ಸ್ನೇಹ ಮಿಲನ-ನಮ್ಮೆಲ್ಲರ ಸಮ್ಮಿಲನ…
ಶಿವಮೊಗ್ಗದಲ್ಲಿ ವಾಸವಿರುವ ವಿವಿಧ ಸಮುದಾಯಗಳ ಮುಖಂಡರು ಹಾಗೂ ಸಮುದಾಯದ ಪ್ರಮುಖ ನಾಯಕರೊಂದಿಗೆ ನಗರದ ಗೋಪಾಳಗೌಡ ಬಡಾವಣೆಯಲ್ಲಿರುವ ಶಿವಮೊಗ್ಗ ಬಂಟರ ಭವನದಲ್ಲಿ ಭಾರತೀಯ ಜನತಾ ಪಕ್ಷ ವಿಶೇಷವಾಗಿ ಹಮ್ಮಿಕೊಂಡಿದ್ದ “ಸ್ನೇಹ ಮಿಲನ” ಸಮಾರಂಭದಲ್ಲಿ ಭಾಗಿಯಾಗಿ, ಪಕ್ಷದ ಹಿರಿಯರ ಉಪಸ್ಥಿತಿಯಲ್ಲಿ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ಕೊಡಲಾಯಿತು.
ಭಾರತೀಯ ಜನತಾ ಪಕ್ಷವು ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಸಮಯದಲ್ಲಿ ಪ್ರತಿಯೊಂದು ಸಮುದಾಯದ ಪ್ರಗತಿಗೆ ಅತ್ಯುನ್ನತ ಕೊಡುಗೆ ನೀಡಿದೆ. ನೂರಾರು ಐತಿಹಾಸಿಕ ಯೋಜನೆಗಳು ಜಾರಿಗೆ ತಂದು ಸಮುದಾಯಗಳನ್ನು ಮುಖ್ಯವಾಹಿನಿಗೆ ತಂದು ನಿಲ್ಲಿಸುವ ಪ್ರಾಮಾಣಿಕ ಪ್ರಯತ್ನ ನಡೆಸಿದೆ. ಅಂತ್ಯೋದಯ ಪರಿಕಲ್ಪನೆಯಡಿ ಪ್ರತಿ ಹಂತದಲ್ಲೂ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ಮುಟ್ಟಿಸುವ ಅವಿರತ ಶ್ರಮ ನಡೆದಿದೆ. ಜಾತಿ-ಬೇದ ಮರೆತು ರಾಜಕೀಯವಾಗಿ ಎಲ್ಲಾ ಸಮುದಾಯಗಳ ಮುಖಂಡರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಮೂಲಕ ಭದ್ರನೆಲೆ ಕಲ್ಪಿಸಿಕೊಡಲಾಗಿದೆ ಎಂದು ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳಲಾಯಿತು.
ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ ನಮ್ಮದು. ಒಂದು ರಾಜ್ಯ ಹಲವು ಜಗತ್ತು ಹೊಂದಿರುವ ರಾಜ್ಯ ನಮ್ಮದು. ಈ ಒಂದು ರಾಜ್ಯದಲ್ಲಿ ಮಲೆನಾಡಿನ ಹೆಬ್ಬಾಗಿಲ ರಾಜಧಾನಿಯಾಗಿ ನಮ್ಮ ಹೆಮ್ಮೆಯ ಶಿವಮೊಗ್ಗ ಹೆಗ್ಗಳಿಕೆ ಪಡೆದಿದೆ. ಇಂತಹ ಶ್ರೀಮಂತ ಸಾಂಸ್ಕೃತಿಕ ಹಾಗೂ ವೈವಿಧ್ಯಮಯ ಜಿಲ್ಲೆಯಲ್ಲಿ ವಿವಿಧ ಸಮುದಾಯಗಳು ತನ್ನ ಭದ್ರ ಅಡಿಪಾಯ ಹಾಕಿಕೊಂಡು ಜಿಲ್ಲೆಯ ಪ್ರಗತಿಗೆ ತನ್ನದೇ ಆದ ಕೊಡುಗೆ ನೀಡುತ್ತಿದ್ದು ನಮಗೆಲ್ಲ ಸಂತೋಷ ಹಾಗೂ ಹೆಮ್ಮೆ ತರುವ ವಿಚಾರವಾಗಿದ್ದು,ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಂದಿನಂತೆ ಅಭೂತಪೂರ್ವ ಗೆಲುವಿಗೆ ಸಹಕರಿಸುವಂತೆ ಈ ಮೂಲಕ ತಮ್ಮ ಸೇವೆ ಮಾಡಲು ಇನ್ನೂ ಹೆಚ್ಚಿನ ಬಲ ಕೊಡುವಂತೆ ಪ್ರೀತಿ ಪೂರ್ವಕವಾಗಿ ಆಗ್ರಹಪಡಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯರಾದ ಶ್ರೀ ಸಿದ್ಧರಾಮಯ್ಯ ಅವರು, ಶ್ರೀ ಭಾನುಪ್ರಕಾಶ್ ಅವರು, ಶ್ರೀ ರುದ್ರೇಗೌಡ ಅವರು, ಶ್ರೀ ಆರಗ ಜ್ಞಾನೇಂದ್ರ ಅವರು, ಶ್ರೀ ರಾಮಚಂದ್ರ ಅವರು, ಶ್ರೀ ಸತೀಶ್ ಅವರು, ಶ್ರೀ ಚನ್ನಬಸಪ್ಪ ಅವರು, ಶ್ರೀ ಅರುಣ್ ಅವರು, ಶ್ರೀ ಕುಮಾರಸ್ವಾಮಿ ಅವರು, ಶ್ರೀ ಕಡಿದಾಳು ಮಂಜುನಾಥ್ ಅವರು, ಶ್ರೀ ರಾಮಕೃಷ್ಣ ಸೇರಿದಂತೆ ಪಕ್ಷದ ಇನ್ನೂ ಅನೇಕ ಗಣ್ಯಮಾನ್ಯರು ಉಪಸ್ಥಿತರಿದ್ದರು.