ಸರ್ಕಾರಿ ಆಸ್ಪತ್ರೆಗಳೆಂದರೆ ಮೂಗು ಮುರಿಯುವ ಜನರೇ ನೀವು ಓದಲೇ ಬೇಕಾದ ಸ್ಟೋರಿ

ಆಗುಂಬೆಯ ಲೊಂದು ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರ ಸರ್ಕಾರಿ ಆಸ್ಪತ್ರೆ ಎಂದರೆ ಅವ್ಯವಸ್ಥೆಯ ಆಗರವೆಂದು ನಿಮ್ಮ ಅನಿಸಿಕೆ ಇದ್ದರೆ, ನಿಮ್ಮ ಅನಿಸಿಕೆ ಸುಳ್ಳು ಮಾಡುವ ಪರಿಸರ ಆಗುಂಬೆ ಆಸ್ಪತ್ರೆಯಲ್ಲಿ, ಶುಚಿತ್ವದಲ್ಲಿ ನೂರಕ್ಕೆ ನೂರು ಅಂಕ ಕೊಡಬಹುದಾದ ಆಸ್ಪತ್ರೆ. ಆಗುಂಬೆಯ ಆರೋಗ್ಯ ಕೇಂದ್ರದ ಪ್ರಶಂಸೆ ಮಾಡಿದ್ದರೆ ಅದು ತಪ್ಪು ಎನ್ನುವ ಪಾಪ ಪ್ರಜ್ಞೆ ಕಾಡದೇ ಇರದು. ಆಸ್ಪತ್ರೆಯ ಆವರಣದಲ್ಲಿ ಕಾಣಿಸುವ ಬೋನ್ಸಾಯ್ ಗಿಡದ ಕುಂಡಗಳು ನಿಮ್ಮನ್ನು ಸ್ವಾಗತಿಸುತ್ತದೆ. ನೀವು ಒಳಗೆ ಬರುತ್ತಿದ್ದಂತೆ ನಿಮ್ಮನ್ನು ವಿಚಾರಿಸುವ ಸಿಬ್ಬಂದಿ ಯಾವುದೇ ಖಾಸಗಿ ಆಸ್ಪತ್ರೆಗೆ ಕಡಿಮೆ ಇಲ್ಲದ ಅನುಭವ.ಈ ಕೇಂದ್ರದಲ್ಲಿ ಗಮನ ಸೆಳೆದದ್ದು, ವಿಶಿಷ್ಟವಾದ ಒನ್ ಮಿನಿಟ ಹವರ ಗ್ಲಾಸ್ ಇಲ್ಲಿ, ಚುಚ್ಚುಮದ್ದು ಕೊಟ್ಟ ನಂತರ 1 ನಿಮಿಷ ಕಾಯುವುದಕ್ಕಾಗಿ ವಿನ್ಯಾಸ ಮಾಡಿದ ಕರ್ತನ ಹೆಸರು ಸಂಜೀವ, ಫಾರ್ಮಸಿಸ್ಟ್ ಆಗಿರುವ ಮೂಲತಃ ಸೊರಬದ ಇವರು ಕಾಯಾ ವಾಚಾ ಮನಸಾ ಸರ್ಕಾರಿ ಕೆಲಸವನ್ನು ಮಾಡುತ್ತಿದ್ದಾರೆ ಎನ್ನುವುದಕ್ಕೆ ಇವರ ಕಲಾತ್ಮಕ ವಸ್ತುಗಳೇ ಸಾಕ್ಷಿ .ಇನ್ನೂ ವೈದ್ಯಾ ಧಿಕಾರಿ ಅನಿಕೇತನ ರವರು ನೇತೃತ್ವದಲ್ಲಿ ಸದಾ ಎಲ್ಲರಿಗೂ ಸ್ಪಂದಿಸುವ ಸಿಬ್ಬಂದಿ ವರ್ಗಕ್ಕೆ ನಮ್ಮ ಪ್ರಜಾಶಕ್ತಿ ಟೀಮ್ ನ ಒಂದು ಸಲಾಂ ಟೀಮ್ ನ ಸಲಾಂ.ಎಲ್ಲಾ ಸರ್ಕಾರಿ ಆರೋಗ್ಯ ಕೇಂದ್ರಗಳು ಕೂಡ ಕರ್ನಾಟಕದ ಚಿರಾಪುಂಜಿ ಆಗುಂಬೆಯ ಪ್ರಾಥಮಿಕ ಕೇಂದ್ರದಂತಾಗಲಿ ಎಂಬ ಆಶಯ ದೊಂದಿಗೆ ಟೀಮ್ ಪ್ರಜಾಶಕ್ತಿ.