಿಗೆ ಒಂದೊಂದು ಭಾವನೆಗಳಿದ್ದು, ಮಕ್ಕಳಿಂದ ಹಿಡಿದು ಎಲ್ಲಾ ವಯೋಮಾನದವರ ಮನಸ್ಸನ್ನು ಅರಳಿಸಬಲ್ಲ ಶಕ್ತಿ ಬಣ್ಣಗಳಿಗಿದೆ


ಎಲ್ಲರೂ ಈ ಬಣ್ಣಗಳ ಹಬ್ಬದಲ್ಲಿ ಪರಸ್ಪರ ಬೇರೆಯೋಣ ಕಾಮನಬಿಲ್ಲುವಿನಂತ ಹೊಳಪು ನಮ್ಮ ಜೀವನದಲ್ಲಿ ಪಡೆಯೋಣ ಎಂದು ಹೇಳುತ್ತಾ ಮತ್ತೊಮ್ಮೆ ತಮಗೆಲ್ಲರಿಗೂ ಶುಭ ಹಾರೈಸುತ್ತೆನೇ ಎಂದು ಬಿ ವೈ ಆರ್ ತಿಳಿಸಿದರು

ವರದಿ ಸಂತೋಷ್ ರಾಮ್